ಮೇಷ : ಸಹೋದರನ ಆರ್ಥಿಕ ಸಂಕಷ್ಟಕ್ಕೆ ನೀವು ನೆರವಾಗಲಿದ್ದೀರಿ. ಇದರಿಂದ ನಿಮ್ಮ ಪೋಷಕರು ನಿಮ್ಮ ಮೇಲೆ ಹೆಮ್ಮೆ ಪಡೆಲಿದ್ದಾರೆ. ಕುಟುಂಬಸ್ಥರ ಜೊತೆ ಕುಲದೇವರ ದರ್ಶನಕ್ಕೆ ತೆರಳಲಿದ್ದೀರಿ. ಇಂದು ಮನೆಯಲ್ಲಿ ನಿಮ್ಮ ವಿವಾಹ ಸಂಬಂಧದ ಬಗ್ಗೆ ಚರ್ಚಿಸಲಿದ್ದಾರೆ.
ವೃಷಭ : ಇಂದು ನಿಮ್ಮ ಮನಸ್ಸಿಗೆ ನೋವಾಗುವಂತಹ ಘಟನೆಯೊಂದು ಜರುಗಲಿದೆ. ಸ್ತ್ರೀಯರು ಇಂದು ಆರೋಗ್ಯದ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿ ಇರಬೇಕು. ವಿದ್ಯಾರ್ಥಿಗಳಿಗೆ ಅಂದುಕೊಂಡ ಕಾರ್ಯದಲ್ಲಿ ಜಯವಿದೆ.
ಮಿಥುನ : ವೈವಾಹಿಕ ಸಂಬಂಧಕ್ಕೆಂದು ಅರಸುತ್ತಿರುವವರಿಗೆ ಇಂದು ಶುಭ ಸುದ್ದಿ ಕಾದಿದೆ. ವೃತ್ತಿ ಜೀವನದಲ್ಲಿ ನಿಮಗೆ ಯಶಸ್ಸು ಸಿಗಲಿದೆ. ಪದೇ ಪದೇ ಕೆಟ್ಟ ಕನಸು ಬೀಳುವುದರಿಂದ ಬೇಸತ್ತಿದ್ದೀರಾ. ಸೋಮವಾರದಂದು ಶಿವನಿಗೆ ರುದ್ರಾಭಿಷೇಕ ಮಾಡಿಸಿ. ಸಾರ್ವಜನಿಕ ಜೀವನದಲ್ಲಿ ಮೆಚ್ಚುಗೆ ಪಡೆಯುವಿರಿ.
ಕಟಕ : ಆಸ್ತಿ ವಿಚಾರದಲ್ಲಿ ಮತ್ತಷ್ಟು ಗೋಜಲುಗಳು ಮುಂದುವರಿಯಲಿದೆ. ಮಕ್ಕಳು ನಿಮ್ಮ ಮೇಲೆ ಮುನಿಸಿಕೊಳ್ಳಲಿದ್ದಾರೆ. ಇದರಿಂದ ಇಡೀ ಮನೆಯ ನೆಮ್ಮದಿಯೇ ಹಾಳಾಗಲಿದೆ. ಹೂವು, ಹಣ್ಣು ವ್ಯಾಪಾರಿಗಳಿಗೆ ಇಂದು ಲಾಭವಿದೆ.
ಸಿಂಹ : ಸಹೋದರಿಯು ನಿಮ್ಮ ಆರ್ಥಿಕ ಸಂಕಷ್ಟಕ್ಕೆ ಹೆಗಲು ನೀಡಲಿದ್ದಾರೆ. ವಾಹನ ಸವಾರಿ ಮಾಡುವಾಗ ಆದಷ್ಟು ಎಚ್ಚರಿಕೆಯಿಂದಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಪತ್ನಿಯಿಂದ ಕೊಂಚ ಕಿರಿಕಿರಿ ಇರಲಿದೆ.
ಕನ್ಯಾ : ಹಣದ ಸಂಪಾದನೆ ವಿಚಾರದಲ್ಲಿ ಹೊಸ ಮಾರ್ಗವೊಂದು ಸಿಗಲಿದೆ. ಸಾಲಗಾರರ ಕಾಟ ತಪ್ಪಿದ್ದಲ್ಲ. ಹೊಸ ವಾಹನ ಖರೀದಿ ಮಾಡಲಿದ್ದೀರಿ. ಜವಳಿ ಉದ್ಯಮಿಗಳಿ ದಿಢೀರ್ ಲಾಭ ಕಾದಿದೆ.
ತುಲಾ : ಈ ದಿನವನ್ನು ನೀವು ಸಂತೋಷದಿಂದ ಕಳೆಯಲಿದ್ದೀರಿ. ಪರಸ್ತ್ರೀಯರೊಂದಿಗೆ ಮಾತನಾಡುವಾಗ ಎಚ್ಚರಿಕೆ ಇರಲಿದೆ. ಸಾರ್ವಜನಿಕ ಜೀವನದಲ್ಲಿ ನಿಮಗೆ ಮಾನಭಂಗವಾದೀತು. ಸುಬ್ರಹ್ಮಣ್ಯನನ್ನು ಆರಾಧಿಸಿ.
ವೃಶ್ಚಿಕ: ನಿರಂತರ ಪ್ರಯಾಣದಿಂದ ಆರೋಗ್ಯದ ಸಮಸ್ಯೆ ಎದುರಾಗಲಿದೆ. ಬೆಲ್ಲವನ್ನು ದಾನ ಮಾಡಿ. ಇದರಿಂದ ನಿಮ್ಮ ಕುಟುಂಬದಲ್ಲಿನ ಕಿರಿಕಿರಿಗೆ ಪರಿಹಾರ ಸಿಗಲಿದೆ. ಪೋಷಕರಿಂದ ಮಾರ್ಗದರ್ಶನ ಪಡೆದು ಉದ್ಯಮದಲ್ಲಿ ಬದಲಾವಣೆ ಮಾಡಲಿದ್ದೀರಿ.
ಧನು : ವಿದ್ಯಾರ್ಥಿಗಳಿಗೆ ಗುರುವಿನ ಅನುಗ್ರಹದಿಂದ ಎಲ್ಲವೂ ಒಳಿತಾಗಲಿದೆ. ನಿಮ್ಮ ಆಶೋತ್ತರಗಳು ಈಡೇರಬೇಕು ಅಂದರೆ ರುದ್ರಾಭಿಷೇಕ ಮಾಡಬೇಕು. ಗರ್ಭಿಣಿಯರು ಆರೋಗ್ಯದ ವಿಚಾರದಲ್ಲಿ ಜಾಗರೂಕರಾಗಿ ಇರಬೇಕು.
ಮಕರ : ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿಚಾರದಲ್ಲಿ ನೀವು ಅಸಮಾಧಾನಗೊಳ್ಳಲಿದ್ದೀರಿ. ಕಚೇರಿಯಲ್ಲಿ ಮೇಲಾಧಿಕಾರಿಗಳಿಂದ ಕಿರಿಕಿರಿ ಮುಂದುವರಿಯಲಿದೆ. ರಾಯರ ಆರಾಧನೆ ಮಾಡಿ. ಎಲ್ಲವೂ ಶುಭವಾಗಲಿದೆ.
ಕುಂಭ : ಸಹೋದರರಿಂದ ನಿಮಗೆ ಅನುಕೂಲ ಇರಲಿದೆ. ಮಕ್ಕಳ ಸಾಧನೆ ನಿಮ್ಮ ಕೀರ್ತಿಯನ್ನು ಹೆಚ್ಚಿಸಲಿದೆ. ಸ್ತ್ರೀಯರು ತಮ್ಮ ಕಾರ್ಯಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಲಿದ್ದಾರೆ. ಕಚೇರಿಯಲ್ಲಿ ಭಯದ ವಾತಾವರಣ ಇರಲಿದೆ.
ಮೀನ : ಬಹಳ ದಿನಗಳ ಹಿಂದೆ ಕಳೆದುಕೊಂಡ ವಸ್ತುವೊಂದು ನಿಮಗೆ ವಾಪಸ್ ಸಿಗಲಿದೆ. ದುರ್ಜನರ ಸಹವಾಸದಿಂದ ನಿಮ್ಮ ಹೆಸರು ಸಾರ್ವಜನಿಕ ವಲಯದಲ್ಲಿ ಕೆಡಲಿದೆ. ಬಹಳ ದಿನಗಳಿಂದ ವೈವಾಹಿಕ ಸಂಬಂಧಕ್ಕೆ ಹುಡುಕಾಡುತ್ತಿರುವ ನಿಮಗೆ ಇಂದು ಕಂಕಣ ಭಾಗ್ಯ ಕೂಡಿ ಬರಲಿದೆ.