ಉಡುಪಿ: ನಡು ರಸ್ತೆಯಲ್ಲೇ ಯುವ ಕಾಂಗ್ರೆಸ್ ನಾಯಕಿ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿ ಚೂರಿ ಇರಿದು ಪರಾರಿಯಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ.
ರೀನಾ ಡಿಸೋಜಾ (35) ಹಲ್ಲೆಗೊಳಗಾದ ಕಾಪು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ. ಗಂಭೀರವಾಗಿ ಗಾಯಗೊಂಡಿರುವ ರೀನಾ ಅವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರೀನಾ ತಮ್ಮ ಮನೆಯ ಬಳಿಯೇ ಇನ್ನೋರ್ವ ಮಹಿಳೆಯೊಂದಿಗೆ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಬಂದ 45 ವರ್ಷದ ವ್ಯಕ್ತಿಯೊಬ್ಬ ಏಕಾಏಕಿ ಚೂರಿ ಇರಿದಿದ್ದಾನೆ. ರೀನಾ ಅವರ ಹೊಟ್ಟೆಯ ಭಾಗಕ್ಕೆ ಚೂರಿ ಇರಿದಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.