alex Certify ದೇವರ ನಾಡಲ್ಲಿ ಕೊರೋನಾ ದಿಢೀರ್ ಏರಿಕೆಯಿಂದ ಕೈಮೀರಿದ ಪರಿಸ್ಥಿತಿ: ಹೆಚ್ಚಾಯ್ತು ಆತಂಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವರ ನಾಡಲ್ಲಿ ಕೊರೋನಾ ದಿಢೀರ್ ಏರಿಕೆಯಿಂದ ಕೈಮೀರಿದ ಪರಿಸ್ಥಿತಿ: ಹೆಚ್ಚಾಯ್ತು ಆತಂಕ

ಈ ವರ್ಷದ ಆರಂಭದಲ್ಲಿ ಅಂದರೆ ಜನವರಿ 1 ರಂದು ಕೋವಿಡ್​ 19 ದೈನಂದಿನ ಕೇಸುಗಳ ಸಂಖ್ಯೆ 2435 ಆಗಿತ್ತು. ಕೊರೊನಾದಿಂದ 169 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇದಾಗಿ 19 ದಿನಗಳ ಬಳಿಕ ಅಂದರೆ ಇಂದು ಕೋವಿಡ್ ಸಂಖ್ಯೆ 34,199ಕ್ಕೆ ಏರಿಕೆ ಕಂಡಿದೆ. ಹಾಗೂ ವಿವಿಧ ಆಸ್ಪತ್ರೆಗಳಲ್ಲಿ 1094 ಮಂದಿ ಕೋವಿಡ್​ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೇರಳದಲ್ಲಿ ಪ್ರಸ್ತುತ ಆಸ್ಪತ್ರೆಯಲ್ಲಿ ದಾಖಲಾಗಿರುವವರ ಸಂಖ್ಯೆ 6203 ಆಗಿದೆ. ಇದು ರಾಜ್ಯದ ಒಟ್ಟು ಕೋವಿಡ್ ರೋಗಿಗಳಲ್ಲಿ ಕೇವಲ 3.2 ಪ್ರತಿಶತವಾಗಿದೆ. ಜನವರಿ 11ರಂದು ಕೇರಳದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 44,441 ಆಗಿತ್ತು. ಮತ್ತು 5.7 ಪ್ರತಿಶತದಷ್ಟು ಜನರು ಆಸ್ಪತ್ರೆಯಲ್ಲಿದ್ದರು. ಅಂದು ಕೇವಲ 294 ಹೊಸ ಪ್ರಕರಣಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದಾಗಿ ಕೇವಲ ಒಂದು ವಾರಗಳ ಬಳಿಕ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.

ಕೋವಿಡ್ ರೋಗಿಗಳಲ್ಲಿ ಶೇಕಡಾ 211 ರಷ್ಟು ಏರಿಕೆ ಕಂಡುಬಂದರೆ, ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳಲ್ಲಿ ಶೇಕಡಾ 60 ರಷ್ಟು ಹೆಚ್ಚಳವಾಗಿದೆ.ಆಸ್ಪತ್ರೆಗಳಲ್ಲಿ ಹೊಸ ದಾಖಲಾತಿಗಳಲ್ಲಿ ಶೇಕಡಾ 113 ರಷ್ಟು ಏರಿಕೆಯಾಗಿದೆ, ಆದರೆ ಶೇಕಡಾ 38 ರಷ್ಟು ಹೆಚ್ಚು ಐಸಿಯು ಹಾಸಿಗೆಗಳಲ್ಲಿ ಕೋವಿಡ್ ರೋಗಿಗಳಿದ್ದಾರೆ. ಜನವರಿ 11 ರಿಂದ ವೆಂಟಿಲೇಟರ್ ಹೊಂದಿದ ಬೆಡ್‌ಗಳ ಬಳಕೆಯು ಶೇಕಡಾ ಒಂಬತ್ತು ಪ್ರತಿಶತದಷ್ಟಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Jedovatá dětská Srdcové sušenky: lásku, kterou můžete 7 sofistikovaných a elegantních Chcete najít medvěda v lese za 14 sekund: neuveritelný Nápověda: Najděte gumovou botu za 10