ಮುಂಬೈ ಕ್ಲಸ್ಟರ್: ಸುಮಾರು 1650
ಭೂಸಾವಲ್ ಕ್ಲಸ್ಟರ್: ಸುಮಾರು 410
ಪುಣೆ ಕ್ಲಸ್ಟರ್: ಸುಮಾರು 150
ನಾಗ್ಪುರ ಕ್ಲಸ್ಟರ್: ಸುಮಾರು 110
ಸೊಲ್ಲಾಪುರ ಕ್ಲಸ್ಟರ್: ಸುಮಾರು 75
ರೈಲ್ವೆ ನೇಮಕಾತಿ 2022: ಶೈಕ್ಷಣಿಕ ಅರ್ಹತೆ
ಆಸಕ್ತ ಅಭ್ಯರ್ಥಿಗಳು ಕನಿಷ್ಟ 10ನೇ ತರಗತಿಯವರೆಗೆ ವ್ಯಾಸಂಗ ಪೂರ್ಣಗೊಳಿಸಿರಬೇಕು. ಅಲ್ಲದೇ ಕನಿಷ್ಟ 50 ಪ್ರತಿಶತ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಯು ರಾಷ್ಟ್ರೀಯ ವೃತ್ತಿಪರ ತರಬೇತಿಗಾಗಿ ರಾಷ್ಟ್ರೀಯ ಕೌನ್ಸಿಲ್ ನೀಡಿದ ತರಬೇತಿಯಲ್ಲಿ ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರವನ್ನು ಹೊಂದಿರಬೇಕು ಅಥವಾ ವೃತ್ತಿಪರ ತರಬೇತಿಗಾಗಿ ರಾಷ್ಟ್ರೀಯ ಕೌನ್ಸಿಲ್ / ವೊಕೇಶನಲ್ ಟ್ರೇನಿಂಗ್ಗಾಗಿ ರಾಜ್ಯ ಕೌನ್ಸಿಲ್ ನೀಡಿದ ತಾತ್ಕಾಲಿಕ ಪ್ರಮಾಣಪತ್ರವನ್ನು ಹೊಂದಿರಬೇಕು.
ರೈಲ್ವೆ ನೇಮಕಾತಿ 2022 : ವಯಸ್ಸಿನ ಮಿತಿ
ಅಭ್ಯರ್ಥಿಗಳಿಗೆ ಕನಿಷ್ಟ 15 ವರ್ಷ ವಯಸ್ಸಾಗಿರಬೇಕು ಹಾಗೂ 2022ರ ಜನವರಿ 17ಕ್ಕೆ ಅನ್ವಯವಾಗುವಂತೆ 24 ವರ್ಷವನ್ನು ಮೀರಿರಬಾರದು. ಗರಿಷ್ಟ ವಯಸ್ಸಿನ ಮಿತಿಯನ್ನು ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷಗಳ ಕಾಲ ಸಡಿಲಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ ?
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು www.rrccr.com ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕಾಗಿ ಅಭ್ಯರ್ಥಿಗಳು ವೆಬ್ಸೈಟ್ಗೆ ಲಾಗಿನ್ ಆಗಿ ವೈಯಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :
ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ಫೆಬ್ರವರಿ 16 ರ ಸಂಜೆ 5 ರವರೆಗೆ ತೆರೆದಿರುತ್ತದೆ. ಅರ್ಜಿಯ ಯಾವುದೇ ಭೌತಿಕ ಪ್ರತಿಯನ್ನು RRC ಗೆ ಕಳುಹಿಸುವ ಅಗತ್ಯವಿಲ್ಲ.