alex Certify ಯುರೋಪ್​​ನಲ್ಲಿ ಆಗಲಿದ್ಯಾ ಕೊರೊನಾ ಸಾಂಕ್ರಾಮಿಕದ ಅಂತ್ಯ…..? ವಿಶ್ವ ಆರೋಗ್ಯ ಸಂಸ್ಥೆಯಿಂದ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುರೋಪ್​​ನಲ್ಲಿ ಆಗಲಿದ್ಯಾ ಕೊರೊನಾ ಸಾಂಕ್ರಾಮಿಕದ ಅಂತ್ಯ…..? ವಿಶ್ವ ಆರೋಗ್ಯ ಸಂಸ್ಥೆಯಿಂದ ಮಹತ್ವದ ಮಾಹಿತಿ

ಓಮಿಕ್ರಾನ್​ ರೂಪಾಂತರಿಯು ಕೊರೊನಾ ವೈರಸ್​ ಸಾಂಕ್ರಾಮಿಕವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದೆ. ಬಹುಶಃ ಈ ರೂಪಾಂತರಿಯು ಯುರೋಪ್​​ನಲ್ಲಿ ಕೊನೆಗಾಣಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್​ನ ನಿರ್ದೇಶಕ ಹೇಳಿದ್ದಾರೆ.

ಬಹುಶಃ ನಾವು ಕೊರೊನಾ ಸಾಂಕ್ರಾಮಿಕದ ಕೊನೆಯ ಹಂತದಲ್ಲಿ ಇದ್ದೇವೆ ಎಂದು ಸಂದರ್ಶನವೊಂದರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್​ನ ನಿರ್ದೇಶಕ ಹಾನ್ಸ್​ ಕ್ಲೂಜ್​​ ಹೇಳಿದ್ದಾರೆ. ಮಾರ್ಚ್​ ತಿಂಗಳವರೆಗೆ ಯುರೋಪ್​ನಲ್ಲಿ 60 ಪ್ರತಿಶತ ಜನಸಂಖ್ಯೆ ಓಮಿಕ್ರಾನ್​ ಸೋಂಕಿಗೆ ಒಳಗಾಗಲಿದೆ ಎಂದು ಅವರು ಅಂದಾಜಿಸಿದ್ದಾರೆ.

ಪ್ರಸ್ತುತ ಯುರೋಪ್​​ನಾದ್ಯಂತ ವ್ಯಾಪಿಸಿರುವ ಓಮಿಕ್ರಾನ್​​ ರೂಪಾಂತರಿಯ ಉಲ್ಬಣವು ಕಡಿಮೆಯಾಗಲಿದೆ. ಕೊರೊನಾ ಲಸಿಕೆಗಳಿಂದಾಗಿ ಜನರ ರೋಗ ನಿರೋಧಕ ಶಕ್ತಿಯು ಹೆಚ್ಚಾಗಿದೆ. ಇದಕ್ಕಾಗಿ ಕೊರೊನಾ ಲಸಿಕೆಗಳಿಗೆ ಧನ್ಯವಾದ ಹೇಳಲೇಬೇಕು ಎಂದು ಹಾನ್ಸ್​ ಕ್ಲೂಜ್​​ ಹೇಳಿದ್ದಾರೆ.

ಈ ವರ್ಷದ ಅಂತ್ಯದ ವೇಳೆಗೆ ಕೋವಿಡ್​ 19 ಅಂತ್ಯವಾಗಬಹುದು ಎಂದು ನಾವು ಅಂದಾಜಿಸಿದ್ದೇವೆ ಎಂದು ಹಾನ್ಸ್​​ ಕ್ಲೂಜ್​ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...