alex Certify BIG NEWS: ಮಾತನಾಡಿದ ಮೇಲೆ ದಕ್ಕಿಸಿಕೊಳ್ಳುವ ಯೋಗ್ಯತೆ ಬೇಕು; ಲಂಗು ಲಗಾಮು ಇಲ್ಲದ ನಾಲಿಗೆ ಜಾರುವ ಅಂಥವರಿಂದ ಸಂಸ್ಕೃತಿ ಕಲಿಯಬೇಕಿಲ್ಲ; ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ HDK | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಾತನಾಡಿದ ಮೇಲೆ ದಕ್ಕಿಸಿಕೊಳ್ಳುವ ಯೋಗ್ಯತೆ ಬೇಕು; ಲಂಗು ಲಗಾಮು ಇಲ್ಲದ ನಾಲಿಗೆ ಜಾರುವ ಅಂಥವರಿಂದ ಸಂಸ್ಕೃತಿ ಕಲಿಯಬೇಕಿಲ್ಲ; ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ HDK

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರೆಸಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಸ್ವಯಂ ಘೋಷಿತ ಸಂವಿಧಾನ ಪಂಡಿತ ಸಿದ್ದರಾಮಯ್ಯ ನಮ್ಮ ಪಕ್ಷ ನಮ್ಮ ಬಗ್ಗೆ ಲಘುವಾಗಿ ಮಾತನಾಡಿದ್ದಕ್ಕೆ ನಾನು ಉತ್ತರ ಕೊಟ್ಟಿದ್ದೇನೆ. ಮಾತನಾಡಿದ ಮೇಲೆ ಅದನ್ನು ದಕ್ಕಿಸಿಕೊಳ್ಳುವ ಯೋಗ್ಯತೆಯೂ ಇರಬೇಕಲ್ಲವೇ ? ಆ ಯೋಗ್ಯತೆ ಅವರಿಗಿಲ್ಲ ಎಂದು ಗುಡುಗಿದ್ದಾರೆ.

ಕುಮಾರಸ್ವಾಮಿಯವರ ಹೇಳಿಕೆಗಳೇ ಅವರ ಸಂಸ್ಕೃತಿಯನ್ನು ಹೇಳುತ್ತದೆ ಎಂದಿದ್ದ ಸಿದ್ದರಾಮಯ್ಯ ಹೇಳಿಕೆಗೆ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಹೆಚ್.ಡಿ.ಕೆ. ಸುಮ್ಮನೆ ಮಾತನಾಡುವ ತೆವಲು ನಮಗಿಲ್ಲ, ನಮ್ಮ ಪಕ್ಷದವರನ್ನು ಎಗರಿಸಿಕೊಂಡು ಹೋದ ವ್ಯಕ್ತಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕಾದರೆ ನಮ್ಮ ಪಕ್ಷದ ಬಗ್ಗೆ ಏಕೆ ಮಾತನಾಡಬೇಕು ? ಜೆಡಿಎಸ್ ನ್ನು ತುಮಕೂರಿನಿಂದ ಓಡಿಸಿ ಎಂದಿದ್ದು ಯಾವ ಸಂಸ್ಕೃತಿ ? ಪ್ರಜಾಪ್ರಭುತ್ವದಲ್ಲಿ ಒಂದು ಜಿಲ್ಲೆಯಿಂದ ಒಂದು ಪಕ್ಷವನ್ನು ಓಡಿಸಿ ಎನ್ನುವುದು ಎಂಥಾ ರಾಜಕಾರಣ ? ಎಂದು ಪ್ರಶ್ನಿಸಿದ್ದಾರೆ.

ಲಂಗು ಲಗಾಮು ಇಲ್ಲದೇ ನಾಲಿಗೆ ಜಾರುವ ಇಂಥ ಜನರಿಂದ ನಾನು ಭಾಷೆ, ಸಂಸ್ಕೃತಿ ಬಗ್ಗೆ ಕಲಿಯಬೇಕಿಲ್ಲ. ಸುಳ್ಳಿನ ಸಿದ್ದಪುರುಷನಿಂದ ಭಾಷೆ ಸಂಸ್ಕೃತಿ ಕುರಿತು ಪಾಠವೇ ? ಎಂದು ಕೇಳಿದ್ದಾರೆ.

ನನ್ನನ್ನು ಕಂಡರೆ ಕುಮಾರಸ್ವಾಮಿಗೆ ಭಯ ಎನ್ನುತ್ತಾರೆ. ಇದು ಭ್ರಮೆಯ ಪರಮಾವಧಿ, ಕುಮಾರಸ್ವಾಮಿ ಬಗ್ಗೆ ಮಾತನಾಡಲ್ಲ ಅಂತಾರೆ ಮಾತೆತ್ತಿದರೆ ಕುಮಾರಸ್ವಾಮಿ ಎನ್ನುತ್ತಾರೆ. ಮತ್ತೆ ಸಿಎಂ ಆಗಲ್ಲ ಎಂಬುದು ಖಚಿತವಾದ ಮೇಲೆ ಹತಾಶೆ, ಅಸಹನೆಯಿಂದ ಬೇಯುತ್ತಿದ್ದಾರೆ. ಇದು ವಿಪರೀತಕ್ಕೆ ಹೋಗಿದೆ ಎಂಬುದಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ಅವರು ನೀಡಿದ ಹೇಳಿಕೆಗಳೇ ಸಾಕ್ಷಿ ಎಂದು ಕಿಡಿಕಾರಿದ್ದಾರೆ.

ಚುನಾವಣೆಯಲ್ಲಿ ನಮ್ಮ ತಂದೆ ಸೋತಿದ್ದಾರೆ, ನನ್ನ ಅಣ್ಣ ಸೋತಿದ್ದಾರೆ. ನಾನೂ ಸೋತಿದ್ದೇನೆ. ಸೋತಮೇಲೆ ನಾವ್ಯಾರೂ ಅಧೀರರಾಗಿಲ್ಲ. ಸೋತಿದ್ದಕ್ಕೆ ಕಣ್ಣೀರೂ ಹಾಕಿಲ್ಲ. ಸಿದ್ದಹಸ್ತರ ಕಣ್ಣೀರು ಕೋಡಿಯನ್ನು ಕಂಡ ದೇವೇಗೌಡರು ಇನ್ನೂ ನಮ್ಮ ಜತೆ ಇದ್ದಾರೆ. ಕಮಿಷನ್ ವ್ಯವಹಾರದಲ್ಲಿ ನಾನು ಕ್ಲೀನ್ ಎನ್ನುವ ವಿಪಕ್ಷ ನಾಯಕರೇ ಅರ್ಕಾವತಿ ಆರ್ತನಾದಕ್ಕೆ ಕಾರಣರು ಯಾರು? ಎಂದು ಪ್ರಶ್ನಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...