alex Certify ಏರ್‌ ಇಂಡಿಯಾ ಬಂಡವಾಳ ವಿನಿಯೋಗ: ಬಾಂಬೆ ಹೌಸ್‌ ಗೆ ಮರಳಲು ಸಜ್ಜಾದ ʼಮಹಾರಾಜʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏರ್‌ ಇಂಡಿಯಾ ಬಂಡವಾಳ ವಿನಿಯೋಗ: ಬಾಂಬೆ ಹೌಸ್‌ ಗೆ ಮರಳಲು ಸಜ್ಜಾದ ʼಮಹಾರಾಜʼ

ಭಾರತದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾದ ಬಂಡವಾಳ ವಿನಿಯೋಗವು ಜನವರಿ 27ರಂದು ಜರುಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಏರ್‌ ಇಂಡಿಯಾದ ಸ್ವಾಮ್ಯತ್ವವು ಟಾಟಾ ಸಮೂಹಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದೆ.

ಕಂಪನಿಯ ಖರೀದಿಗೆ ಕಳೆದ ವರ್ಷ ಹಮ್ಮಿಕೊಂಡಿದ್ದ ಹರಾಜಿನಲ್ಲಿ ಟಾಟಾ ಬಿಡ್‌ ಅನ್ನು ಜಯಿಸಿತ್ತು. ಏರ್‌ ಇಂಡಿಯಾದ ಕ್ಲೋಸಿಂಗ್ ಬ್ಯಾಲೆನ್ಸ್‌ ಶೀಟ್‌ ಅನ್ನು ಜನವರಿ 24ರಂದು ಒದಗಿಸಲಾಗಿದ್ದು, ಟಾಟಾ ಸಮೂಹ ಇದನ್ನು ಗಮನಿಸಿ, ಬುಧವಾರದಂದು ಅಗತ್ಯ ಮಾರ್ಪಾಡುಗಳನ್ನು ಮಾಡಲಿದೆ ಎಂದು ಏರ್‌ ಇಂಡಿಯಾ ನಿರ್ದೇಶಕ ವಿನೋದ್ ಹೆಜಮಾಡಿ ತಿಳಿಸಿದ್ದಾರೆ.

ಕಡಿಮೆ ದುಡ್ಡಲ್ಲಿ ವಿಮಾನವೇರುವವರಿಗೆ ಶುಭ ಸುದ್ದಿ: ಗಣರಾಜ್ಯೋತ್ಸವಕ್ಕೆ ಬಂಪರ್ ಆಫರ್, 926 ರೂ.ನಲ್ಲಿ ವಿಮಾನ ಪ್ರಯಾಣ..!

“ನಮ್ಮ ಇಲಾಖೆಗೆ ಮುಂದಿನ ಮೂರು ದಿನಗಳು ಬಹಳ ಸವಾಲಿದ್ದಾಗಿರಲಿದ್ದು, ಈ ಕಡೆಯ 3-4 ದಿನಗಳಲ್ಲಿ ನಿಮ್ಮಿಂದ ಸಾಧ್ಯವಾದ ಉತ್ತಮ ಪ್ರದರ್ಶನ ತೋರಲು ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ನಮಗೆ ಕೊಟ್ಟಿರುವ ಕೆಲಸ ಮುಗಿಸಲು ತಡರಾತ್ರಿವರೆಗೂ ನಾವು ಕೆಲಸ ಮಾಡಬೇಕಾಗಿ ಬರಬಹುದು. ನಾನು ನಿಮ್ಮೆಲ್ಲರ ಸಹಕಾರ ಕೋರುತ್ತೇನೆ,” ಎಂದು ಸಂಸ್ಥೆಯ ಉದ್ಯೋಗಿಗಳಿಗೆ ಹೆಜಮಾಡಿ ಪತ್ರದ ಮುಖೇನ ಕೇಳಿಕೊಂಡಿದ್ದಾರೆ.

ಟಾಟಾ ಸಮೂಹದ ಅಂಗ ಸಂಸ್ಥೆಯಾಧ ಟ್ಯಾಲೇಸ್ ಪ್ರೈ ಲಿ.ಗೆ ಏರ್‌ ಇಂಡಿಯಾವನ್ನು 18,000 ಕೋಟಿ ರೂಪಾಯಿಗಳಿಗೆ ಅಕ್ಟೋಬರ್‌ 8ರಂದು ಭಾರತ ಸರ್ಕಾರ ಮಾರಾಟ ಮಾಡಿದೆ. ಈ ಡೀಲ್ ಸಂಬಂಧ ಮಿಕ್ಕ ಔಪಚಾರಿಕ ಪ್ರಕ್ರಿಯೆಗಳನ್ನು ಮುಂದಿನ ಕೆಲ ದಿನಗಳಲ್ಲಿ ಮಾಡಿ ಮುಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದು, ಈ ವಾರಾಂತ್ಯದ ವೇಳೆಗೆ ಸಂಸ್ಥೆಯನ್ನು ಟಾಟಾ ಸಮೂಹಕ್ಕೆ ಒಪ್ಪಿಸುವುದಾಗಿ ಹೇಳಿದ್ದಾರೆ.

ಡೀಲ್‌ನ ಭಾಗವಾಗಿ, ಟಾಟಾ ಸಮೂಹಕ್ಕೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಅನ್ನೂ ಒಪ್ಪಿಸಲಿದ್ದು, ಏರ್‌ ಇಂಡಿಯಾದ ಗ್ರೌಂಡ್ ನಿರ್ವಹಣಾ ಅಂಗ ಸ್ಟಾಟ್ಸ್‌ನ 50%ನಷ್ಟು ಪಾಲನ್ನು ಸಮೂಹಕ್ಕೆ ಕೊಡಲಾಗುವುದು. ಸ್ಪೈಸ್‌ಜೆಟ್‌ ಮುಂದಿಟ್ಟ 15,100 ಕೋಟಿ ರೂಪಾಯಿಗಳ ಬಿಡ್‌ ಅನ್ನು ಮೀರಿದ್ದ ಟಾಟಾ ಸಮೂಹ, ಏರ್‌ ಇಂಡಿಯಾದ 100% ಪಾಲನ್ನು ತನ್ನದಾಗಿಸಿಕೊಂಡಿತ್ತು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...