ಸ್ವಿಜ಼ರ್ಲೆಂಡ್ನಲ್ಲಿ ಹಾಲಿಡೇ ಮೂಡ್ನಲ್ಲಿರುವ ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಅಲ್ಲಿ ಸ್ಕಿಯಿಂಗ್ ಮಾಡಿದ ಅನುಭವವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಕಪ್ಪು ಬಣ್ಣದ ಪಫ್ಫರ್ ಜಾಕೆಟ್, ಬಿಳಿ ಬಣ್ಣದ ಸ್ವೆಟರ್ ಮತ್ತು ಹೆಡ್ಬ್ಯಾಂಡ್ನಲ್ಲಿ ಕಂಗೊಳಿಸುತ್ತಿರುವ ಸಮಂತಾ, ತನ್ನ ಸ್ಕೀಯಿಂಗ್ ಸೂಚಕರೊಂದಿಗೆ ಫೋಟೋ ತೆಗೆದು ಶೇರ್ ಮಾಡಿಕೊಂಡಿದ್ದಾರೆ.
ಸೌದಿ ಮಹಿಳೆಯರಿಗೆ ಸೈಕ್ಲಿಂಗ್ ಕ್ರೇಜ಼್ ಹುಟ್ಟಿಸುತ್ತಿದ್ದಾರೆ ಈ ಮಹಿಳೆ…!
“ಇವರಿಬ್ಬರ ಕಾರಣದಿಂದ ನಾನಿನ್ನೂ ಬದುಕಿದ್ದೇನೆ,” ಎಂದು ಫೋಟೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ ಸಮಂತಾ. ಸ್ಕೀಯಿಂಗ್ ಮಾರ್ಗಸೂಚಕರಾದ ಕೇಟ್ ಮ್ಯಾಬ್ರಿಡ್ ಮತ್ತು ಆಂಟೋನಿರನ್ನು ಈ ಫೋಟೋಗೆ ಟ್ಯಾಗ್ ಮಾಡಿದ್ದಾರೆ ನಟಿ.
ಇದೇ ವೇಳೆ, ಸ್ವಿಜ಼ರ್ಲೆಂಡ್ನಲ್ಲಿ ಮಂಜಿನ ಆಟದಲ್ಲಿ ಭಾಗಿಯಾಗಿರುವ ತಮ್ಮ ಚಿತ್ರವನ್ನು ಸಮಂತಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.
2021ರಲ್ಲಿ ’ದಿ ಫ್ಯಾಮಿಲಿ ಮ್ಯಾನ್’ ಸೀಸನ್ 2, ಬಾಲಿವುಡ್ ಎಂಟ್ರಿ ಹಾಗೂ ಪುಷ್ಪ ಚಿತ್ರದ ʼಊ ಅಂಟಾವಾʼ ಹಾಡಿನ ಮೂಲಕ ಸಮಂತಾ ಭಾರೀ ಸದ್ದು ಮಾಡಿದ್ದರು.