ಅಮೆರಿಕದ ಪೆನ್ಸಿಲ್ವೇನಿಯಾದ ಡ್ಯಾನ್ವಿಲ್ಲೆಯಲ್ಲಿ ಪ್ರಯೋಗಾಲಯಕ್ಕೆಂದು ಕೊಂಡೊಯ್ಯುತ್ತಿದ್ದ 100 ಮಂಗಗಳಿದ್ದ ಟ್ರಕ್ ಒಂದು ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಬಚಾವಾಗಿ ಓಡಿಹೋದ ನಾಲ್ಕು ಮಂಗಗಳಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.
ಡಂಪ್ ಟ್ರಕ್ ಒಂದರ ಜೊತೆಗೆ ಮಂಗಗಳಿದ್ದ ಟ್ರಕ್ ಢಿಕ್ಕಿ ಹೊಡೆದಿದ್ದು, ಈ ವೇಳೆ ಅಲ್ಲಿದ್ದ ಮಂಗಗಳು ಅಕ್ಕ ಪಕ್ಕದ ಪ್ರದೇಶಗಳಿಗೆ ಪರಾರಿಯಾಗಿವೆ.
ಇಲ್ಲಿದೆ ಬಿಸಿ ಬಿಸಿ ಮೈಸೂರು ಬೋಂಡಾ ಮಾಡುವ ವಿಧಾನ
ಇವುಗಳ ಪೈಕಿ ನಾಲ್ಕು ಮಂಗಗಳಿಗೆ ಹುಡುಕಾಟ ನಡೆಸಿದ ಪೆನ್ಸಿಲ್ವೇನಿಯಾ ರಾಜ್ಯ ಪೊಲೀಸ್ ಮತ್ತು ಪೆನ್ಸಿಲ್ವೇನಿಯಾ ಗೇಮ್ ಕಮಿಷನ್ ಸಿಬ್ಬಂದಿ ಹೆಲಿಕಾಪ್ಟರ್ ಬಳಸಿಕೊಂಡು ಮೂರು ಮಂಗಗಳನ್ನು ಪತ್ತೆ ಮಾಡಿವೆ. ಇನ್ನೊಂದು ಮಂಗ ಇವರಿಗೆ ಚಳ್ಳೆಹಣ್ಣು ತಿನಿಸಿ ಅಲ್ಲೆಲ್ಲೋ ಅಡ್ಡಾಡುತ್ತಿದೆಯಂತೆ.
ಈ ವಿಚಾರವಾಗಿ ತೀವ್ರ ವಿರೋಧ ವ್ಯಕ್ತಪಡಿಸಿರುವ ಪೇಟಾ ಸಂಸ್ಥೆ. “ಕೋತಿಗಳು ವೈರಾಣು ಮುಕ್ತವಾಗಿವೆ ಎಂದು ಖಾತ್ರಿಪಡಿಸಲು ಯಾವ ಮಾನದಂಡವೂ ಇಲ್ಲ. ಅಮೆರಿಕದ ಪ್ರಯೋಗಾಲಯಗಳಲ್ಲಿರುವ ಮಂಗಗಳಿಗೆ ಟಿಬಿ, ಚಗಾಸ್ ರೋಗ, ಕಾಲೆರಾಗಳಂಥ ಕಾಯಿಲೆಗಳು ಬಂದಿರುವುದಾಗಿ ವರದಿಗಳು ತಿಳಿಸುತ್ತಿವೆ,” ಎಂದಿದ್ದು, “ಈ 100 ಕೋತಿಗಳು ಪ್ರಯೋಗಾಲಯವೊಂದರತ್ತ ಸಾಗಿ ಅಲ್ಲಿ ಬಂಧಿಗಳಾಗಿ, ಹಿಂಸೆಗೆ ಒಳಗಾಗಿ ಕೊಲ್ಲಲ್ಪಡುವ ಕಾರಣ ಅದಾಗಲೇ ಅವುಗಳು ಅಪಾಯದಲ್ಲಿದ್ದವು — ಈಗ ಸಾರ್ವಜನಿಕರಿಗೂ ಅಪಾಯ ಕಾದಿದೆ,” ಎಂದು ತಿಳಿಸಿದೆ.
ತಪ್ಪಿಸಿಕೊಂಡ ನಾಲ್ಕು ಮಂಗಗಳು ಅದಾಗಲೇ ಹೆದರಿದ್ದು, ಗಾಯಗೊಂಡಿರುವ ಸಾಧ್ಯತೆ ಇದ್ದು, ಇದರಿಂದಾಗಿ ಮಾನವರಿಗೆ ಇವುಗಳಿಂದ ವೈರಾಣುಗಳು ಹಬ್ಬುವ ಸಾಧ್ಯತೆ ಇದೆ ಎಂದು ಪೇಟಾ ಆಪಾದಿಸಿದೆ.