alex Certify ಬೆಂಗಳೂರಲ್ಲಿ ಹೆಚ್ಚಾದ ರಸ್ತೆ ಅಪಘಾತ, 2021ರಲ್ಲಿ 99 ಪಾದಚಾರಿಗಳ ಸಾವು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಲ್ಲಿ ಹೆಚ್ಚಾದ ರಸ್ತೆ ಅಪಘಾತ, 2021ರಲ್ಲಿ 99 ಪಾದಚಾರಿಗಳ ಸಾವು…!

ಬೆಂಗಳೂರಲ್ಲಿ ನಡೆಯುತ್ತಿರುವ ರಸ್ತೆ ಅಪಘಾತಗಳು ಜನರನ್ನ ಆತಂಕಗೊಳ್ಳುವಂತೆ ಮಾಡಿವೆ.‌ ಒಂದು ಕಡೆ ವಾಹನ ಅಪಘಾತಗಳು ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಪಾದಚಾರಿಗಳ ಅಪಘಾತವು ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಏನೆಂದು ಹೇಳಿರುವ ಬೆಂಗಳೂರು ಪೊಲೀಸರು ಅಪಘಾತದಲ್ಲಿ ಸಾವನ್ನಪ್ಪಿರುವವರ ಅಂಕಿಅಂಶದ ಜೊತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಹೌದು, ಇತ್ತೀಚಿಗೆ ನಗರದ ಯಲಹಂಕ ಪ್ರದೇಶದಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಪಾದಚಾರಿಗಳು ದಾರುಣವಾಗಿ ಸಾವನ್ನಪ್ಪಿದ ಘಟನೆಯ ಬಗ್ಗೆ ಕೇಳಿರ್ತಿರಾ‌. ಇವರಿಬ್ಬರು ಮಾತ್ರವಲ್ಲ ಕಳೆದ ವರ್ಷದಿಂದ ಮಹಾನಗರದಲ್ಲಾಗುತ್ತಿರುವ ಪಾದಚಾರಿಗಳ ಸಾವಿಗೆ ಅವರ ಆತುರವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚಿನ ಘಟನೆಗಳಲ್ಲಿ ಮೃತಪಟ್ಟ ಇಬ್ಬರು ರಸ್ತೆದಾಟಲು ನಿಗದಿಪಡಿಸಿದ ಸ್ಥಳ ಬಿಟ್ಟು ರಸ್ತೆ ಮಧ್ಯದಲ್ಲಿ ಹಾದು ಹೋಗಲು ಪ್ರಯತ್ನಿಸಿದ್ದಾರೆ. ಇದರಿಂದ ಅಪಘಾತವಾಗಿ ಸಾವಿಗೀಡಾಗಿದ್ದಾರೆ ಎಂದಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಸಾವನ್ನಪ್ಪಿದ ಪಾದಚಾರಿಗಳು

ರಸ್ತೆ ದಾಟಲು ನಿಗದಿ ಪಡಿಸಿದ ಸ್ಥಳದಲ್ಲಿ ನಡೆದ ಅಪಘಾತ

2019 -120
2020 – 82
2021 – 30

ನಿಗದಿತವಲ್ಲದ ಸ್ಥಳದಲ್ಲಿ ನಡೆದ ಅಪಘಾತ

2019 – 88
2020 – 45
2021 – 69

ಹೌದು ಕಳೆದ ವರ್ಷ 69 ಪಾದಚಾರಿಗಳು, ನಿಗದಿತವಲ್ಲದ ಸ್ಥಳದಲ್ಲಿ ರಸ್ತೆ ದಾಟಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. 2019, 2020ಕ್ಕೆ ಹೋಲಿಸಿದರೆ ಈ ರೀತಿ ಸಾವನ್ನಪ್ಪಿರುವವರ ಸಂಖ್ಯೆ 2021ರಲ್ಲಿ ಹೆಚ್ಚಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಪೊಲೀಸರು, ಅಪಘಾತ ಕಡಿಮೆ ಮಾಡಲು ಜನರಲ್ಲಿ ಅರಿವು ಮೂಡಿಸಲು ಮುಂದಾಗಿದ್ದಾರೆ.

ಮೊದಲು ಅರಿವು ಮೂಡಿಸುವ ಪ್ರಯತ್ನ‌ ಮಾಡಿ, ಆಗಲೂ ಸುಧಾರಣೆಯಾಗದಿದ್ರೆ ಎಲ್ಲೆಂದರಲ್ಲಿ ರಸ್ತೆ ದಾಟುವವರಿಗೆ ದಂಡ ಹಾಕಲು ಚಿಂತನೆ‌ ನಡೆಸಿದ್ದಾರೆ. ಹೀಗಾಗಿ ಇನ್ಮೇಲಾದ್ರು ನಿಮ್ಮ ಸುರಕ್ಷತೆ ಹಾಗೂ ಇತರರ ಸುರಕ್ಷತೆಗಾಗಿ ಜೀಬ್ರಾ ಕ್ರಾಸಿಂಗ್ ನಲ್ಲಿ ಮಾತ್ರ ರಸ್ತೆ ದಾಟಿ.‌

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...