ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಾ ಸಾಗಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟಕ್ಕೆ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ. ಓಲಾದ ಎಂಟ್ರಿ ಲೆವೆಲ್ ಎಸ್1 ಸ್ಕೂಟರ್ ಮೇಲೆ ದುಡ್ಡು ಹಾಕಿ ಇನ್ನೂ ಡೆಲಿವರಿ ಪಡೆಯದ ಮಂದಿಗೆ ಎಸ್1 ಪ್ರೋಗೆ ಉಚಿತ ಅಪ್‌ಗ್ರೇಡ್ ನೀಡುವುದಾಗಿ ಕಂಪನಿಯ ಸಿಇಓ ಭವಿಶ್ ಅಗರ್ವಾಲ್ ತಿಳಿಸಿದ್ದಾರೆ.
ಆದರೆ ಈ ಟ್ವೀಟ್‌ನಲ್ಲಿ ಯಾವುದೇ ಟೈಮ್‌ಲೈನ್ ಕೊಟ್ಟಿಲ್ಲ. ಕೈಗೆಟುಕುವ ಬೆಲೆಯ ಎಸ್1 ಇನ್ನು ಮುಂದೆ ಬರದೇ ಇರುವ ಸುಳಿವನ್ನು ಈ ಘೋಷಣೆ ಕೊಡುತ್ತಿದೆ ಎಂಬ ಗುಮಾನಿಗಳು ಹಬ್ಬಿವೆ. ಆದರೆ ಈ ಬಗ್ಗೆ ಓಲಾ ಎಲೆಕ್ಟ್ರಿಕ್‌ನಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
Big News: ಓಲಾದಿಂದ ಒಂದೇ ದಿನ 600 ಕೋಟಿ ರೂ. ಮೌಲ್ಯದ S1 ಸ್ಕೂಟರ್ ಮಾರಾಟ…!
ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಅದಾಗಲೇ 20,000 ರೂ.ಗಳನ್ನು ಪಾವತಿ ಮಾಡಿದ ಮಂದಿಗೆ ಅಂತಿಮ ಪೇಮೆಂಟ್ ಗವಾಕ್ಷಿಯನ್ನು ಜನವರಿ 21ರಂದು ತೆರೆಯುವುದಾಗಿ ಓಲಾ ಎಲೆಕ್ಟ್ರಿಕ್ ಇತ್ತೀಚೆಗಷ್ಟೇ ತಿಳಿಸಿತ್ತು.
ಹಿಂದಿನ ಸುತ್ತಿನಲ್ಲಿ ಖರೀದಿ ಮಾಡಿದ ಮಂದಿಗೆಲ್ಲಾ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಕಳುಹಿಸಿದ್ದಾಗಿ ತಿಳಿಸಿದ್ದ ಕಂಪನಿ, ಈ ತಿಂಗಳು ಮತ್ತು ಫೆಬ್ರವರಿಯಲ್ಲಿ ಖರೀದಿ ಮಾಡಿದವರಿಗೆ ಡೆಲಿವರಿ ಆರಂಭಿಸುವುದಾಗಿ ಹೇಳಿಕೊಂಡಿದೆ.
ಕಳೆದ ಆಗಸ್ಟ್‌ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಲೋಕಕ್ಕೆ ಕಾಲಿಟ್ಟ ಓಲಾ, ಎಸ್1 ಮತ್ತು ಎಸ್1 ಪ್ರೋಗಳೆಂಬ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ತಲಾ ಒಂದು ಲಕ್ಷ ರೂ. ಮತ್ತು 1,30,000 ರೂ.ಗಳಿಗೆ ಪರಿಚಯಿಸಿತ್ತು. ಸೆಪ್ಟೆಂಬರ್‌ನಿಂದಲೇ ಆನ್ಲೈನ್‌ನಲ್ಲಿ ಖರೀದಿ ಪ್ರಕ್ರಿಯೆಗೆ ಚಾಲನೆ ಕೊಟ್ಟ ಓಲಾ, ಡೆಲಿವರಿಗಳನ್ನು ತಡ ಮಾಡಿತ್ತು. ಜಗತ್ತಿನಾದ್ಯಂತ ಸೆಮಿ ಕಂಡಕ್ಟರ್‌ಗಳ ಕೊರತೆ ಇರುವ ಕಾರಣದಿಂದಾಗಿ ಹೀಗೆ ಆಗುತ್ತಿದೆ ಎಂದು ಓಲಾ ಕಾರಣ ಕೊಟ್ಟಿತ್ತು.