ತುಮಕೂರು: ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಇಂದು ದಾಸೋಹ ದಿನಾಚರಣೆ ನಡೆಯಲಿದೆ. ಡಾ. ಶಿವಕುಮಾರ ಶ್ರೀಗಳ ಮೂರನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸಿದ್ದಗಂಗಾ ಮಠದಲ್ಲಿ ದಾಸೋಹ ದಿನಾಚರಣೆ ನಡೆಯಲಿದ್ದು, ಕೊರೋನಾ ಕಾರಣದಿಂದಾಗಿ ಸರಳವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಿದ್ಧಗಂಗಾ ಮಠದಲ್ಲಿ ಇಂದು ಶ್ರೀಗಳ ಗದ್ದುಗೆ ಪೂಜೆ ನೆರವೇರಿಸಲಿದ್ದು, ಸಿದ್ದಲಿಂಗೇಶ್ವರ ಸ್ವಾಮಿಗೆ ರುದ್ರಾಭಿಷೇಕ ನಡೆಯಲಿದೆ.
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆಯುವ ದಾಸೋಹ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದಾರೆ. ಇಂದು ಬೆಳಗ್ಗೆ 9 ಗಂಟೆಗೆ ತುಮಕೂರಿಗೆ ತೆರಳಲಿರುವ ಸಿಎಂ ಕಾರ್ಯಕ್ರಮ ಮುಗಿಸಿ ಬೆಳಗ್ಗೆ 11.30 ಕ್ಕೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.