alex Certify ʼಓಮಿಕ್ರಾನ್ʼ​​ ಭೀತಿಯಿಂದ ಬೂಸ್ಟರ್​ ಡೋಸ್‌ ತೆಗೆದುಕೊಳ್ಳುತ್ತಿರುವವರಿಗೆ ಭರ್ಜರಿ ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಓಮಿಕ್ರಾನ್ʼ​​ ಭೀತಿಯಿಂದ ಬೂಸ್ಟರ್​ ಡೋಸ್‌ ತೆಗೆದುಕೊಳ್ಳುತ್ತಿರುವವರಿಗೆ ಭರ್ಜರಿ ಗುಡ್‌ ನ್ಯೂಸ್

ವಿಶ್ವದಾದ್ಯಂತ ಕೊರೊನಾ ವೈರಸ್​​​ ಓಮಿಕ್ರಾನ್​ ರೂಪಾಂತರಿಯ ತೀವ್ರಗತಿಯ ಹರಡುವಿಕೆಯ ನಡುವೆ ಅಮೆರಿಕದ ಸೆಂಟರ್​ ಫಾರ್​ ಡಿಸೀಸ್​ ಕಂಟ್ರೋಲ್​ & ಪ್ರಿವೆನ್ಶನ್​​ ಮೂರು ಹೊಸ ಅಧ್ಯಯನಗಳನ್ನು ನಡೆಸಿದ್ದು ಇದರಲ್ಲಿ ಓಮಿಕ್ರಾನ್​ ರೂಪಾಂತರಿಯು ಉಂಟು ಮಾಡಬಲ್ಲ ಅಪಾಯಗಳ ವಿರುದ್ಧ ಬೂಸ್ಟರ್​ ಡೋಸ್​ಗಳನ್ನು 90 ಪ್ರತಿಶತ ಪರಿಣಾಮಕಾರಿಯಾಗಿದೆ ಎಂದು ತಿಳಿದುಬಂದಿದೆ.

ಓಮಿಕ್ರಾನ್​ ರೂಪಾಂತರಿಯ ವಿರುದ್ಧ ಕೊರೊನಾ ಲಸಿಕೆಗಳ ರಕ್ಷಣೆ ಎಂಬ ವಿಷಯದ ಮೇಲೆ ಅಮೆರಿಕದಲ್ಲಿ ನಡೆಸಲಾದ ಮೊದಲ ಅತಿ ದೊಡ್ಡ ಅಧ್ಯಯನ ಇದಾಗಿದೆ. ಶುಕ್ರವಾರ ಪ್ರಕಟವಾದ ಅಧ್ಯಯನದಲ್ಲಿ ಕೊರೊನಾ ಲಸಿಕೆಯನ್ನು ಸ್ವೀಕರಿಸದ ಜನರು ಕೋವಿಡ್​ ಸೋಂಕಿಗೆ ಒಳಗಾಗುವ ಅಪಾಯಗಳು ಹೆಚ್ಚಿರುತ್ತದೆ. ಅಲ್ಲದೇ ಇಂತವರಲ್ಲಿ ಕೊರೊನಾದ ತೀವ್ರ ಲಕ್ಷಣಗಳು ಕಂಡುಬರುವ ಸಾಧ್ಯತೆ ಇರುತ್ತದೆ ಎಂದು ಹೇಳಿದೆ.

ಸಿಡಿಸಿ ಅಧ್ಯಯನ ಹೇಳುವುದೇನು..?

ಕೊರೊನಾ ಲಸಿಕೆಯ ಎರಡು ಡೋಸ್​ಗಳನ್ನು ಸ್ವೀಕರಿಸುವುದು ಓಮಿಕ್ರಾನ್​ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಗಳನ್ನು 57 ಪ್ರತಿಶತದಷ್ಟು ಕಡಿಮೆ ಮಾಡುತ್ತವೆ. ಎರಡನೇ ಡೋಸ್​ ಸ್ವೀಕರಿಸಿದ ಕನಿಷ್ಟ 6 ತಿಂಗಳುಗಳ ಬಳಿಕ ತೆಗೆದುಕೊಳ್ಳುವ ಬೂಸ್ಟರ್​ ಡೋಸ್​ನಿಂದಾಗಿ ಓಮಿಕ್ರಾನ್​ ಅಪಾಯದಿಂದ 90 ಪ್ರತಿಶತದಷ್ಟು ಸುರಕ್ಷಿತವಾಗಿ ಇರಬಹುದಾಗಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...