ನಿಮ್ಮ ಬಳಿ ಇ-ಟಿಕೆಟ್ ಇದ್ದು, ನೀವು ಪ್ರಯಾಣಿಸಬೇಕಿದ್ದ ರೈಲು ಯಾವುದೇ ಕಾರಣದಿಂದ ರದ್ದುಗೊಂಡರೆ, ನಿಮ್ಮ ಟಿಕೆಟ್ ರದ್ದುಗೊಳಿಸಲು ನೀವು ಎಲ್ಲಿಯೂ ಹೋಗಬೇಕಾಗಿಲ್ಲ. ರೈಲು ರದ್ದುಗೊಂಡಾಗ ಹಣವನ್ನು ಸ್ವಯಂಚಾಲಿತವಾಗಿ ಮರುಪಾವತಿಸಲಾಗುತ್ತದೆ.
ಹೀಗಾಗಿ, ಟಿಕೆಟ್ ಠೇವಣಿ ರಸೀದಿಯನ್ನು (ಟಿಡಿಆರ್) ಸಲ್ಲಿಸುವ ಅಗತ್ಯವಿಲ್ಲ. ರೈಲು 3 ಗಂಟೆಗಳಿಗಿಂತ ಹೆಚ್ಚು ಕಾಲ ತಡವಾಗಿ ಬಂದರೆ ಮತ್ತು ಪ್ರಯಾಣಿಕರು ಅದರಲ್ಲಿ ಪ್ರಯಾಣಿಸದಿದ್ದರೆ, ಮರುಪಾವತಿ ಪಡೆಯಲು ರೈಲು ಹೊರಡುವ ಮೊದಲು TDR ಅನ್ನು ಸಲ್ಲಿಸಬೇಕಾಗುತ್ತದೆ. ಹಾಗಿದ್ರೆ ಟಿಡಿಆರ್ ಸಲ್ಲಿಸುವುದು ಹೇಗೆ ಎಂಬುದರ ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ.
ಹಂತ 1: TDR ಅನ್ನು ಫೈಲ್ ಮಾಡಲು, IRCTC ವೆಬ್ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ನಲ್ಲಿ ಲಾಗ್ ಇನ್ ಮಾಡಿ, ಮೈ ಅಕೌಂಟ್ ಗೆ ಹೋಗಿ ಮೈ ಟ್ರಾನ್ಸಾಕ್ಷನ್ ಆಯ್ಕೆಯನ್ನು ಆರಿಸಿ, ಫೈಲ್ TDR ಮೇಲೆ ಕ್ಲಿಕ್ ಮಾಡಿ. ಕೌಂಟರ್ ಟಿಕೆಟ್ ಅನ್ನು ಆನ್ಲೈನ್ನಲ್ಲಿ ರದ್ದುಗೊಳಿಸಲು, ಈ ಲಿಂಕ್ ಅನ್ನು ಕ್ಲಿಕ್ ಮಾಡಿ ( https://www.operations.irctc.co.in/ctcan/SystemTktCanLogin.jsf )
ಹಂತ 2: ನಿಮ್ಮ PNR ಸಂಖ್ಯೆ, ರೈಲು ಸಂಖ್ಯೆ ಮತ್ತು ಕ್ಯಾಪ್ಚಾವನ್ನು ಭರ್ತಿ ಮಾಡಿದ ನಂತರ, ಕ್ಯಾನ್ಸಲೇಷನ್ ರೂಲ್ಸ್ ಬಾಕ್ಸ್ ಅನ್ನು ಟಿಕ್ ಮಾಡಿ.
ಹಂತ 3: ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಈಗ ನೀವು ಟಿಕೆಟ್ ಬುಕ್ ಮಾಡುವಾಗ ಫಾರ್ಮ್ನಲ್ಲಿ ನೀಡಿದ ಸಂಖ್ಯೆಗೆ OTP ಅನ್ನು ಸ್ವೀಕರಿಸುತ್ತೀರಿ.
ಹಂತ 4: OTP ನಮೂದಿಸಿದ ನಂತರ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ. ನಿಮ್ಮ PNR ನ ವಿವರಗಳನ್ನು ನೋಡಲು ಈಗ ನಿಮಗೆ ಸಾಧ್ಯವಾಗುತ್ತದೆ.
ಹಂತ 5: PNR ವಿವರಗಳನ್ನು ಪರಿಶೀಲಿಸಿದ ನಂತರ, ಟಿಕೆಟ್ ರದ್ದುಗೊಳಿಸುವ ಆಯ್ಕೆಯನ್ನು ಕ್ಲಿಕ್ ಮಾಡಿ. ಇದರ ನಂತರ, ನಿಮ್ಮ ಪುಟದಲ್ಲಿ ಮರುಪಾವತಿ ಮೊತ್ತವನ್ನು ನೋಡಲು ಸಾಧ್ಯವಾಗುತ್ತದೆ. ಬುಕಿಂಗ್ ಫಾರ್ಮ್ನಲ್ಲಿ ನೀಡಲಾದ ಸಂಖ್ಯೆಯ ಮೇಲೆ ನೀವು ದೃಢೀಕರಣ ಸಂದೇಶವನ್ನು ಸಹ ಪಡೆಯುತ್ತೀರಿ ಅದು PNR ಮತ್ತು ಮರುಪಾವತಿಯ ಮಾಹಿತಿಯನ್ನು ಹೊಂದಿರುತ್ತದೆ.
ರೈಲ್ವೇ ಇಲಾಖೆಯು ತನ್ನ ವೆಬ್ಸೈಟ್ನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ರದ್ದಾದ ರೈಲುಗಳ ಪಟ್ಟಿಯನ್ನು ಹಾಕುತ್ತದೆ. NTES ಆ್ಯಪ್ ನಲ್ಲೂ ಈ ಮಾಹಿತಿ ಸಿಗುತ್ತದೆ. ರೈಲಿನ ಸ್ಥಿತಿಯನ್ನು ತಿಳಿಯಲು ನೀವು ರೈಲ್ವೆ ವೆಬ್ಸೈಟ್ ಅನ್ನು ಪರಿಶೀಲಿಸಬೇಕಾಗುತ್ತದೆ.
ರದ್ದುಗೊಂಡ ರೈಲುಗಳ ಸಂಪೂರ್ಣ ಪಟ್ಟಿಯನ್ನು ನೋಡಲು ಬಯಸಿದರೆ, ರೈಲ್ವೇ ವೆಬ್ಸೈಟ್ನಲ್ಲಿ Exceptional Trains ವಿಭಾಗದ ಮೇಲೆ ಕ್ಲಿಕ್ ಮಾಡಬೇಕು. ನೀವು NTES ಅಪ್ಲಿಕೇಶನ್ನಿಂದಲೂ ಈ ಮಾಹಿತಿಯನ್ನು ಸಂಗ್ರಹಿಸಬಹುದು. ಸಾಮಾನ್ಯವಾಗಿ, ಪ್ರತಿಕೂಲ ಹವಾಮಾನ ಮತ್ತು ಮಂಜಿನಿಂದಾಗಿ ರೈಲುಗಳು ರದ್ದಾಗುತ್ತವೆ. ಗುರುವಾರ, ಭಾರತೀಯ ರೈಲ್ವೇ ಸುಮಾರು 400 ರೈಲುಗಳನ್ನು ರದ್ದುಗೊಳಿಸಿದೆ, ಜೊತೆಗೆ ಹಲವು ರೈಲುಗಳ ಮಾರ್ಗವನ್ನು ಬದಲಾಯಿಸಿದೆ.