ನವದೆಹಲಿ: ಪಿಂಚಣಿಗಾಗಿ ತಿಂಗಳುಗಟ್ಟಲೆ ಕಾಯುವ ಅಗತ್ಯವಿಲ್ಲ. ಮಾಸಾಂತ್ಯದೊಳಗೆ ಪಿಂಚಣಿ ಕಡ್ಡಾಯವಾಗಿ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ.
EPFO ಸುತ್ತೋಲೆ ಹೊರಡಿಸಿದ್ದು, ಸುತ್ತೋಲೆ ಪ್ರಕಾರ EPS 95 ಪದ್ಧತಿಯ ಪಿಂಚಣಿದಾರರಿಗೆ ಪ್ರತಿ ತಿಂಗಳ ಕೊನೆಯ ಕೆಲಸದ ದಿನಾಂಕದೊಳಗೆ ಕಡ್ಡಾಯವಾಗಿ ಪಿಂಚಣಿ ವಿತರಿಸಲಾಗುತ್ತದೆ. ಜನವರಿ 13 ರಂದು ಇಪಿಎಫ್ಒ ಸುತ್ತೋಲೆ ಹೊರಡಿಸಿದ್ದು, ತಿಂಗಳ ಕೊನೆಯ ಕೆಲಸದ ದಿನದೊಳಗೆ ಪಿಂಚಣಿಯನ್ನು ಪಿಂಚಣಿದಾರರ ಖಾತೆಗೆ ಕಡ್ಡಾಯವಾಗಿ ಜಮಾ ಮಾಡಬೇಕೆಂದು ತಿಳಿಸಲಾಗಿದೆ. ತಿಂಗಳಿನ ಮೊದಲ ಕೆಲಸದ ದಿನದಿಂದ 5ನೇ ದಿನದವರೆಗೆ ಪಿಂಚಣಿ ವಿತರಣೆಯಾಗಬೇಕು ಎಂದು ಹೇಳಲಾಗಿದೆ.
ಸಕಾಲಕ್ಕೆ ಪಿಂಚಣಿ ದೊರೆಯದೆ ಪಿಂಚಣಿದಾರರಿಗೆ ಸಂಕಷ್ಟ ಎದುರಾಗಿದ್ದ ಹಿನ್ನೆಲೆಯಲ್ಲಿ ಮಾಸಾಂತ್ಯದೊಳಗೆ ಪಿಂಚಣಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದಾಗಿ ಪಿಂಚಣಿದಾರರು ಕಾಯುವ ಅಗತ್ಯ ಇರುವುದಿಲ್ಲ.