ಕೊರೊನಾ ಆರ್ಭಟ ಹಿನ್ನೆಲೆ ರಾಜ್ಯದಲ್ಲಿ ಹೆಚ್ಚು ಜನ ಹೋಂ ಐಸೊಲೇಷನ್ ನಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಒಟ್ಟು 5.10 ಲಕ್ಷ ಜನರು ಮನೆ ಚಿಕಿತ್ಸೆಗೆ ಒಳಗಾಗಿದ್ದು, ಬೆಂಗಳೂರು ನಗರ ಈ ಲಿಸ್ಟ್ ನಲ್ಲಿ ಮೊದಲನೇ ಸ್ಥಾನದಲ್ಲಿದೆ. ಆನಂತರದ ಸ್ಥಾನದಲ್ಲಿ ತುಮಕೂರು, ಧಾರವಾಡ ಜಿಲ್ಲೆಗಳಿವೆ. ಬೆಂಗಳೂರಿನಲ್ಲಿ 2 ಲಕ್ಷದಷ್ಟು ಜನರು ಹೋಮ್ ಐಸೊಲೇಷನ್ ನಲ್ಲಿದ್ದಾರೆ. ಕೇವಲ ಸೋಂಕು ದೃಢವಾಗಿರುವವರು ಮಾತ್ರ ಹೋಂ ಐಸೋಲೇಷನ್ ನಲ್ಲಿಲ್ಲ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಒಳಪಟ್ಟವರು, ಸೌಮ್ಯ ಪ್ರಮಾಣದ ಕೆಮ್ಮು , ನೆಗಡಿ, ಜ್ವರ ಇರುವವರು ಸಹ ಹೋಂ ಐಸೊಲೇಷನ್ ಒಳಗಾಗಿದ್ದಾರೆ. ಒಟ್ಟಾರೆ ರಾಜ್ಯದಲ್ಲಿರುವ ಸಕ್ರಿಯ ಪ್ರಕರಣಗಳಲ್ಲಿ ಲೆಕ್ಕಾಚಾರ ಹಾಕುವುದಾದರೆ, 85-90% ಸೋಂಕಿತರು ಹೋಂ ಐಸೋಲೇಷನ್ ನಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಐಸೊಲೇಷನ್ ಜಿಲ್ಲೆಗಳು
1. ಬೆಂಗಳೂರು ನಗರ (ಬಿಬಿಎಂಪಿ ಸೇರಿ)- 1,94,614
2.ತುಮಕೂರು- 49,382
3.ಧಾರವಾಡ-32,849
4.ಮಂಡ್ಯ- 25,521
5. ಬೆಂಗಳೂರು ಗ್ರಾ- 22, 408
COVID-19 ಅಂಟಿಸಿಕೊಳ್ಳಿ, ಬಹುಮಾನ ಗೆಲ್ಲಿ….! ಅಮೆರಿಕಾದಲ್ಲಿ ಹೀಗೊಂದು ವಿಚಿತ್ರ ಪಾರ್ಟಿ
ಇನ್ನೂ ಹೋಂ ಐಸೊಲೇಷನ್ ನಲ್ಲಿ ಇರುವರಿಗೆ ಸರ್ಕಾರ ಆರೋಗ್ಯ ಕಿಟ್ ವಿತರಿಸಲು ಎಲ್ಲಾ ತಯಾರಿ ಮಾಡಿಕೊಂಡು, ಮುಂದಿನ ವಾರದೊಳಗೆ ಕಿಟ್ ವಿತರಿಸಲು ಯೋಜನೆ ಹಾಕಿಕೊಂಡಿದೆ. ಜೊತೆಗೆ ಸರಿಯಾದ ಸಮಯಕ್ಕೆ ಕಿಟ್ ಗಳನ್ನು ತಲುಪಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚಿಸಿದೆ. ಈ ಕೋವಿಡ್ ಕಿಟ್ ನಲ್ಲಿ ತಜ್ಞರ ಪ್ಯಾನೆಲ್ ಸೂಚಿರುವ ಐದು ಬಗೆಯ ಮಾತ್ರೆ, ಒಂದು ಬಗೆಯ ಸಿರಪ್, ಸ್ಯಾನಿಟೈಸರ್, ಮಾಸ್ಕ್ ಇರುತ್ತದೆ
ಕೋವಿಡ್ ಕಿಟ್ ನಲ್ಲಿ ಏನೇನು ಇರಲಿದೆ ?
1. T. Vitamin C 500mg 2-sheets (1-1-1=7 days )
2 . T. zinc 50mg – 1 sheet ( 0-1-0 7 days )
3 – T paracetamol 500mg 1 sheet
4 – T. Levocetrizole 10mg 1 sheet
5 – T pantoprazole 40mg 1 sheet
6 – Anti tissue cough syrup 1 bottle
7 – 3 layered mask -10 and hand sanitizer 50 ml – Bottle