alex Certify ಒಂದು ನಿಮಿಷದಲ್ಲಿ ಕೈಬೆರಳ ತುದಿ ಮೇಲೆ 109 ಪುಶ್‌-ಅಪ್….! ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ಮಣಿಪುರ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ನಿಮಿಷದಲ್ಲಿ ಕೈಬೆರಳ ತುದಿ ಮೇಲೆ 109 ಪುಶ್‌-ಅಪ್….! ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ಮಣಿಪುರ ಯುವಕ

ಎರಡೂ ಹಸ್ತಗಳ ಮೇಲೆ ಮೈ ಊರಿಕೊಂಡು ಪುಶ್‌-ಅಪ್ ಮಾಡುವುದೇ ದೊಡ್ಡ ಸವಾಲಾಗಿರುವ ವೇಳೆ ಮಣಿಪುರದ ನಿರಂಜೋಯ್ ಸಿಂಗ್ ಹೆಸರಿನ 24ರ ಹರೆಯದ ಯುವಕನೊಬ್ಬ ತನ್ನ ಬೆರಳ ತುದಿಗಳ ಮೇಲೆ ದೇಹದ ಭಾರವನ್ನು ಬಿಟ್ಟು ಒಂದು ನಿಮಿಷದಲ್ಲಿ 109 ಪುಶ್‌-ಅಪ್ ಮಾಡಿದ್ದಾನೆ!

ಎರಡು ಬಾರಿ ಗಿನ್ನೆಸ್ ವಿಶ್ವ ದಾಖಲೆಗೆ ಭಾಜನರಾಗಿರುವ ನಿರಂಜೋಯ್ ಈ ಹಿಂದೆ ತಾವೇ ನಿರ್ಮಿಸಿದ್ದ 105 ಪುಶ್‌-ಅಪ್‌ಗಳ ದಾಖಲೆಯನ್ನು ಮೆಟ್ಟಿ ನಿಂತಿದ್ದಾರೆ. ಇಂಫಾಲದಲ್ಲಿರುವ ಅಜ಼್ಟೆಕ್ಸ್‌ ಸ್ಪೋರ್ಟ್ ಮಣಿಪುರ್‌‌ನ ಸ್ಟುಡಿಯೋದಲ್ಲಿ ಆಯೋಜಿಸಲಾಗಿತ್ತು.

ಜೀರ್ಣಕ್ರಿಯೆ ಸುಲಭಗೊಳಿಸಲು ಸೇವಿಸಿ ಈ ಆಹಾರ

ಖುದ್ದು ಫಿಟ್ನೆಸ್ ಪ್ರಿಯರಾದ ಕೇಂದ್ರ ಸಚಿವ ಕಿರಣ್‌ ರಿಜಿಜು ನಿರಂಜೋಯ್‌‌ಗೆ ಶುಭಾಶಯ ಕೋರಿದ್ದು, “ಮಣಿಪುರದ ಯುವಕರ ಶಕ್ತಿಯನ್ನು ನೋಡುವುದು ಖುಷಿಯಾಗುತ್ತದೆ. ಒಂದು ನಿಮಿಷದಲ್ಲಿ ಅತ್ಯಂತ ಹೆಚ್ಚಿನ ಪುಶ್‌-ಅಪ್‌ (ಬೆರಳ ತುದಿ) ಮಾಡಿ ಗಿನ್ನೆಸ್ ವಿಶ್ವ ದಾಖಲೆ ಮುರಿದ ಟಿ. ನಿರಂಜೋಯ್ ಸಿಂಗ್ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ,” ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...