ಫೈಸಲಾಬಾದ್‌ನಲ್ಲಿ ಮತಾಂಧರಿಂದ ಕಲ್ಲು ತೂರಾಟಕ್ಕೆ ಈಡಾಗಿ ಮೃತಪಟ್ಟ ಶ್ರೀಲಂಕಾ ಮೂಲದ ಪ್ರಜೆಯೊಬ್ಬರ ಕೊಲೆಯನ್ನು ಸಮರ್ಥಿಸಿದ ಯೂಟ್ಯೂಬರ್ ಒಬ್ಬನಿಗೆ ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ನೀಡಿದೆ.
ಡಿಸೆಂಬರ್ 3ರಂದು, ಇಲ್ಲಿನ ಪಂಜಾಬ್ ಪ್ರಾಂತ್ಯದ ಫೈಸಲಾಬಾದ್‌ನ ಗಾರ್ಮೆಂಟ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶ್ರೀಲಂಕಾ ಪ್ರಜೆ ಪ್ರಿಯಾಂತಾ ಕುಮಾರಾ, ಅವರನ್ನು ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆ ತೆಹ್ರೀಕ್-ಎ-ಲಬ್ಬೈಕ್-ಪಾಕಿಸ್ತಾನ್‌ನ (ಟಿಎಲ್‌ಪಿ) 800 ಮಂದಿ ಬೆಂಬಲಿಗರು ಕಲ್ಲು ತೂರಿದ್ದಲ್ಲದೇ ಜೀವಂತವಾಗಿ ಸುಟ್ಟು ಸಾಯಿಸಿದ್ದರು.
ಅಧಿಕಾರಕ್ಕೆ ಬಂದ್ರೆ ಇಬ್ಬರು ಸಿಎಂ, ಮೂವರು ಡಿಸಿಎಂ: AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಘೋಷಣೆ
ಸಿಯಾಲ್ಕೋಟ್ ಮುಹಮ್ಮದ್ ಅಡ್ನಾನ್ ಎಂಬಾತ ಯೂಟ್ಯೂಬ್‌ನಲ್ಲಿರುವ ತನ್ನ ಚಾನೆಲ್‌ನಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ್ದು, ಕುಮಾರಾರ ಬರ್ಬರ ಕೊಲೆಯನ್ನು ಸಮರ್ಥಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ. ಪೊಲೀಸರು ಈತನ ವಿರುದ್ಧ ಎಫ್‌ಐಆರ್ ದಾಖಲಿಸಿ ಗುಜ್ರಾನ್ವಾಲಾದ ಭಯೋತ್ಪಾದನೆ-ನಿಗ್ರಹ ಕೋರ್ಟ್‌ಗೆ ಹಾಜರು ಪಡಿಸಿದ್ದರು.
ಕೋರ್ಟ್‌ನಲ್ಲಿ ಹಾಜರುಪಡಿಸಿದ ತನ್ನ ವಿಡಿಯೋ ಸಾಕ್ಷಿಗೆ ಇಲ್ಲವೆನ್ನದೇ ಇದ್ದ ಅಡ್ನಾನ್‌ಗೆ 10,000 ರೂಪಾಯಿ ದಂಡ ಹಾಗೂ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಹತ್ಯೆ ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಕಂಡು ಬಂದ 85ರಷ್ಟು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಜನವರಿ 31ರಂದು ಈ ಮಂದಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.
ಸಂತ್ರಸ್ತರ ಕುಟುಂಬದ ನೆರವಿಗೆ ಮುಂದಾದ ಸ್ಥಳೀಯ ಉದ್ಯಮಿಗಳ ಸಮುದಾಯವು, ಪ್ರಿಯಾಂತಾ ಮಡದಿಗೆ ಮತ್ತು ಮಕ್ಕಳಿಗೆ $100,000ಗಳನ್ನು ನೀಡಿದ್ದು, ಪ್ರತಿ ತಿಂಗಳು $1,650 ಕೊಡಲು ನಿರ್ಧರಿಸಿದೆ. ಆದರೆ ಪಾಕಿಸ್ತಾನದ ಕೇಂದ್ರಾಡಳಿತ ಅಥವಾ ಪಂಜಾಬ್ ಸರ್ಕಾರ ಸಂತ್ರಸ್ತರ ಕುಟುಂಬಕ್ಕೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ.
ಕ್ರೀಡಾ ಪರಿಕರಗಳ ಉತ್ಪಾದಿಸುವ ಸಿಯಾಲ್ಕೋಟ್ ಜಿಲ್ಲೆಯ ರಾಜ್ಕೋ ಕಾರ್ಖಾನೆಗಳಲ್ಲಿ ಕಳೆದ ಏಳು ವರ್ಷಗಳಿಂದ ಮಹಾ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಪ್ರಿಯಾಂತಾ ಹತ್ಯೆ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಜನಸಾಮಾನ್ಯರ ಬಾಂಧವ್ಯದಲ್ಲಿ ಹುಳಿ ಹಿಂಡಿದಂತಾಗಿದೆ.