alex Certify 12 ವಾರಗಳ ಮೊದಲೇ ಜನಿಸಿತಾ ಪ್ರಿಯಾಂಕಾ ಚೋಪ್ರಾ – ನಿಕ್ ಜೋನಾಸ್​ ಮಗು..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

12 ವಾರಗಳ ಮೊದಲೇ ಜನಿಸಿತಾ ಪ್ರಿಯಾಂಕಾ ಚೋಪ್ರಾ – ನಿಕ್ ಜೋನಾಸ್​ ಮಗು..?

ಪ್ರಿಯಾಂಕ ಚೋಪ್ರಾ ಜೋನಾಸ್​ ಹಾಗೂ ನಿಕ್​ ಜೋನಾಸ್​ ದಂಪತಿ 2019ರ ಡಿಸೆಂಬರ್​ 1ರಂದು ಹಿಂದೂ ಹಾಗೂ ಕ್ರಿಶ್ಚಿಯನ್​​ ಧರ್ಮದ ಪ್ರಕಾರ ವಿವಾಹವಾಗಿದ್ದರು.

ಅಂದಿನಿಂದ ಇಲ್ಲಿಯವರೆಗೂ ಈ ದಂಪತಿ ಲಾಸ್​ ಏಂಜಲೀಸ್​​​ನ ಮನೆಯಲ್ಲಿ ಅತ್ಯುತ್ತಮ ಜೀವನ ನಡೆಸುತ್ತಿದ್ದಾರೆ.

ಇಂದು ತಮ್ಮ ಅಭಿಮಾನಿಗಳಿಗೆ ಶುಭಸುದ್ದಿಯನ್ನು ನೀಡಿರುವ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್​​ ಜೋನಾಸ್​ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ತಮ್ಮ ಜೀವನಕ್ಕೆ ಬರಮಾಡಿಕೊಂಡಿದ್ದಾರೆ. ಅಂದಹಾಗೆ ಮಗು ಗಂಡೋ ಇಲ್ಲ ಹೆಣ್ಣೋ ಎಂಬುದರ ಬಗ್ಗೆ ಯಾವುದೇ ಮಾಹಿತಿಯನ್ನು ದಂಪತಿ ನೀಡಿಲ್ಲ.

ಈ ವಿಚಾರವಾಗಿ ಇನ್​​ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ಪ್ರಿಯಾಂಕ ಚೋಪ್ರಾ, ನಾವಿಂದು ಬಾಡಿಗೆ ತಾಯ್ತನದ ಮೂಲಕ ಮೊದಲ ಮಗುವನ್ನು ಬರಮಾಡಿಕೊಂಡಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ಖಾಸಗಿತನಕ್ಕೆ ನೀವು ಬೆಲೆ ನೀಡುತ್ತೀರಿ ಎಂಬ ನಂಬಿಕೆ ನಮಗಿದೆ ಶೀರ್ಷಿಕೆ ನೀಡಿದ್ದಾರೆ.

ಈ ಸುದ್ದಿ ಕೇಳುತ್ತಿದ್ದಂತೆಯೇ ನಿಕ್​ ಜೋನಾಸ್​ ಹಾಗೂ ಪ್ರಿಯಾಂಕ ಚೋಪ್ರಾ ದಂಪತಿಯ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ಆದರೆ ಮೂಲಗಳ ಪ್ರಕಾರ ಪ್ರಿಯಾಂಕ ಚೋಪ್ರಾ ದಂಪತಿಯ ಮಗು 12 ವಾರಗಳ ಮೊದಲೇ ಜನಿಸಿದೆ ಎನ್ನಲಾಗಿದೆ. ಸೌಥರ್ನ್​ ಕ್ಯಾಲಿಫೋರ್ನಿಯಾದ ಆಸ್ಪತ್ರೆಯಲ್ಲಿ ಮಗು ಜನಿಸಿದೆ. ಅಲ್ಲದೇ ಇದು ಹೆಣ್ಣು ಮಗು ಎನ್ನಲಾಗಿದ್ದು ಅದು ಅವಧಿ ಪೂರ್ಣವಾಗಿ ಜನಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿಯೇ ಇರಿಸಲಾಗಿದೆ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...