alex Certify BIG NEWS: ಓಮಿಕ್ರಾನ್ ಆತಂಕದ ಮಧ್ಯೆ​​ ರೂಪಾಂತರಿಯ ಮತ್ತೊಂದು ಉಪ ಪ್ರಭೇದ ಪತ್ತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಓಮಿಕ್ರಾನ್ ಆತಂಕದ ಮಧ್ಯೆ​​ ರೂಪಾಂತರಿಯ ಮತ್ತೊಂದು ಉಪ ಪ್ರಭೇದ ಪತ್ತೆ..!

ಬ್ರಿಟನ್​​ನ ಸೆಕ್ಯೂರಿಟಿ ಏಜೆನ್ಸಿಯು ಮತ್ತಷ್ಟು ಪ್ರಬಲವಾಗಿ ಹಾಗೂ ಅತೀ ಹೆಚ್ಚು ಹರಡುವ ಓಮಿಕ್ರಾನ್​ ಕೊರೊನಾ ವೈರಸ್​​ ರೂಪಾಂತರದ ಉಪ ಪ್ರಭೇದವನ್ನು ಪತ್ತೆ ಮಾಡಿದೆ. ಈ ಉಪವಂಶಾವಳಿಯ ಬಗ್ಗೆ ಇನ್ನಷ್ಟು ಅಧ್ಯಯನಗಳು ನಡೆಯುತ್ತಿವೆ ಎಂದು ಬ್ರಿಟನ್​​ನ ಹೆಲ್ತ್​ ಸೆಕ್ಯೂರಿಟಿ ಏಜೆನ್ಸಿಯು ಹೇಳಿದೆ.

ಡೆಲ್ಟಾದಿಂದ ಸುಲಭವಾಗಿ ಪ್ರತ್ಯೇಕಿಸಲು ಸಾಧ್ಯವಾಗಬಲ್ಲ ಓಮಿಕ್ರಾನ್​​ನೊಂದಿಗೆ ಕಂಡುಬರುವ ನಿರ್ದಿಷ್ಟ ರೂಪಾಂತರವನ್ನು ಹೊಂದಿಲ್ಲದ BA.2 ಬಗ್ಗೆ ಹೆಚ್ಚಿನ ಸಂಶೋಧನೆಗಳನ್ನು ನಡೆಯುತ್ತಿವೆ ಎಂದು ಬ್ರಿಟನ್​​ನ ಹೆಲ್ತ್​ ಸೆಕ್ಯೂರಿಟಿ ಏಜೆನ್ಸಿಯು ಮಾಹಿತಿ ನೀಡಿದೆ.

ಈಗಾಗಲೇ ಓಮಿಕ್ರಾನ್​ ರೂಪಾಂತರಿಯಿಂದಾಗಿ ವಿಶ್ವಾದ್ಯಂತ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ದೇಶದಲ್ಲೂ ಕೊರೊನಾ ಮೂರನೇ ಅಲೆಯ ಭಯ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ ಓಮಿಕ್ರಾನ್​ನ ಹೊಸ ಪ್ರಭೇದ ಕೂಡ ಕಾಣಿಸಿಕೊಂಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಬ್ರಿಟನ್​​ನಲ್ಲಿ ಓಮಿಕ್ರಾನ್​​ ಉಪ ಪ್ರಬೇಧವಾದ BA.2 ಸೋಂಕಿನ 426 ಪ್ರಕರಣಗಳು ಈಗಾಗಲೇ ಪತ್ತೆಯಾಗಿವೆ. ಕೇವಲ ಬ್ರಿಟನ್​ ಮಾತ್ರವಲ್ಲದೇ ಭಾರತ, ಸ್ವೀಡನ್​, ಡೆನ್ಮಾರ್ಕ್​ಗಳಲ್ಲಿ ಈ ಹೊಸ ಪ್ರಭೇದವು ಪತ್ತೆಯಾಗಿದೆ. ಯುಕೆಎಚ್​ಎಸ್​ಎ ನೀಡಿರುವ ಮಾಹಿತಿಯ ಪ್ರಕಾರ ವಿಶ್ವದ 40 ರಾಷ್ಟ್ರಗಳಲ್ಲಿ ಈಗಾಗಲೇ ಬಿಎ.2 ಉಪಪ್ರಬೇಧದ ಪ್ರಕರಣಗಳು ಕಾಣಿಸಿಕೊಂಡಿವೆ ಎನ್ನಲಾಗಿದೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...