alex Certify ಶಾಲೆ ತೊರೆದು ವ್ಯವಸಾಯ ಮಾಡಿದ ರೈತ ಈಗ ಕೃಷಿ ವಿವಿಗಳಿಗೆ ಪಠ್ಯಕ್ರಮ ರಚಿಸುವ ಸಮಿತಿಯ ಸದಸ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆ ತೊರೆದು ವ್ಯವಸಾಯ ಮಾಡಿದ ರೈತ ಈಗ ಕೃಷಿ ವಿವಿಗಳಿಗೆ ಪಠ್ಯಕ್ರಮ ರಚಿಸುವ ಸಮಿತಿಯ ಸದಸ್ಯ

ಹೊಲದಲ್ಲಿ ಕೆಲಸ ಮಾಡಲು 10 ನೇ ತರಗತಿಯಲ್ಲೇ ಶಾಲೆಯನ್ನು ತೊರೆದ, ರಾಜಸ್ಥಾನದ ಜಲಾವರ್‌ನ ರೈತ ಈಗ ಭಾರತದ ಕೃಷಿ ವಿಶ್ವವಿದ್ಯಾಲಯಗಳಿಗೆ ಸಾವಯವ ಕೃಷಿಯ ಪಠ್ಯಕ್ರಮವನ್ನು ವಿನ್ಯಾಸಗೊಳಿಸುವ ಸಮಿತಿಯ ಸದಸ್ಯ ಎಂದರೆ ನೀವು ನಂಬಲೇಬೇಕು. ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರೊಂದಿಗೆ ರಾಜಸ್ಥಾನದ ಹುಕುಮ್‌ಚಂದ್ ಪಾಟಿದಾರ್ ಕೈ ಜೋಡಿಸಿ ಪಠ್ಯಕ್ರಮ ವಿನ್ಯಾಸಗೊಳಿಸುತ್ತಿದ್ದಾರೆ.

ಪಾಟಿದಾರ್, 2018 ರಲ್ಲಿ ತನ್ನ ಸ್ಥಳೀಯ ಗ್ರಾಮವಾದ ಮಾನ್ಪುರಾ ಗ್ರಾಮವನ್ನು ಸಂಪೂರ್ಣವಾಗಿ ರಾಸಾಯನಿಕ ಮುಕ್ತ ಫಾರ್ಮ್ ಆಗಿ ಪರಿವರ್ತಿಸಲು ಸಹಾಯ ಮಾಡಿದ್ದಕ್ಕಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ. ಸಾವಯವ ಕೃಷಿ ಮೂಲಕ ಕಿತ್ತಳೆ, ಬೇಳೆಕಾಳುಗಳು, ಈರುಳ್ಳಿ, ಕೊತ್ತಂಬರಿ ಬೆಳೆಯುವಲ್ಲಿ ಪರಿಣಿತರಾಗಿರುವ ಪಾಟಿದಾರ್, ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ ಪಠ್ಯಕ್ರಮ ಸಮಿತಿಯ ಸದಸ್ಯರಾಗಿದ್ದಾರೆ.

ಸಾವಯವ ಕೃಷಿಯ ವಿಷಯದ ಕುರಿತು ರಾಜಸ್ಥಾನದ ನಾಲ್ಕು ಕೃಷಿ ವಿಶ್ವವಿದ್ಯಾನಿಲಯಗಳಿಗೆ ಸಲಹೆಗಾರರಾಗಿರುವ ಪಾಟಿದಾರ್ ಅವರು ಪಠ್ಯಕ್ರಮಕ್ಕೆ ಅವರ ಸಹವರ್ತಿಗಳು ಸೂಚಿಸುವ ಮೌಲ್ಯವನ್ನು ಹೇಗೆ ಸೇರಿಸಬಹುದು ಎಂಬ ಸ್ಪಷ್ಟ ಕಲ್ಪನೆಯನ್ನು ಹೊಂದಿದ್ದಾರೆ.

ಕೃಷಿ ವಿಶ್ವವಿದ್ಯಾನಿಲಯಗಳು ಮಾತ್ರ ತೋಟಗಾರಿಕೆ, ಕೃಷಿಯಲ್ಲಿ ಬಿಎಸ್ಸಿ, ಎಂಎಸ್ಸಿ ಮತ್ತು ಪಿಎಚ್‌ಡಿಯಂತಹ ಕೋರ್ಸ್‌ಗಳನ್ನು ನಡೆಸುತ್ತವೆ. ನಾನು ಕೆಲಸ ಮಾಡುತ್ತಿರುವ ಮಾಡ್ಯೂಲ್, ನೈಸರ್ಗಿಕ ಮತ್ತು ಗೋಮಯ-ಸಂಬಂಧಿತ ಕೃಷಿಯ ಬಗ್ಗೆ ತಿಳಿಸುವುದು.‌ ಈ ಪಠ್ಯಕ್ರಮವನ್ನ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪರಿಚಯಿಸಲಾಗುವುದು ಎಂದು ಪಾಟಿದಾರ್ ಅವರು ಹೇಳಿದ್ದಾರೆ.

ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರಿರುವ ಸಮಿತಿಯಲ್ಲಿ ಪಾಟಿದಾರ್ ಒಬ್ಬರೆ ಯಾವುದೇ ಯೂನಿವರ್ಸಿಟಿಯಿಂದ ಪದವಿ ಇಲ್ಲದ ಸದಸ್ಯ. ಆದರೆ ಅವರಿಗೆ ಪ್ರಕೃತಿ‌ ಮಾತೆಯೇ ಉತ್ತಮ ವ್ಯವಸಾಯದ ಮೂಲಕ‌ ಅತ್ಯುನ್ನತ ಪದವಿ ನೀಡಿದ್ದಾಳೆ. ಈ ಸಾಂಪ್ರದಾಯಿಕ ಕೃಷಿಯ ಬಗ್ಗೆ ನನಗೆ ತಿಳಿದಿರುವುದು ಪ್ರಾಚೀನ ಗ್ರಂಥಗಳಿಂದ. ನಾನು ಅದನ್ನು ಪ್ಯಾನಲ್‌ ನಲ್ಲಿರುವ ನನ್ನ ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುತ್ತೇನೆ, ಎಂದು ಪಾಟಿದಾರ್ ಸರಳವಾಗಿ ಹೇಳುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...