ಬೆಂಗಳೂರು: ‘ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಸಾಲದ ಮೇಲಿನ ಕಂತು ಪಾವತಿ ಮುಂದೂಡಿಕೆಗೆ RBI ಇತರ ಬ್ಯಾಂಕುಗಳಿಗೆ ಸುತ್ತೋಲೆ ಹೊರಡಿಸಿದ್ದು, ಅದು ಕಡ್ಡಾಯವಲ್ಲ, ಅದನ್ನು ಗ್ರಾಹಕರ ಹಕ್ಕು ಎಂದು ಪರಿಗಣಿಸುವಂತಿಲ್ಲ.’
ಹೀಗೆಂದು ಮೊರಾಟೋರಿಯಂ ಅವಧಿಯ ಸಾಲದ ಕಂತು ಪಾವತಿ ಮುಂದೂಡಿಕೆ ಬಗ್ಗೆ ಹೈಕೋರ್ಟ್ ಆದೇಶ ನೀಡಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾಲದ ಕಂತು ಪಾವತಿ ಮುಂದೂಡಿಕೆಗೆ ಸೂಚನೆ ನೀಡಿದ್ದು, ಇದು ಮಾರ್ಗಸೂಚಿ ಮಾತ್ರ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಸಾಲದ ಕಂತು ಪಾವತಿ ಮುಂದೂಡಿಕೆ ಸುತ್ತೋಲೆ ಕಡ್ಡಾಯವಲ್ಲ ಮತ್ತು ಅದನ್ನು ಗ್ರಾಹಕರ ಹಕ್ಕು ಎಂದು ದಂಡಿಸುವಂತಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಏಕಸದಸ್ಯ ಪೀಠ ಈ ಕುರಿತಾಗಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಆರ್.ಬಿ.ಐ. ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವಿಭಾಗೀಯ ಪೀಠದಲ್ಲಿ ನಡೆದಿದೆ. ನ್ಯಾಯಮೂರ್ತಿಗಳಾದ ಎಸ್. ಸುಜಾತ ಮತ್ತು ಪಿ. ಕೃಷ್ಣಭಟ್ ಅವರಿದ್ದ ಪೀಠ ಕೇಂದ್ರ ಸರ್ಕಾರದ ನಿರ್ದೇಶನದನ್ವಯ ಆರ್ಬಿಐ ಸಾಲದ ಕಂತು ಪಾವತಿ ಅವಧಿ ಮುಂದೂಡಿಕೆಗೆ ಬ್ಯಾಂಕುಗಳಿಗೆ ಸುತ್ತೋಲೆ ಹೊರಡಿಸಿತ್ತು. ಇದು ಮಾರ್ಗಸೂಚಿ ಆಗಿದ್ದು, ಅದನ್ನು ಕಡ್ಡಾಯವಾಗಿ ಪಾಲಿಸಬೇಕಿಲ್ಲವೆಂದು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಉಲ್ಲೇಖಿಸಿ ಆದೇಶ ನೀಡಿದೆ.
ಮಾರ್ಚ್ 2020 ರ ಆರ್‌ಬಿಐ ಸುತ್ತೋಲೆಯ ಆಧಾರದ ಮೇಲೆ ಸಾಲಗಾರನು ಸಾಲದ ಮೊರಟೋರಿಯಂ ಅನ್ನು ಹಕ್ಕು ಎಂದು ಪಡೆಯಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತಿಳಿಸಿದೆ.