ತಮ್ಮ ಶಿಫ್ಟ್ ಮುಗಿಯುವ ವೇಳೆಗಾಗಲೇ ಉಸ್ಸಪ್ಪಾ ಎನಿಸುವಷ್ಟು ದಣಿದುಬಿಡುವ ಪೈಲಟ್ಗಳಿಗೆ ಓವರ್ಟೈಂ ಕೆಲಸ ಮಾಡುವುದು ಭಾರೀ ಕಷ್ಟವೆಂದು ಬಿಡಿಸಿ ಹೇಳಬೇಕಿಲ್ಲ.
ಪಾಕಿಸ್ತಾನದ ಪೈಲಟ್ ಒಬ್ಬರು ತಾವಿದ್ದ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಬೇಕಾಗಿ ಬಂದ ಬಳಿಕ, ತಮ್ಮ ಶಿಫ್ಟ್ ಮುಗಿದ ಕಾರಣದಿಂದ ಅದನ್ನು ಮತ್ತೆ ಟೇಕಾಫ್ ಮಾಡಲು ಒಪ್ಪದೇ ಇರುವ ಘಟನೆ ಜರುಗಿದೆ.
ಉಪವಾಸ ಮಾಡುವುದರಿಂದ ಸಿಗುತ್ತೆ ಇಷ್ಟೊಂದು ಆರೋಗ್ಯ ಲಾಭ
ಗಲ್ಫ್ ನ್ಯೂಸ್ ಪ್ರಕಾರ, ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ (ಪಿಐಎ) ವಿಮಾನವೊಂದು ಸೌದಿ ಅರೇಬಿಯಾದ ರಿಯಾದ್ನಿಂದ ಇಸ್ಲಾಮಾಬಾದ್ಗೆ ಆಗಮಿಸಬೇಕಿತ್ತು. ಪ್ರಯಾಣದ ವೇಳೆ, ಪಿಕೆ-9754 ವಿಮಾನವು ಪ್ರತಿಕೂಲ ಹವಾಮಾನದ ಕಾರಣ ಸೌದಿಯ ಡಮ್ಮಂನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನವನ್ನು ಮತ್ತೆ ಟೇಕಾಫ್ ಮಾಡುವ ವೇಳೆ ತಮ್ಮ ಶಿಫ್ಟ್ ಮುಗಿದ ಕಾರಣದಿಂದಾಗಿ ಪೈಲಟ್ ಕೆಲಸ ಮುಂದುವರೆಸಲು ನಿರಾಕರಿಸಿದ್ದಾರೆ.
ಈ ವಿಚಾರ ಕೇಳಿದ ಪ್ರಯಾಣಿಕರು ಸಿಟ್ಟಿಗೆದ್ದು, ವಿಮಾನದಿಂದ ಕೆಳಗಿಳಿಯಲು ನಿರಾಕರಿಸಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆ ತಲುಪಿದಾಗ, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಆಗಮಿಸಬೇಕಾಗಿ ಬಂದಿದೆ. ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಹೊಟೇಲ್ ವ್ಯವಸ್ಥೆ ಮಾಡಲಾಗಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಪಿಐಎ ವಕ್ತಾರ, “ವಿಮಾನವನ್ನು ಹಾರಿಸುವ ಮುನ್ನ ಪೈಲಟ್ಗಳಿಗೆ ಸೂಕ್ತವಾದ ವಿಶ್ರಾಂತಿ ಅತ್ಯಗತ್ಯ. ಹಾಗಾಗಿ ಈ ನಿಟ್ಟಿನಲ್ಲಿ ವ್ಯವಸ್ಥೆಗಳನ್ನು ಮಾಡಲಾಗಿದೆ,” ಎಂದಿದ್ದು, ಪ್ರಯಾಣಿಕರು ಅದೇ ದಿನ ಬೇರೊಂದು ವಿಮಾನದಲ್ಲಿ ಇಸ್ಲಾಮಾಬಾದ್ ತಲುಪುವುದನ್ನು ಖಾತ್ರಿಪಡಿಸಿದ್ದಾಗಿ ತಿಳಿಸಿದ್ದಾರೆ.