alex Certify BIG NEWS: ಪ್ರಯಾಣಿಕರಿಗೆ ಇಲ್ಲಿದೆ ಮುಖ್ಯ ಮಾಹಿತಿ; ಕೆಲ ರೈಲುಗಳ ಸೇವೆಯಲ್ಲಿ ವ್ಯತ್ಯಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪ್ರಯಾಣಿಕರಿಗೆ ಇಲ್ಲಿದೆ ಮುಖ್ಯ ಮಾಹಿತಿ; ಕೆಲ ರೈಲುಗಳ ಸೇವೆಯಲ್ಲಿ ವ್ಯತ್ಯಯ

ಬೆಂಗಳೂರು – ಮೈಸೂರು ಭಾಗದ ಬಿಡದಿ – ಹೆಜ್ಜಾಲ ನಿಲ್ದಾಣದ ನಡುವೆ ದಿನಾಂಕ 18.01.2022 ಮತ್ತು 19.01.2022 ರಂದು ಇಂಜಿನಿಯರಿಂಗ್  ಕಾಮಗಾರಿ(ಗರ್ಡರ್ ಸ್ಥಾಪನೆ) ಯ ಸಲುವಾಗಿ ಟ್ರಾಫಿಕ್ ಬ್ಲಾಕ್ ಮತ್ತು ಪವರ್ ಬ್ಲಾಕ್‌ ಇರುವ ನಿಮಿತ್ತ ರೈಲುಗಳ ಸೇವೆಯಲ್ಲಿ ಈ ಕೆಳಗಿನಂತೆ ಬದಲಾವಣೆಗಳನ್ನು ಮಾಡಲಾಗಿದೆ.

ರೈಲುಗಳ ಸೇವೆ ರದ್ದು:

ದಿನಾಂಕ  18.01.2022 ರಂದು ಮೈಸೂರುನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 06560 ಮೈಸೂರು – ಕೆ.ಎಸ್.ಆರ್  ಬೆಂಗಳೂರು ಮೆಮು ವಿಶೇಷ ಪ್ಯಾಸೆಂಜರ್ ನ ಸೇವೆಯನ್ನು ರದ್ದುಗೊಳಿಸಲಾಗುತ್ತದೆ.

ದಿನಾಂಕ  19.01.2022 ರಂದು ಕೆ.ಎಸ್.ಆರ್  ಬೆಂಗಳೂರಿನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 06559 ಕೆ.ಎಸ್.ಆರ್  ಬೆಂಗಳೂರು – ಮೈಸೂರು  ಮೆಮು ವಿಶೇಷ ಪ್ಯಾಸೆಂಜರ್ ನ ಸೇವೆಯನ್ನು ರದ್ದುಗೊಳಿಸಲಾಗುತ್ತದೆ.

ರೈಲಿನ ನಿಯಂತ್ರಣ:

ದಿನಾಂಕ 18.01.2022 ರ ರೈಲು ಸಂಖ್ಯೆ 16021 ಎಮ್.ಜಿ.ಆರ್ ಚೆನ್ನೈ ಸೆಂಟ್ರಲ್ – ಮೈಸೂರು ಕಾವೇರಿ ಎಕ್ಸ್ ಪ್ರೆಸ್ ರೈಲನ್ನು ಹೆಜ್ಜಾಲ ನಿಲ್ದಾಣದಲ್ಲಿ 15 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.

ರೈಲಿನ ನಿಯಂತ್ರಣ / ರೈಲಿನ ಮಾರ್ಗ ಬದಲಾವಣೆ

ಬೆಂಗಳೂರು ವಿಭಾಗದ ಬಾಣಸವಾಡಿ – ಹೆಬ್ಬಾಳ – ಲೊಟ್ಟೆಗಲ್ಲಹಳ್ಳಿ ಭಾಗದಲ್ಲಿ ಇಂಜಿನಿಯರಿಂಗ್ ಕಾಮಗಾರಿಯ ಸಲುವಾಗಿ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ಇರುವ ನಿಮಿತ್ತ ರೈಲುಗಳ ಸೇವೆಯಲ್ಲಿ ಈ ಕೆಳಗಿನಂತೆ ಬದಲಾವಣೆಗಳನ್ನು ಮಾಡಲಾಗಿದೆ.

 ರೈಲಿನ ನಿಯಂತ್ರಣ:

ದಿನಾಂಕ 19.01.2022, 23.01.2022 ಹಾಗೂ 26.01.2022 ರ ರೈಲು ಸಂಖ್ಯೆ 11006 ಪುದುಚೆರಿ – ದಾದರ್ ಚಾಲುಕ್ಯ ಎಕ್ಸ್ ಪ್ರೆಸ್ ರೈಲನ್ನು ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ 20 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.

ದಿನಾಂಕ 21.01.2022 ರ ರೈಲು ಸಂಖ್ಯೆ 11022 ತಿರುನೆಲ್ವೇಲಿ – ದಾದರ್ ಎಕ್ಸ್ ಪ್ರೆಸ್ ರೈಲನ್ನು ಮಾರ್ಗಮಧ್ಯದ ನಿಲ್ದಾಣಗಳಲ್ಲಿ 60 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.

ದಿನಾಂಕ 21.01.2022 ರ ರೈಲು ಸಂಖ್ಯೆ 22678 ಕೊಚ್ಚುವೇಲಿ – ಯಶವಂತಪುರ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲನ್ನು ಮಾರ್ಗಮಧ್ಯದ ನಿಲ್ದಾಣಗಳಲ್ಲಿ 45 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.

ರೈಲಿನ ಮಾರ್ಗ ಬದಲಾವಣೆ:

ದಿನಾಂಕ 18.01.2022 ಹಾಗೂ 25.01.2022 ರ ರೈಲು ಸಂಖ್ಯೆ. 12835 ಹಟಿಯಾ – ಯಶವಂತಪುರ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಕೃಷ್ಣರಾಜಪುರಂ, ಚನ್ನಸಂದ್ರ, ಯಲಹಂಕ ಹಾಗೂ ಯಶವಂತಪುರ ನಿಲ್ದಾಣಗಳ ಮಾರ್ಗವಾಗಿ ಬದಲಾದ ಮಾರ್ಗದಲ್ಲಿ ಸಂಚರಿಸುವುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...