ಎತ್ತರದ ಪ್ರದೇಶ, ತುತ್ತತುದಿಗಳು ಎಂದರೆ ಅನೇಕರಿಗೆ ಆಂತರಿಕವಾಗಿ ಭಯ ಇರುತ್ತದೆ. ಅದರಲ್ಲೂ ಪ್ಯಾರಾಗ್ಲೈಡಿಂಗ್ ಮತ್ತು ಸ್ಕೈಡೈವಿಂಗ್ ಎಂಬ ವಿಚಿತ್ರ ಸಾಹಸಮಯ ಕ್ರೀಡೆಗಳಲ್ಲಿ ಸಾವಿರಾರು ಅಡಿ ಎತ್ತರದಿಂದ ಸುರಕ್ಷತೆ ಜತೆಗೆ ಜಿಗಿಯಲಾಗುತ್ತದೆ. ಜಿಗಿಯುವಾಗ ಕೆಳಗಿನ ಪ್ರಪಾತ ಕಂಡು ಕಿರುಚಾಡಿ, ಅರಚಾಡಿದ ಜನರು ಬಹಳಷ್ಟು ಮಂದಿ ಇದ್ದಾರೆ. ಅಂಥ ವಿಡಿಯೊಗಳನ್ನು ನೀವು ಫೇಸ್‍ಬುಕ್ ಮತ್ತು ಯೂಟ್ಯೂಬ್‍ಗಳಲ್ಲಿ ನೋಡಿರುತ್ತೀರಿ.
ಅದೇ ರೀತಿ ಪ್ಯಾರಾಗ್ಲೈಡಿಂಗ್ ಮಾಡುತ್ತಾ ಇದಕ್ಕಾಗಿ ಪತಿಯನ್ನು ದೂಷಿಸಿದ ಪತ್ನಿಯ ವಿಡಿಯೊವೊಂದು ಸದ್ಯ ಟ್ವಿಟರ್‍ನಲ್ಲಿ ವೈರಲ್ ಆಗಿದೆ. ‘ದಿಲ್ ತೋ ಬಚ್ಚಾ ಹೈ ಜೀ ‘ ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಮಜವಾದ ವಿಡಿಯೊ ಹಂಚಿಕೊಳ್ಳಲಾಗಿದೆ.
ಮಹಾತಾಯಿ ಪ್ಯಾರಾಗ್ಲೈಡಿಂಗ್ ಜತೆಗೆ ಪತಿಗೆ ಸಹಸ್ರನಾಮ ಹೇಳಿಕೊಂಡು ಪೂಜೆ ಮಾಡುತ್ತಿದ್ದಾಳೆ ಎಂದು ಟ್ವೀಟಿಗರು ಹಾಸ್ಯಚಟಾಕಿ ಹಾರಿಸಿದ್ದಾರೆ. ಅಷ್ಟಕ್ಕೂ ಆಕಾಶಕ್ಕೆ ಚಿಮ್ಮಿದ ಕೂಡಲೇ ಮಹಿಳೆಗೆ ಹೆದರಿಕೆ ಆಗಿ, ” ಬ್ರಿಜೇಶ್(ಪತಿ) ನಿನ್ನನ್ನು ಸಾಯಿಸುತ್ತೇನೆ. ದೇವರೇ ಯಾಕೆ ನನಗೆ ಮದುವೆ ಮಾಡಿಸಿದೆಯೋ,” ಎಂದು ಚೀರಾಡಿದ್ದಾಳೆ. ಇದು ಮಹಿಳೆ ಜತೆಗಿದ್ದ ಗ್ಲೈಡಿಂಗ್ ಮಾರ್ಗದರ್ಶಕನ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಲಾಡ್ಜ್ ನಲ್ಲೇ ನಡೆದಿದೆ ನಡೆಯಬಾರದ ಘಟನೆ: ಅಕ್ರಮ ಸಂಬಂಧ ಆರೋಪ ಸ್ನೇಹಿತರಿಂದಲೇ ಬರ್ಬರ ಹತ್ಯೆ
ಆತ ಮಹಿಳೆಗೆ ಮೇಡಮ್ ಗಾಬರಿ ಆಗಬೇಡಿ ಎಂದು ಹೇಳುತ್ತಲೇ ಇರುತ್ತಾನೆ. ಆದರೆ ಮಹಿಳೆ ಮಾತ್ರ, ಅಣ್ಣಾ ನನಗೆ ತುಂಬಾ ಭಯ ಆಗುತ್ತಿದೆ. ಕೆಳಗೆ ಮಾತ್ರ ನೋಡಲಾರೆ ಎಂದು ಹೇಳುತ್ತಲೇ ಇರುತ್ತಾಳೆ.
ಬಾಲಿವುಡ್‍ನ ಖ್ಯಾತ ಗೀತೆ, ‘ಮುಜ್‍ಕೋ ಭೀ ಲ್ಯಾಂಡ್ ಕರಾ ದೇ’ ಎಂದು ಕೆಲವರು ಟ್ವೀಟ್ ಮಾಡಿ ಮಹಿಳೆಯ ಕಾಲೆಳೆದಿದ್ದಾರೆ. ಎತ್ತರದ ಸ್ಥಳಗಳಿಗೆ ಏರುವುದು, ಅಲ್ಲಿಂದ ಕೆಳಕ್ಕೆ ಇಣುಕಿ ಭಯಗೊಳ್ಳುವುದು ಭಾವೋದ್ವೇಗದ ಮಾನಸಿಕ ಸಮಸ್ಯೆಗಳಲ್ಲಿ ಒಂದಾಗಿದೆ. ಇದಕ್ಕೆ “ಆಕ್ರೋಫೋಬಿಯಾ” ಎಂದು ಹೆಸರು. ಕನಸಿನಲ್ಲಿ ಕೂಡ ಕೆಲವೊಮ್ಮೆ ಜನರು ಎತ್ತರದಲ್ಲಿ ತುತ್ತತುದಿಯಲ್ಲಿ ನಿಂತಂತೆ ಭಾಸವಾಗಿ ಗಾಬರಿಪಡುತ್ತಿರುತ್ತಾರೆ.