ಬೆಂಗಳೂರು: ಪಿಂಚಣಿಯಲ್ಲಿ ಶೇಕಡ 20ರಷ್ಟು ಹೆಚ್ಚಳ ಮಾಡಬೇಕೆಂದು ಸರ್ಕಾರಕ್ಕೆ ನಿವೃತ್ತ ನೌಕರರು ಮನವಿ ಮಾಡಿದ್ದಾರೆ. ವೃತ್ತಿಯಿಂದ ನಿವೃತ್ತರಾಗಿ 80 ವರ್ಷಕ್ಕೆ ಕಾಲಿಟ್ಟ ನೌಕರರಿಗೆ ಪಿಂಚಣಿಯ ಬೇಸಿಕ್ ನಲ್ಲಿ ಶೇಕಡ 20 ರಷ್ಟು ಹೆಚ್ಚಳ ಮಾಡಬೇಕೆಂದು ಮನವಿ ಮಾಡಲಾಗಿದೆ.
ಪಿಂಚಣಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ನೀಡಿದ್ದರೂ, ಸರ್ಕಾರ ಜಾರಿಗೆ ಕ್ರಮ ಕೈಗೊಂಡಿಲ್ಲ. ಇದರಿಂದ 80 ವರ್ಷ ದಾಟಿದ 5000 ಕ್ಕೂ ಅಧಿಕ ನಿವೃತ್ತ ನೌಕರರಿಗೆ ಸಮಸ್ಯೆಯಾಗಿದೆ ಎನ್ನಲಾಗಿದೆ.
80 ವರ್ಷಕ್ಕೆ ಕಾಲಿಟ್ಟವರಿಗೆ ಶೇಕಡ 20 ರಷ್ಟು, 85 ವರ್ಷದಿಂದ 90 ವರ್ಷದ ನಿವೃತ್ತರಿಗೆ ಶೇಕಡ 30ರಷ್ಟು, 90 ರಿಂದ 95 ವರ್ಷದವರಿಗೆ ಶೇಕಡ 40 ರಷ್ಟು, 95 ವರ್ಷದಿಂದ 100 ವರ್ಷದವರೆಗೆ ಶೇಕಡ 50 ರಷ್ಟು ಮತ್ತು 100 ವರ್ಷ ಮೇಲ್ಪಟ್ಟವರಿಗೆ ಶೇಕಡ 100 ರಷ್ಟು ಪಿಂಚಣಿ ಹೆಚ್ಚಳ ಮಾಡಬೇಕೆಂದು ಕೋರ್ಟ್ ಆದೇಶವನ್ನು ಜಾರಿಗೆ ತರಬೇಕೆಂದು ಮನವಿ ಮಾಡಲಾಗಿದೆ.