alex Certify ಈ ವಾರ ಬಿಡುಗಡೆಯಾಗಲಿದೆ ಭಾರತದ ಮೊದಲ ಬ್ಯಾಟರಿ ಚಾಲಿತ ಕ್ರೂಸರ್ ಬೈಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಾರ ಬಿಡುಗಡೆಯಾಗಲಿದೆ ಭಾರತದ ಮೊದಲ ಬ್ಯಾಟರಿ ಚಾಲಿತ ಕ್ರೂಸರ್ ಬೈಕ್

ಎಲೆಕ್ಟ್ರಿಕ್ ವಾಹನ ತಯಾರಕ ಕೊಮಾಕಿ ಈ ವಾರ ಮಾರುಕಟ್ಟೆಯಲ್ಲಿ ತನ್ನ ರೇಂಜರ್ ಎಲೆಕ್ಟ್ರಿಕ್ ಕ್ರೂಸರ್ ಅನ್ನು ಬಿಡುಗಡೆ ಮಾಡಲಿದೆ. ಈ ಬೈಕ್ ಅನ್ನು ಕೆಲವು ದಿನಗಳ ಹಿಂದೆ ಅಧಿಕೃತವಾಗಿ ಬಹಿರಂಗಪಡಿಸಲಾಯಿತು. ಈ ಮೂಲಕ ಈ ಹೊಸ ಇ-ಬೈಕ್‌ ನ ವಿನ್ಯಾಸದ ವಿವರಗಳು ಸಹ ಹೊರಬಂದಿವೆ. ರೇಂಜರ್ ಇ-ಕ್ರೂಸರ್ ದೇಶದಲ್ಲಿ ಮಾರಾಟವಾಗಲಿರುವ ಮೊದಲ ಬ್ಯಾಟರಿ ಚಾಲಿತ ಕ್ರೂಸರ್ ಆಗಿ ಹೊರಬರಲಿದೆ.

ನಾಲ್ಕು ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುವ ಕ್ರೂಸರ್, ಭಾರತದಲ್ಲಿ ವಿದ್ಯುತ್ ದ್ವಿಚಕ್ರ ವಾಹನದಲ್ಲಿ ಕಂಡುಬರುವ ಅತಿದೊಡ್ಡ ಬ್ಯಾಟರಿ ಪ್ಯಾಕ್‌ ಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ. ಈ ಬ್ಯಾಟರಿ ಪ್ಯಾಕ್ ಅದರ 5,000-ವ್ಯಾಟ್ ಮೋಟರ್ ಮತ್ತಷ್ಟು ಮೆರುಗು ನೀಡುತ್ತದೆ.

ಮಸಾಲೆ ದೋಸೆ ಐಸ್‌ ಕ್ರೀಂ ಕಂಡು ಹೌಹಾರಿದ ನೆಟ್ಟಿಗರು

ಕಂಪನಿಯು ತನ್ನ ಹೊಸ ಯುಗದ ಎಲೆಕ್ಟ್ರಿಕ್ ಬೈಕು ಒಂದೇ ಚಾರ್ಜ್ ಸೈಕಲ್‌ನಲ್ಲಿ 200 ಕಿ.ಮೀ. ಗಿಂತಲೂ ಹೆಚ್ಚು ಓಡಬಲ್ಲದು, ಅಂದರೆ ಪೂರ್ಣ ಚಾರ್ಜ್ ಅಷ್ಟು ಶ್ರೇಣಿಯನ್ನು ತಲುಪಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿಕೊಂಡಿದೆ. ಕಂಪನಿಯ ಈ ಹೇಳಿಕೆ ಶ್ಲಾಘನೀಯ, ಆದರೆ ನಿಜ ಜೀವನದಲ್ಲಿ ಭಾರತದ ರಸ್ತೆಗಳಲ್ಲಿ ಓಡಿಸಿದಾಗಲೇ ಇದು ಎಷ್ಟು ನಿಜ ಎಂದು ತಿಳಿಯಬಹುದು.

ಇನ್ನುಳಿದಂತೆ, ಕ್ರೂಸರ್ ಎಲೆಕ್ಟ್ರಿಕ್ ಬೈಕ್ ಕ್ರೂಸ್ ಕಂಟ್ರೋಲ್, ರಿಪೇರಿ ಸ್ವಿಚ್, ರಿವರ್ಸ್ ಸ್ವಿಚ್, ಬ್ಲೂಟೂತ್ ಮತ್ತು ಸುಧಾರಿತ ಬ್ರೇಕಿಂಗ್ ಸಿಸ್ಟಮ್‌ನಂತಹ ಫೀಚರ್ ಗಳನ್ನು ಹೊಂದಿದೆ. ಈ ಮಾಡೆಲ್ ನ ಬೆಲೆಯನ್ನು ಇನ್ನು ಕೆಲವೇ ದಿನಗಳಲ್ಲಿ ಪ್ರಕಟಿಸಲಾಗುವುದು, ಕ್ರೂಸರ್‌ನ ಒಟ್ಟಾರೆ ಬೆಲೆಯನ್ನು ಕೈಗೆಟುಕುವ ಶ್ರೇಣಿಯಲ್ಲೇ ಇರಿಸಲಾಗುವುದು ಎಂದು ಕಂಪನಿಯು ಭರವಸೆ ನೀಡಿದೆ. ಸಧ್ಯಕ್ಕಿರುವ ಮಾರ್ಕೆಟ್ ನೋಡುವುದಾದರೆ ಕ್ರೂಸರ್ ಬೆಲೆ ಒಂದು ಲಕ್ಷಕ್ಕಿಂತ ಹೆಚ್ಚು (ಎಕ್ಸ್ ಶೋ ರೂಂ) ಎಂದು ನಿರೀಕ್ಷಿಸಬಹುದು. ಇದಲ್ಲದೆ ಕೊಮಾಕಿ ಪ್ರಸ್ತುತ ಇರುವ ಹಲವಾರು ಇತರ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಬೈಕ್‌ಗಳನ್ನ ಮೂವತ್ತು ಸಾವಿರದಿಂದ ಒಂದು ಲಕ್ಷದವರೆಗೆ ಮಾರಾಟ ಮಾಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...