ನಾವೀಗ ಇನ್ಫ್ಲುಯೆನ್ಸರ್ಗಳು, ವ್ಲಾಗರ್ಗಳು ಮತ್ತು ಯೂಟ್ಯೂಬರ್ಗಳ ಕಾಲದಲ್ಲಿದ್ದೇವೆ. ಇವರುಗಳ ಪೈಕಿ ಅನೇಕರು ನಮಗೆ ಒಳ್ಳೆಯ ಮನರಂಜನೆ ಹಾಗೂ ಜ್ಞಾನ ನೀಡುತ್ತಾ ಬಂದಿದ್ದಾರೆ.
ಆದರೆ ಕೆಲವೊಂದು ವ್ಲಾಗರ್ಗಳು ತಮ್ಮ ವೀಕ್ಷಕರಿಗೆ ಇನ್ನಷ್ಟು ಅಪೀಲಿಂಗ್ ಆಗಿರಲೆಂದು, ಹೆಚ್ಚಿನ ವೀಕ್ಷಣೆಗಳನ್ನು ಪಡೆಯಲೆಂದು ಯಾವ ಮಟ್ಟಕ್ಕೂ ಇಳಿಯುತ್ತಾರೆ. ನೈತಿಕ ಪ್ರಶ್ನೆಗಳನ್ನು ಗಾಳಿಗೆ ತೂರಲೂ ಸಹ ಹಿಂದೇಟು ಹಾಕುವುದಿಲ್ಲ ಇಂಥ ವ್ಲಾಗರ್ಗಳು.
ನಿದ್ದೆಗಣ್ಣಿನಲ್ಲಿ ಕದ್ದ ವಿಚಾರವನ್ನು ಬಾಯಿಬಿಟ್ಟು ಸಿಕ್ಕಿಹಾಕಿಕೊಂಡ ಪತ್ನಿ…!
ಜೋರ್ಡನ್ ಚೆಯೆನ್ನೆ ಹೆಸರಿನ ಲೈಫ್ಸ್ಟೈಲ್ ಮತ್ತು ಫ್ಯಾಶನ್ ಯೂಟ್ಯೂಬರ್ ತನ್ನ ವಿಡಿಯೋವೊಂದರ ಥಂಬ್ನೇಲ್ಗಾಗಿ ಸತ್ತ ನಾಯಿಗಾಗಿ ಅಳುವಂತೆ ನಟನೆ ಮಾಡಲು ತನ್ನ ಮಗನಿಗೆ ಹೇಳುತ್ತಿರುವ ವಿಡಿಯೋವನ್ನು ಅಕಸ್ಮಾತ್ ಆಗಿ ಅಪ್ಲೋಡ್ ಮಾಡಿಬಿಟ್ಟಿದ್ದಾಳೆ.
’ವಿ ಆರ್ ಹಾರ್ಟ್ ಬ್ರೋಕನ್’ ಹೆಸರಿನ ಅಸಲಿ ವಿಡಿಯೋ ಕಳೆದ ವರ್ಷ ಅಪ್ಲೋಡ್ ಮಾಡಲಾಗಿದ್ದು, ಟ್ವಿಟರ್ನಲ್ಲಿ ಇದೀಗ ವೈರಲ್ ಆಗಿರುವ ವಿಡಿಯೋವನ್ನು ಜೋರ್ಡಾನ್ ಅಪ್ಲೋಡ್ ಮಾಡುವ ಉದ್ದೇಶ ಹೊಂದಿರಲಿಲ್ಲ.
ತನ್ನ 9 ವರ್ಷದ ಮಗನನ್ನು ಕ್ಯಾಮೆರಾಗೆ ಹತ್ತಿರ ಬಂದು ಅಳಲು ಹೇಳುತ್ತಿರುವ 30 ವರ್ಷ ವಯಸ್ಸಿನ ವ್ಲಾಗರ್ನನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಅಳುವಂತೆ ನಟಿಸಲು ತನ್ನ ಮಗನಿಗೆ ಈಕೆ ಹೇಳಿಕೊಡುತ್ತಿರುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದಾಗಿದೆ. ವಿಡಿಯೋ ಅಂತ್ಯಗೊಳಿಸುವ ಮುನ್ನ, ತನ್ನ ಮಗನ ಮುಖವನ್ನು ಬಲವಂತವಾಗಿ ಕ್ಯಾಮೆರಾದತ್ತ ತಿರುಗಿಸಿದ್ದಾಳೆ ಈ ವ್ಲಾಗರ್.
ಯೂಟ್ಯೂಬ್ನಲ್ಲಿ ಐದು ಲಕ್ಷಕ್ಕೂ ಹೆಚ್ಚು ಚಂದಾದಾರನ್ನು ಹೊಂದಿರುವ ಜೋರ್ಡಾನ್ ಈ ವಿಡಿಯೋ ವೈರಲ್ ಆದಾಗಿನಿಂದ, ಕಳೆದ ನಾಲ್ಕು ತಿಂಗಳಲ್ಲಿ ಯಾವುದೇ ವಿಡಿಯೋ ಪೋಸ್ಟ್ ಮಾಡಿಲ್ಲ.
https://twitter.com/i/status/1483094225281499143