ಪ್ರೌಢ ಶಾಲಾ ಬ್ಯಾಸ್ಕೆಟ್‌ಬಾಲ್ ತಂಡವೊಂದರ ಹುಡುಗಿಯರ ವಿರುದ್ಧ ಅವಾಚ್ಯವಾಗಿ ಮಾತನಾಡಿದ ಆಪಾದನೆ ಮೇಲೆ ಕೆನಡಾದ ಮೇಯ್ನ್‌ನ ಇಬ್ಬರು ರೇಡಿಯೋ ಪ್ರಸಾರಕರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಸ್ಥಳೀಯ ಸುದ್ದಿ ವರದಿಯೊಂದರ ಪ್ರಕಾರ ಜಿಮ್ ಕಾರ್ಟರ್ ಮತ್ತು ಸ್ಟೀವ್ ಶಾ ಎಂಬ ಇಬ್ಬರು ಡಬ್ಲ್ಯೂಎಚ್‌ಓಯು-ಎಫ್‌ಎಂನಲ್ಲಿ ಅನೌನ್ಸರ್‌ಗಳಾಗಿದ್ದು, ತಮ್ಮ ಈ ವಿವಾದಾತ್ಮಕ ಕಾಮೆಂಟ್‌ಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅನಗತ್ಯವಾದ ಕಾರಣಕ್ಕೆ ಸುದ್ದಿ ಮಾಡಿದ್ದಾರೆ. 40-ಸೆಕೆಂಡ್‌ಗಳ ಆಡಿಯೋ ಕ್ಲಿಪ್‌ನಲ್ಲಿ ಅನೌನ್ಸರ್‌ಗಳು, “ಅಲ್ಲಿ ಆಡುತ್ತಿರುವ ಇಬ್ಬರು ಹುಡುಗಿಯರು ಸಿಕ್ಕಾಪಟ್ಟೆ ದಢೂತಿಯಾಗಿದ್ದಾರೆ. ನೋಡಲಾಗದು” ಎಂದಿದ್ದಾರೆ.
14 ರ ಪೋರನ ಬ್ಯಾಸ್ಕೆಟ್ ಬಾಲ್ ಪ್ರೀತಿ..! ನೆರೆಹೊರೆಯವರಿಂದ ಸಿಕ್ತು ಸ್ಪೆಷಲ್ ಗಿಫ್ಟ್
ಇಲ್ಲಿನ ಸೆಂಟ್ರಲ್ ಅರೂಸ್ಟೂಕ್ ಮತ್ತು ಈಸ್ಟನ್ ಪ್ರೌಢಶಾಲೆಗಳ ನಡುವಿನ ಬ್ಯಾಸ್ಕೆಟ್‌ಬಾಲ್ ಪಂದ್ಯವೊಂದರ ವೇಳೆ ಇಷ್ಟು ಸಾಲದೆಂದು ಇಬ್ಬರೂ ಅಣಕದ ನಗೆ ಬೀರಿದ್ದು, ಇನ್ನಷ್ಟು ಹಗುರ ಮಾತುಗಳನ್ನು ಆಡಿದ್ದಾರೆ. ಈ ವೇಳೆ ತಮ್ಮ ಮೈಕ್ರೋಫೋನ್‌ಗಳು ಆನ್ ಇವೆ ಎಂದು ಇಬ್ಬರ ಅರಿವಿಗೆ ಬಂದಿಲ್ಲ. ಇಬ್ಬರು ಹುಡುಗಿಯರಿಗೆ ಹೀಗೆ ಬಾಡಿಶೇಮಿಂಗ್ ಮಾಡಿದ್ದು ಅನೌನ್ಸರ್‌ಗಳಿಗೆ ಸರಿ ಕಂಡು ಬರಲಿಲ್ಲ.
ಈ ವಿಚಾರಕ್ಕೆ ಪ್ರಚಾರ ಸಿಕ್ಕಿ ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಿಗೆ ವ್ಹೌ-ಎಫ್‌ಎಂ ಮಾಲೀಕ ಫ್ರೆಡ್ ಗ್ರಾಂಟ್ ಈ ವಿಚಾರವಾಗಿ ಸಾಕಷ್ಟು ಫೋನ್ ಕಾಲ್‌ಗಳನ್ನು ಸ್ವೀಕರಿಸಿದ್ದಾರೆ. ತೂಕವಿಲ್ಲದೇ, ವಿವೇಚನಾಶೂನ್ಯರಾಗಿ ಮಾತನಾಡಿದ ತಪ್ಪಿಗೆ ಇಬ್ಬರೂ ಅನೌನ್ಸರ್‌ಗಳನ್ನು ರೇಡಿಯೋ ನಿಲ್ದಾಣದಿಂದ ಹೊರಹಾಕಲಾಗಿದೆ.