ರಾಷ್ಟ್ರೀಯ ಹೆದ್ದಾರಿಯೂ ಸೇರಿದಂತೆ ಹಿಮಾಚಲ ಪ್ರದೇಶದ ಶಿಮ್ಲಾದ ಸಾಕಷ್ಟು ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಅಷ್ಟೇ ಅಲ್ಲದೇ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕೂಡ ಈ ಕಡೆಗಳಲ್ಲಿ ಸ್ಥಗಿತಗೊಂಡಿದೆ.ಅಂದಹಾಗೆ ಇಷ್ಟೆಲ್ಲ ವ್ಯತ್ಯಯ ಉಂಟಾಗಲು ಕಾರಣ ಹಿಮಪಾತ..!
ಹೌದು..! ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಸದ್ಯ ಹಿಮಪಾತವಾಗುತ್ತಿದೆ. ಹಿಮಪಾತದಿಂದ ಉಂಟಾಗುತ್ತಿರುವ ಅಡೆತಡೆಗಳ ವಿಚಾರವಾಗಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು, ಭಾರೀ ಹಿಮಪಾತದಿಂದಾಗಿ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 731 ರಸ್ತೆಗಳನ್ನು ಮುಚ್ಚಲಾಗಿದೆ. 1365 ವಿದ್ಯುತ್ ಸರಬರಾಜು ಯೋಜನೆಗಳು ಸ್ಥಗಿತಗೊಂಡಿದೆ. 102 ನೀರು ಸರಬರಾಜು ಯೋಜನೆಗಳು ಹಾಗೂ 3220 ವಿದ್ಯುತ್ ಸರಬರಾಜು ಯೋಜನೆಗಳು ಸ್ಥಗಿತಗೊಂಡಿವೆ. ಇದರಲ್ಲಿ 1955 ಕಡೆಗಳಲ್ಲಿ ವಿದ್ಯುತ್ ಪೂರೈಕೆಯನ್ನು ಮರು ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಇನ್ನು ಭಾರತೀಯ ಹವಾಮಾನ ಇಲಾಖೆ ಕೂಡ ಈ ವಿಚಾರವಾಗಿ ಮಾತನಾಡಿದ್ದು ಹಿಮಾಚಲ ಪ್ರದೇಶದ ಕಲ್ಪಾ ಪ್ರದೇಶ ಸೇರಿದಂತೆ ವಿವಿಧ ಕಡೆಗಳಲ್ಲಿ ದಟ್ಟವಾದ ಮಂಜು ಆವರಿಸಿದ್ದು, ಅಲ್ಲಿ ಗೋಚರತೆ 50 ಮೀಟರ್‌ಗೆ ಇಳಿದಿದೆ ಎಂದು ತಿಳಿಸಿದೆ.