ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ವಿರಾಟ್ ಕೊಹ್ಲಿ ಮತ್ತೊಮ್ಮೆ ಟಾಪ್ ಟ್ರೆಂಡಿಂಗ್ ಹ್ಯಾಶ್‌ಟ್ಯಾಗ್ ಆಗಿದ್ದಾರೆ. ಆದರೆ ಈ ಬಾರಿ ಬೇಡವಾದ ಕಾರಣದಿಂದ.
ದಕ್ಷಿಣ ಆಫ್ರಿಕಾದ ವಿರುದ್ಧ ಪಾರ್ಲ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದ ವೇಳೆ ಶೂನ್ಯಕ್ಕೆ ಔಟಾದ ಕೊಹ್ಲಿ, ಇದೇ ಮೊದಲ ಬಾರಿಗೆ ಏಕದಿನ ಪಂದ್ಯವೊಂದರಲ್ಲಿ ಸ್ಪಿನ್ನರ್‌ಗೆ ಡಕ್‌ಔಟ್ ಆಗಿದ್ದಾರೆ.
ಚಿತ್ರ ನಿರ್ಮಾಪಕನಾಗುವ ಕನಸು ಕಂಡಿದ್ದರು ಈ ಖ್ಯಾತ ಉದ್ಯಮಿ…!
ಒಟ್ಟಾರೆ 14 ಬಾರಿ ಶೂನ್ಯಕ್ಕೆ ಔಟ್ ಆಗಿರುವ ಕೊಹ್ಲಿ ಇದೇ ಮೊದಲ ಬಾರಿಗೆ ಸ್ಪಿನ್ನರ್‌ಗೆ ಹೀಗೆ ಔಟಾಗಿದ್ದಾರೆ. ಬಹಳ ದಿನಗಳಿಂದ ಅಂತಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಗಳಿಸದೇ ಇರುವ ಕೊಹ್ಲಿ, ಕಳೆದ ಕೆಲ ದಿನಗಳಿಂದ ಬ್ಯಾಟಿಂಗ್ ಆಡಲು ಇಳಿದಾಗೆಲ್ಲಾ ಶತಕ ನಿರೀಕ್ಷೆಯ ಭಾರ ಹೊರುವಂತಾಗಿದೆ. ಇದೇ ವಿಚಾರವಾಗಿ ನೆಟ್ಟಿಗರ ಟ್ರೋಲಿಂಗ್ ಮತ್ತು ಮೀಮ್‌ಗಳಿಗೆ ಆಹಾರವಾಗಿಬಿಟ್ಟಿದ್ದಾರೆ ಮಾಜಿ ನಾಯಕ.
ಇದೇ ವೇಳೆ, ಏಕದಿನ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಶೀಘ್ರವೇ ಫಾರ್ಮ್ ಕಂಡುಕೊಳ್ಳುವುದು ಖಚಿತ ಎಂದು ಅವರ ಅಭಿಮಾನಿ ನೆಟ್ಟಿಗರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸರಣಿಯ ಮೊದಲ ಪಂದ್ಯ ಸೋತಿದ್ದ ಭಾರತಕ್ಕೆ ಮಾಡು ಇಲ್ಲವೇ ಮಡಿ ಆಗಿದ್ದ ಈ ಪಂದ್ಯದಲ್ಲೂ ಹೀನಾಯ ಸೋಲು ಎದುರಾಗಿದ್ದು, ಟೆಸ್ಟ್ ಸರಣಿ ಬಳಿಕ ಏಕದಿನ ಸರಣಿಯನ್ನೂ ಸೋತಿದೆ.