ಮದುವೆ ಕಾರ್ಯಕ್ರಮ ಅಂದರೆ ಅಲ್ಲಿ ಬಗೆ ಬಗೆಯ ತಿನಿಸು, ಆಡಂಬರಗಳು ಇರೋದು ಸರ್ವೇ ಸಾಮಾನ್ಯ. ಆದರೆ ಆಸ್ಸಾಂನ ದರ್ರಾಂಗ್ ಜಿಲ್ಲೆಯ ಮಂಗಲ್ಡೋಯ್ ಬಳಿಯ ಚಂದುವಾಲ್ಪಾರದ ರಾಮಹರಿ ಗ್ರಾಮದ ವ್ಯಕ್ತಿಯೊಬ್ಬ ತಮ್ಮ ಮದುವೆ ಮಂಟಪದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕ ತಮ್ಮ ಮದುವೆಗೆ ವಿಶೇಷ ಅರ್ಥವನ್ನು ನೀಡಿದ್ದಾರೆ.
ಕುಟುಂಬ ಸದಸ್ಯರ ಬೆಂಬಲದ ಮೇರೆಗೆ ವರ ಫಣೀಂದ್ರ ದೇಕಾ UNITY we the blood donors ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ತನ್ನ ಮದುವೆ ದಿನದಂದು ಏನಾದರೂ ಒಂದು ವಿಶೇಷವಾಗಿ ಮಾಡಬೇಕು ಎಂದುಕೊಂಡಿದ್ದ ಫಣೀಂದ್ರ ಈ ರೀತಿಯಾಗಿ ರಕ್ತದಾನ ಶಿಬಿರವನ್ನು ಆಯೋಜಿಸಿದ್ದಾರೆ. ಅಭಿಯಾನದ ಆರಂಭದಲ್ಲಿ ಸ್ವತಃ ವರ ಫಣೀಂದ್ರ ದೇಕಾ ರಕ್ತದಾನವನ್ನು ಮಾಡಿದ್ದಾರೆ. ಇದಾದ ಬಳಿಕ ಮದುವೆಗೆ ಆಗಮಿಸಿದ ಅತಿಥಿಗಳು ಒಬ್ಬೊಬ್ಬರಾಗಿಯೇ ರಕ್ತದಾನ ಮಾಡಲು ಆರಂಭಿಸಿದ್ದಾರೆ.
ಮದುವೆ ಕಾರ್ಯಕ್ರಮದಲ್ಲಿ ನಡೆದ ರಕ್ತದಾನ ಶಿಬಿರದ ಬಗ್ಗೆ ನನಗೆ ತುಂಬಾನೇ ಖುಷಿ ಇದೆ. ಇದನ್ನು ವರ್ಣಿಸಲು ನನಗೆ ಪದಗಳೇ ಸಿಗುತ್ತಿಲ್ಲ. ಸಾಧ್ಯವಾದಷ್ಟು ಜನರು ರಕ್ತದಾನ ಮಾಡುವ ಮೂಲಕ ಜನರ ಜೀವನವನ್ನು ಕಾಪಾಡಬೇಕು ಎಂದು ಫಣೀಂದ್ರ ದೇಕಾ ಮನವಿ ಮಾಡಿದ್ರು.