ಮಡಿಕೇರಿ: ಕರ್ನಾಟಕ ಕೈಗಾರಿಕಾ ಸಂಸ್ಥೆಗಳ(ರಾಷ್ಟ್ರೀಯ ಹಬ್ಬ ಮತ್ತು ರಜಾ ದಿನಗಳ) ಕಾಯ್ದೆ 1963 ರ ಕಲಂ 3 ಹಾಗೂ ಕರ್ನಾಟಕ ನಿಯಮಗಳು 1964 ರ ನಿಯಮ 9 ರ ಮೇರೆಗೆ ಕೊಡಗು ಜಿಲ್ಲೆಯಾದ್ಯಂತ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು, ಹೋಟೆಲ್, ರೆಸ್ಟೋರೆಂಟ್‍ಗಳು, ರೆಸಾರ್ಟ್‍ಗಳು, ಕಾರ್ಖಾನೆಗಳು, ಕೈಗಾರಿಕಾ ಸಂಸ್ಥೆಗಳು, ಪ್ಲಾಂಟೇಷನ್‍ಗಳು ಹಾಗೂ ಇತರೆ ಸಂಸ್ಥೆಗಳು ಜನವರಿ, 26 ರ ಗಣರಾಜ್ಯೋತ್ಸವ ದಿನದಂದು ಕಡ್ಡಾಯವಾಗಿ ತಮ್ಮಲ್ಲಿ ಕೆಲಸ ಮಾಡುವ ನೌಕರರಿಗೆ ವೇತನ ಸಹಿತ ರಜೆ ನೀಡಲು ಸೂಚಿಸಿದೆ.
ತಪ್ಪಿದಲ್ಲಿ ಕಾಯ್ದೆ ಮತ್ತು ನಿಯಮಗಳ ಉಲ್ಲಂಘನೆಗಾಗಿ ಸಂಬಂಧಿಸಿದವರ ವಿರುದ್ಧ ಕಾಯ್ದೆ ಮತ್ತು ನಿಯಮಗಳಡಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ.