ಮಂಡ್ಯ: ಕೋಮುಸೌಹಾರ್ದತೆಗೆ ಧಕ್ಕೆ ತರುವಂತೆ ಹೇಳಿಕೆ ನೀಡಿದ ಆರೋಪ ಹಿನ್ನೆಲೆಯಲ್ಲಿ ಋಷಿಕುಮಾರ ಸ್ವಾಮೀಜಿಯನ್ನು ಶ್ರೀರಂಗಪಟ್ಟಣ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವುವಂತೆ ಚಿಕ್ಕಮಗಳೂರಿನ ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ವಿವಾದಾತ್ಮಕ ವಿಡಿಯೋ ಬಿಡುಗಡೆ ಮಾಡಿದ್ದರು. ಶ್ರೀರಂಗಪಟ್ಟಣದ ದೇವಾಲಯ ಕೆಡವಿ ಮಸೀದಿ ನಿರ್ಮಿಸಿದ್ದಾರೆ. ಇಲ್ಲಿ ಮೊದಲು ದೇವಾಲಯವಿತ್ತು. ಅದನ್ನು ಆದಷ್ಟು ಬೇಗ ಕೆಡವ ಬೇಕು ಎಂದು ಮಸೀದಿ ಮುಂದೆ ನಿಂತು ಹಿಂದೂಗಳಿಗೆ ಕರೆ ಕೊಟ್ಟಿದ್ದರು.
ಸ್ವಾಮೀಜಿ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಇದೀಗ ಪೊಲೀಸರು ಋಷಿಕುಮಾರ ಸ್ವಾಮೀಜಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.