ಮೈಸೂರು: ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಕರವೇ ನಾರಾಯಣಗೌಡ ವಿರೋಧ ವ್ಯಕ್ತಪಡಿಸಿದ ವಿಚಾರವಾಗಿ ವಾಗ್ದಾಳಿ ನಡೆಸಿರುವ ಸಂಸದ ಪ್ರತಾಪ್ ಸಿಂಹ, ನಾರಾಯಣಗೌಡ ಹೆಸರಲ್ಲೇ ಸಂಸ್ಕೃತ ಇದೆ ಹಾಗಂತ ಅವರು ತಮ್ಮ ಹೆಸರು ಬದಲಿಸಿಕೊಳ್ತಾರಾ? ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಟಿಪ್ಪು ಜಯಂತಿ ಆಚರಣೆ, ಟಿಪ್ಪು ವಿವಿ ಸ್ಥಾಪನೆ, ಕನ್ನಡದ ಹಲವು ವಿಚಾರಗಳ ಬಗ್ಗೆ ನಾರಾಯಣಗೌಡರು ಧ್ವನಿ ಎತ್ತಲಿಲ್ಲ. ಈಗ ಸಂಸ್ಕೃತ ವಿವಿ ಸ್ಥಾಪನೆ ವಿಚಾರವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರಧಾನಿ ಮೋದಿ ವಿಚಾರವನ್ನು ವಿರೋಧಿಸುವುದನ್ನು ಮೊದಲು ಬಿಡಿ. ಸಂಸ್ಕೃತ ಭಾಷೆ ಕನ್ನಡ ಭಾಷೆ ಜತೆ ಬೆರೆತುಹೋಗಿದೆ. ಹುಟ್ಟು, ಸಾವು, ನಾಮಕರಣ, ಮದುವೆ ತಿಥಿ ಎಲ್ಲದರಲ್ಲೂ ಸಂಸ್ಕೃತ ಇದೆ. ಕನ್ನಡ-ಸಂಸ್ಕೃತ ಬೇರೆ ಮಾಡುವ ಕೆಲಸ ಮಾಡಬೇಡಿ ಎಂದು ಗುಡುಗಿದ್ದಾರೆ.