ಹೊಸದಾಗಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಾತಿ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಉಸ್ತುವಾರಿ ಬದಲಾವಣೆಯ ಮೂಲಕ ಸಚಿವರಿಗೆ ಟೆಸ್ಟಿಂಗ್ ಡೋಸ್ ನೀಡಿದ್ದಾರೆ.
ವಲಸಿಗರು ಮತ್ತು ಹಿರಿಯ ಸಚಿವರನ್ನು ಕೈಬಿಡುವ ಮೊದಲು ಪರೀಕ್ಷಾರ್ಥ ಪ್ರಯೋಗ ನಡೆಸಿದ್ದಾರೆ. ತವರು ಜಿಲ್ಲೆಗಳನ್ನು ಬದಲಾವಣೆ ಮಾಡಿದರೆ ಯಾವ ರೀತಿ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ತಿಳಿಯಲು ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಲಾಗಿದೆ. ಸಚಿವ ಸಂಪುಟ ಪುನಾರಚನೆ ವೇಳೆ ಇದೇ ರೀತಿ ಸಚಿವರನ್ನು ಬದಲಿಸಿದರೆ ಯಾವ ರೀತಿ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ತಿಳಿಯಲು ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.
ಸಚಿವ ಸಂಪುಟ ಪುನಾರಚನೆ ವೇಳೆ ಸಚಿವರನ್ನು ಕೈಬಿಟ್ಟರೆ ಏನಾಗುತ್ತದೆ? ಯಾವ ಬೆಳವಣಿಗೆ ಆಗಬಹುದೆಂದು ಅಂದಾಜಿಸಲು ಅನೇಕ ಸಚಿವರ ಉಸ್ತುವಾರಿ ಜಿಲ್ಲೆಗಳನ್ನು ಬದಲಾಯಿಸಲಾಗಿದೆ. ಉಸ್ತುವಾರಿ ಜಿಲ್ಲೆಗಳ ಹಂಚಿಕೆಯ ಬಗ್ಗೆ ಸಮಾಧಾನ ಇಲ್ಲದಿದ್ದರೂ, ಪಕ್ಷದ ನಿರ್ಧಾರ ಪಾಲಿಸಲೇಬೇಕು ಎಂಬುದು ಹಲವು ಸಚಿವರಿಗೆ ಅನಿವಾರ್ಯವಾಗಿದೆ.
28 ಜಿಲ್ಲಾ ಉಸ್ತುವಾರಿ ಸಚಿವರನ್ನು ಸರ್ಕಾರ ನೇಮಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು ನಗರ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಬೆಂಗಳೂರು ನಗರ ಉಸ್ತುವಾರಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾರಿಗೂ ನೀಡದೆ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಭಾರಿ ಪೈಪೋಟಿ ಇದ್ದ ಬೆಂಗಳೂರು ನಗರ ಉಸ್ತುವಾರಿಯನ್ನು ಯಾರಿಗೂ ನೀಡಿಲ್ಲ.
ಕೊನೆಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಪಡೆಯುವಲ್ಲಿ ಶ್ರೀರಾಮುಲು ಯಶಸ್ವಿಯಾಗಿದ್ದಾರೆ. ಆರ್. ಅಶೋಕ್ ಮತ್ತು ಮಾಧುಸ್ವಾಮಿ ಅವರಿಗೆ ಉಸ್ತುವಾರಿ ನೀಡಿಲ್ಲ. ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಕೈತಪ್ಪಿದ್ದು, ಚಿಕ್ಕಮಗಳೂರು ಉಸ್ತುವಾರಿ ನೀಡಲಾಗಿದೆ. ನಾರಾಯಣಗೌಡರಿಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಹೊಣೆ ವಹಿಸಲಾಗಿದೆ. ಆನಂದ್ ಸಿಂಗ್ ಗೆ ಕೊಪ್ಪಳ ಉಸ್ತುವಾರಿ ನೀಡಲಾಗಿದೆ.