ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಕಾರು ಚಲಾಯಿಸಲು ಬೇರೆ ಬೇರೆ ನಿಯಮಗಳಿವೆ. ಈ ನಿಯಮಗಳಲ್ಲಿ ಮುಖ್ಯವಾದದ್ದು ಚಾಲನಾ ಪರವಾನಗಿ. ಚಾಲನಾ ಪರವಾನಗಿ ಇಲ್ಲದೆ ಯಾವ ದೇಶದಲ್ಲೂ ವಾಹನ ಚಲಾಯಿಸುವಂತಿಲ್ಲ. ಅದು ಕಾನೂನು ಬಾಹಿರ. ಚಾಲನಾ ಪರವಾನಗಿ ಪಡೆಯಲು ಪರೀಕ್ಷೆ ಪಾಸ್ ಮಾಡ್ಬೇಕಾಗುತ್ತದೆ. ಸರತಿ ಸಾಲಿನಲ್ಲಿ ನಿಂತು,ಗಂಟೆಗಟ್ಟಲೆ ಕಾದು ಅನೇಕರು ಡ್ರೈವಿಂಗ್ ಟೆಸ್ಟ್ ನೀಡ್ತಾರೆ. ಇಲ್ಲೊಬ್ಬ ಮಹಿಳೆ, ಚಾಲನಾ ಪರವಾನಗಿ ಪಡೆಯಲು 500 ಕಿಲೋಮೀಟರ್ ಬಂದಿದ್ದಾಳೆ. ಘಟನೆ ಬ್ರಿಟನ್ ನಲ್ಲಿ ಬೆಳಕಿಗೆ ಬಂದಿದೆ. ಆದ್ರೆ ಇಷ್ಟು ದೂರ ಬಂದ ಮಹಿಳೆ,ಪರೀಕ್ಷೆಯಲ್ಲಿ ಫೇಲ್ ಆಗಿದ್ದಾಳೆ.
ಲಂಡನ್‌ನ ಕಾನ್ಸ್ಟನ್ಸ್ ಕ್ಯಾಂಪ್‌ನರ್ ಎಂಬ ಮಹಿಳೆ ಮೊದಲ ಟೆಸ್ಟ್ ನಲ್ಲಿ ವಿಫಲವಾಗಿದ್ದಾಳೆ. ನಂತ್ರ ಸುಲಭವಾಗಿ ಎಲ್ಲಿ ಡ್ರೈವಿಂಗ್ ಲೈಸೆನ್ಸ್ ಸಿಗುತ್ತದೆ ಎಂಬುದನ್ನು ಹುಡುಕಿದ್ದಾಳೆ. ಸ್ಕಾಟ್ಲೆಂಡ್‌ನ ಪಶ್ಚಿಮ ಕರಾವಳಿಯಲ್ಲಿರುವ ಐಲ್ ಆಫ್ ಮುಲ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್ ಸುಲಭವಾಗಿ ಸಿಗುತ್ತದೆ ಎಂಬುದು ಗೊತ್ತಾಗಿದೆ. ಹಾಗಾಗಿ ಮಹಿಳೆ ಅಲ್ಲಿಗೆ ಬಂದಿದ್ದಾಳೆ.ಕಾರು ಚಲಾಯಿಸಿಕೊಂಡು ಮಹಿಳೆ ಅಲ್ಲಿಗೆ ಬಂದಿದ್ದಾಳೆ. ಸುಮಾರು 500 ಮೈಲಿ ಕಾರು ಚಲಾಯಿಸಿಕೊಂಡು ಬಂದ ಮಹಿಳೆಗೆ ಅಲ್ಲಿಯೂ ಅದೃಷ್ಟ ಕೈಕೊಟ್ಟಿದೆ. ಆಕೆ ಅಲ್ಲಿನ ಪರೀಕ್ಷೆಯಲ್ಲೂ ಫೇಲ್ ಆಗಿದ್ದಾಳೆ. ಆದ್ರೆ ಅನೇಕ ತಿರುವು ಹಾಗೂ ಹೊಂಡಗಳಲ್ಲಿ ನಾನು ಕಾರು ಚಲಾಯಿಸಿದ್ದೇನೆ. 10 ಗಂಟೆ ಕಾರು ಚಲಾಯಿಸಿ ಇಲ್ಲಿಗೆ ಬಂದಿದ್ದೆ ಎಂದು ಮಹಿಳೆ ಹೇಳಿದ್ದಾಳೆ.