
ದಾವಣಗೆರೆ: ಫೋಟೋಶೂಟ್ ವೇಳೆ ರೈಲು ಡಿಕ್ಕಿಯಾಗಿ ಯುವಕ ಸಾವು ಕಂಡ ಘಟನೆ ದಾವಣಗೆರೆ ಡಿಸಿಎಂ ಟೌನ್ ಶಿಪ್ ಬಳಿ ನಡೆದಿದೆ.
16 ವರ್ಷದ ಸಚಿನ್ ಮೃತಪಟ್ಟವ ಎಂದು ಹೇಳಲಾಗಿದೆ. ಹಳಿ ಮೇಲೆ ಫೋಟೋ ತೆಗೆಸಿಕೊಳ್ಳುತ್ತಿದ್ದ ವೇಳೆ ಘಟನೆ ನಡೆದಿದೆ. ಬೇರೆ ಟ್ರ್ಯಾಕ್ ಮೇಲೆ ರೈಲು ಹೋಗುತ್ತದೆ ಎಂದುಕೊಂಡಿದ್ದ ಸಚಿನ್ ಒಳ್ಳೆಯ ಬ್ಯಾಗ್ರೌಂಡ್ ಸಿಗುತ್ತದೆ ಎಂದು ಹೇಳಿ ಹಳಿ ಮೇಲೆ ನಿಂತಿದ್ದಾನೆ. ಆತ ನಿಂತುಕೊಂಡಿದ್ದ ಟ್ರ್ಯಾಕ್ ಮೇಲೆಯೇ ರೈಲು ಬಂದಿದೆ.
ರೈಲು ಡಿಕ್ಕಿಯಿಂದ ಸಚಿನ್ ಸ್ಥಳದಲ್ಲೇ ದುರ್ಮರಣವನ್ನಪ್ಪಿದ್ದಾನೆ. ಸ್ನೇಹಿತರೊಂದಿಗೆ ಫೋಟೋಶೂಟ್ ಗೆ ಹೋಗಿದ್ದ ಸಚಿನ್ ಸಾವನ್ನಪ್ಪಿದ್ದು, ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. KTJ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.