alex Certify ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಇಲ್ಲಿದೆ ಹಲವು ಕಾರಣಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಇಲ್ಲಿದೆ ಹಲವು ಕಾರಣಗಳು

ಕೊರೋನಾ ಸಾಂಕ್ರಾಮಿಕದಿಂದ, ಸೋಷಿಯಲ್ ಡಿಸ್ಟೆನ್ಸ್ ಅನ್ನೋದು ನ್ಯೂ ನಾರ್ಮಲ್ ಆಗಿದೆ. ಇದರಿಂದ ವೈಯಕ್ತಿಕ ಸಾರಿಗೆ ಅಗತ್ಯ ಹೆಚ್ಚಾಗಿದ್ದು, ದೇಶದಲ್ಲಿ ಕಾರುಗಳು ಮತ್ತು ಬೈಕ್‌ಗಳ ಬೇಡಿಕೆಯನ್ನು ಹೆಚ್ಚಿಸಿದೆ. ಹೊಚ್ಚಹೊಸ ವಾಹನಗಳಿಗೆ ಮಾತ್ರವಲ್ಲ, ಬಳಸಿದ ವಾಹನಗಳಿಗೂ ಸಹ ಬೇಡಿಕೆ ಹೆಚ್ಚಿದೆ. 2021ರ OLX ಆಟೋಸ್-ಕ್ರಿಸಿಲ್ ಸ್ಟಡಿ ಪ್ರಕಾರ ಭಾರತದಲ್ಲಿ ಮೊದಲ ಬಾರಿಗೆ ಪೂರ್ವ ಸ್ವಾಮ್ಯದ ಅಥವಾ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ‌ ಶೇಕಡಾ 40-50 ರಷ್ಟು ಹೆಚ್ಚಾಗಿದೆ. ನಿಮಗೂ ಕಾರು ಖರೀದಿಸುವ ಅಗತ್ಯ, ಆಸೆ ಇದ್ದು ಅಷ್ಟು ಬಜೆಟ್ ಇರದಿದ್ದರೆ ನಿಮಗೆ ಪರ್ಫೆಕ್ಟ್ ಸಲ್ಯೂಷನ್ ಸೆಕೆಂಡ್ ಹ್ಯಾಂಡ್ ಕಾರುಗಳು.

ಕಡಿಮೆ ಖರೀದಿ ಬೆಲೆ

ಇತ್ತೀಚೆಗೆ ದಿನಕ್ಕೊಬ್ಬರು ಕಾರು ತಯಾರಕರು ತಮ್ಮ‌ ವಾಹನಗಳ ಬೆಲೆ ಹೆಚ್ಚಿಸುತ್ತಿದ್ದಾರೆ. ಅದ್ರಲ್ಲೂ ಕೊರೋನಾ ಸಂದರ್ಭದಲ್ಲಿ ಆದಾಯ ಕಡಿಮೆಯಾಗಿ, ಖರ್ಚು ಹೆಚ್ಚಾಗಿರುವಾಗ ಕಡಿಮೆ ಬೆಲೆಗೆ ಉತ್ತಮ ಸ್ಥಿತಿಯಲ್ಲಿರುವ ಬಳಸಿದ ವಾಹನಗಳನ್ನ ಖರೀದಿಸುವುದೇ ಜಾಣತನ.

ಈ ವಾರ ಬಿಡುಗಡೆಯಾಗಲಿದೆ ಭಾರತದ ಮೊದಲ ಬ್ಯಾಟರಿ ಚಾಲಿತ ಕ್ರೂಸರ್ ಬೈಕ್

ದ್ವಿಚಕ್ರಗಳಿಗಿಂತ ಕಾರುಗಳು ಸುರಕ್ಷಿತ

ಬಜೆಟ್ ನಿರ್ಬಂಧಗಳ ಕಾರಣದಿಂದಾಗಿ, ಅನೇಕರು ದ್ವಿಚಕ್ರ ವಾಹನಗಳತ್ತ ಒಲವು ತೋರುತ್ತಾರೆ. ಇಲ್ಲವೇ ಹೊಸ ಕಾರನ್ನು ಖರೀದಿಸಲು ಹೆಚ್ಚು ಸಮಯ ಕಾಯುತ್ತಾರೆ. ಈ ಸಂದರ್ಭದಲ್ಲಿ ಸಾರ್ವಜನಿಕ ಸಾರಿಗೆಯನ್ನ ಅವಲಂಬಿಸುವುದು ಅಥವಾ ದ್ವಿಚಕ್ರ ವಾಹನವನ್ನು ಬಳಸುವುದು ಸ್ವಂತ ಕಾರಿನಷ್ಟು ಸುರಕ್ಷಿತವಲ್ಲ. ಬಳಸಿದ ಕಾರ್ ಆದರೂ ನಾಲ್ಕು ಚಕ್ರಗಳ ಸುರಕ್ಷತೆ ಜೊತೆಗೆ, ನಿಮ್ಮ ತಲೆಯ ಮೇಲೆ ಛಾವಣಿ ಇರುವುದು ಉತ್ತಮ ಅಲ್ಲವೇ.

ಮೂವ್ ಅಪ್

ಯೂಸ್ಡ್ ಕಾರುಗಳ ಮಾರುಕಟ್ಟೆಯು ನಿಮ್ಮ ಬಜೆಟ್‌ಗೆ ಸಾಕಷ್ಟು ಆಯ್ಕೆಗಳನ್ನ ನೀಡುತ್ತದೆ. ಕಡಿಮೆ ಬಜೆಟ್ ನಲ್ಲೆ ಒಳ್ಳೆ ರೇಂಜ್ ನ ವಾಹನಗಳನ್ನ ಖರೀದಿಸಬಹುದು. 5 ಲಕ್ಷ ಬಜೆಟ್ ನಲ್ಲಿ ಪ್ರೀಮಿಯಂ ಸೆಡಾನ್ ನಿಂದ ಹಿಡಿದು ಮಧ್ಯಂತರ SUVಯನ್ನ ಖರೀದಿಸಬಹುದು.‌ ಪ್ರತಿಯೊಂದು ಬಜೆಟ್‌ಗೆ ಪ್ರತಿಯೊಂದು ಶೈಲಿಯಲ್ಲಿ ವಾಹನಗಳು ಲಭ್ಯವಿರುವುದರಿಂದ ಆಯ್ಕೆಯು ಸಂಪೂರ್ಣವಾಗಿ ಖರೀದಿದಾರರ ಬಳಿಯಿರುತ್ತದೆ.

ಹೊಸ ಕಾರುಗಳನ್ನು ಡೆಲಿವರಿ ಪಡೆಯಲು ತಿಂಗಳುಗಟ್ಟಲೆ ಕಾಯಬೇಕಿದೆ

ಸಾಂಕ್ರಾಮಿಕ ರೋಗವು ಆಟೋಮೊಬೈಲ್ ಉದ್ಯಮಕ್ಕೆ ನೀಡಿದ ದೊಡ್ಡ ಹೊಡೆತವೆಂದರೆ ಸೆಮಿಕಂಡಕ್ಟರ್ ಕೊರತೆ. ಇದು ದೇಶದ ಪ್ರತಿಯೊಂದು ಕಾರು, ಬೈಕ್ ತಯಾರಕರ ಮೇಲೆ ಪರಿಣಾಮ ಬೀರಿದೆ. ನಿಮಗಿಷ್ಟದ ಮಾಡೆಲ್ ಗಳನ್ನ ಇಂದು ಬುಕ್ ಮಾಡಿದರೆ ಅದರ ಕೀ ನಿಮ್ಮ ಕೈಸೇರಲು ತಿಂಗಳುಗಳೆ ಹಿಡಿಯುತ್ತದೆ. ಕೆಲ ಕಂಪನಿಯವರು ವರ್ಷಗಟ್ಟಲೆ ಕಾಯುಸುತ್ತಿದ್ದಾರೆ. ಇದಕ್ಕೆ ಹೋಲಿಸಿದರೆ ಸೆಕೆಂಡ್ ಹ್ಯಾಂಡ್ ಕಾರುಗಳ ತಕ್ಷಣ ಕೈ ಸೇರುತ್ತವೆ. ಸೋ, ಹೊಸ ಕಾರಿಗಾಗಿ ಕ್ಯೂನಲ್ಲಿ ನಿಂತು ಕಾಯುವ ಬದಲು ಯೂಸ್ಡ್ ಕಾರ್ ಖರೀದಿಸಿ ಓಡಾಡುವುದು ಉತ್ತಮ.‌

ಕಾರ್ ಚಾಲನೆಯಲ್ಲಿ ಕೌಶಲ್ಯ ಹೊಂದಲು ಬಳಸಿದ ಕಾರ್ ಬೆಸ್ಟ್

ಕಾರುಗಳನ್ನ ಓಡಿಸಲು ಹೊಸದಾಗಿ ಕಲಿಯುವಾಗ ಮಿಸ್ಟೇಕ್ ಗಳಾಗುವುದು ಸಾಮಾನ್ಯ. ಈ ಪ್ರಕ್ರಿಯೆಯಲ್ಲಿ ನಿಮ್ಮ‌ ಬಳಿ ಯೂಸ್ಡ್ ಕಾರ್ ಇದ್ದರೆ ಹೊಚ್ಚಹೊಸ ಕಾರನ್ನು ಹಾಳುಮಾಡುವ ಬಗ್ಗೆ ಚಿಂತಿಸದೆಯೇ ನಿಮ್ಮ ಚಾಲನಾ ಕೌಶಲ್ಯವನ್ನು ವೃದ್ಧಿಗೊಳಿಸಬಹುದು.‌

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...