ಕೊರೋನಾ ಸೋಂಕಿಗೆ ಬಲಿಯಾದ 3 ವಾರದ ಶಿಶು; ಇಲ್ಲಿದೆ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ರೋಗ ಲಕ್ಷಣಗಳ ಕುರಿತ ಮಾಹಿತಿ | Kannada Dunia | Kannada News | Karnataka News | India News
ಕೊರೋನಾ ರೋಗಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆದರೆ ಜ್ವರ ಮತ್ತು ಕೆಮ್ಮು ಸೋಂಕಿಗೆ ಒಳಗಾಗುವ ವಯಸ್ಕರು ಮತ್ತು ಮಕ್ಕಳಲ್ಲಿ ಕಂಡುಬರುವ ಎರಡು ಸಾಮಾನ್ಯ ಲಕ್ಷಣಗಳಾಗಿವೆ.
ತಜ್ಞರ ಪ್ರಕಾರ, ವಯಸ್ಕರಲ್ಲಿ ಉಸಿರಾಟದ ತೊಂದರೆ ಹೆಚ್ಚಾಗಿ ಕಂಡುಬರುತ್ತದೆ. ಮಕ್ಕಳಿಗೂ ನ್ಯುಮೋನಿಯಾ ಆಗಬಹುದು. ಗಂಟಲು ನೋವು, ಅತಿಯಾದ ಆಯಾಸ ಮತ್ತು ಅತಿಸಾರ ಮಕ್ಕಳಲ್ಲಿ ಕಂಡುಬರುತ್ತದೆ. ಕೊರೋನಾ ಸೋಂಕಿಗೆ ತುತ್ತಾದ ಮಕ್ಕಳಿಗೆ ಗಂಭೀರವಾದ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದ್ದು ಪೋಷಕರು ಜಾಗರೂಕರಾಗಿರಿ ಎಂದು ತಜ್ಞರು ಸಲಹೆ ನೀಡಿದ್ದಾರೆ.