ಕಳೆದ ಎರಡು ವರ್ಷಗಳಲ್ಲಿ, ಕೊರೋನ ವೈರಸ್ ಸೋಂಕಿಗೆ ಒಳಗಾದ ಹೆಚ್ಚಿನ ಜನರಲ್ಲಿ ಮೂರು ಪ್ರಮುಖ ರೋಗ ಲಕ್ಷಣಗಳು ಕಂಡುಬಂದವು. ಹೈ ಟೆಂಪರೇಚರ್, ನಿರಂತರ ಕೆಮ್ಮು, ವಾಸನೆ ಮತ್ತು ರುಚಿ ಸಿಗದಿರುವುದು ಅಥವಾ ಬದಲಾವಣೆ. ಆದರೆ ಹೊಸ ರೂಪಾಂತರಗಳಿಂದ ರೋಗಲಕ್ಷಣಗಳಲ್ಲಿ ತೀವ್ರವಾದ ಬದಲಾವಣೆ ಉಂಟಾಗಿದೆ.
ಈ ಮೂರು ಸಿಂಪ್ಟಮ್ಸ್ ಹೊರತಾಗಿ, ಸೋಂಕಿತರಲ್ಲಿ ವಿವಿಧ ಸಿಂಪ್ಟಮ್ಸ್ ಕಾಣಿಸತೊಡಗಿವೆ, ಇದರಿಂದ ಆರಂಭಿಕ ಹಂತದಲ್ಲಿ ಸೋಂಕನ್ನು ಗುರುತಿಸುವುದು ಸ್ವಲ್ಪ ಕಷ್ಟಕರವಾಗುತ್ತಿದೆ.
ಸಧ್ಯಕ್ಕಿರುವ ಪರಿಸ್ಥಿತಿಯಲ್ಲಿ ಒಮಿಕ್ರಾನ್ ಜಗತ್ತಿನಾದ್ಯಂತ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗಿದೆ. ಭಾರತದಲ್ಲಿ 2.40 ಲಕ್ಷಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. ಅದರಲ್ಲಿ ಹೆಚ್ಚಿನವು ಒಮಿಕ್ರಾನ್ ರೂಪಾಂತರದಿಂದಾಗಿ ಸಂಭವಿಸಿವೆ. ಪ್ರಪಂಚದಾದ್ಯಂತ ಸಂಗ್ರಹಿಸಿದ ಮಾಹಿತಿಯಲ್ಲಿ, ಕೊರೋನಾ ಸೋಂಕಿನ ಸಾಮಾನ್ಯ ಲಕ್ಷಣಗಳ ಹೊರತಾಗಿ, ಒಮಿಕ್ರಾನ್ ಕೆಲವು ಅಸಾಮಾನ್ಯ ಲಕ್ಷಣಗಳಿಗೆ ಕಾರಣವಾಗಬಹುದು ಎಂದು ತಿಳಿದುಬಂದಿದೆ.
ಒಮಿಕ್ರಾನ್ ಸೋಂಕು ತಗುಲಿದ ಸಂದರ್ಭದಲ್ಲಿ, ಜನರಲ್ಲಿ ಸಾಮಾನ್ಯವಾಗಿ ಶೀತ ಕಂಡುಬರುತ್ತಿದೆ. ಇದಲ್ಲದೆ, ರನ್ನಿನೋಸ್, ತಲೆನೋವು, ಸೀನುವುದು, ಗಂಟಲು ಕೆರೆತ, ನಿರಂತರ ಕೆಮ್ಮು, ಜ್ವರ, ರುಚಿ ಮತ್ತು ವಾಸನೆ ಸಿಗದಿರುವುದು ಈ ರೋಗದ ಸಾಮಾನ್ಯ ಲಕ್ಷಣಗಳು.
ಚರ್ಮದಲ್ಲಾಗುವ ರ್ಯಾಷಸ್ ಗೆ ಅಲರ್ಜಿಗಳು ಅಥವಾ ಬಿಸಿಲು ಕಾರಣವಾಗಬಹುದು. ಆದರೆ ಈ ಸಂದರ್ಭದಲ್ಲಿ ಈ ರೋಗಲಕ್ಷಣವನ್ನ ಕೊರೋನಾ ಸೋಕಿನ ರೋಗಲಕ್ಷಣಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ. ಕೊರೋನಾ ಸೋಂಕಿದ್ದವರಲ್ಲಿ, ಚರ್ಮ, ಬೆರಳುಗಳು, ಕಾಲ್ಬೆರಳುಗಳು, ಬಾಯಿ ಮತ್ತು ನಾಲಿಗೆ ಮೇಲೆ ದದ್ದುಗಳು(Rashes) ಕಾಣಿಸಿಕೊಳ್ಳುತ್ತಿವೆ. ಒಮಿಕ್ರಾನ್ ಇದ್ದವರಲ್ಲಿ ಈ ಲಕ್ಷಣ ಸಾಮಾನ್ಯವಾಗಿದೆ ಎಂದು ಹೇಳಲಾಗ್ತಿದೆ.
ಡೆಲಿರಿಯಮ್ ಒಂದು ರೀತಿಯ ಮಾನಸಿಕ ರೋಗ, ಇದಕ್ಕೂ ಕೊರೋನಾಗು ಏನು ಸಂಬಂಧ ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಬಹುದು. ಅದಕ್ಕೆ ಉತ್ತರ ಹೆಚ್ಚಿನ ಸೋಂಕಿತರು, ಸೋಂಕು ತಗುಲಿದ ಸಂದರ್ಭದಲ್ಲಿ ಗೊಂದಲ ಹಾಗೂ ಸುತ್ತಮುತ್ತಲಿನ ಪರಿಸರದ ಅರಿವೆ ಇಲ್ಲದಂತೆ ಇರುತ್ತಾರೆ. ಈ ಬಗ್ಗೆ ತಜ್ಞರು ಮಾಹಿತಿ ನೀಡಿದ್ದು, ಈ ಲಕ್ಷಣ ಹೆಚ್ಚಾಗಿ ವೃದ್ಧರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸೋಂಕಿತರಾದ ಹೊಸದರಲ್ಲಿ ಹೀಗೆ ಆಡುತ್ತಾರೆ ಎಂದಿದ್ದಾರೆ. ಸೋಂಕಿನಿಂದ ಚೇತರಿಸಿಕೊಂಡ ನಂತರ ರೋಗಲಕ್ಷಣಗಳು ಕಣ್ಮರೆಯಾಗುತ್ತವೆ ಎಂದಿದ್ದಾರೆ.
ಕೊರೋನಾ ಸೋಂಕಿತರು ಸಾಮಾನ್ಯವಾಗಿ ಹಸಿವಿನ ನಷ್ಟಕ್ಕೆ ತುತ್ತಾಗುತ್ತಾರೆ. ಪ್ರತಿ ಮೂವರು ಸೋಂಕಿತರಲ್ಲಿ ಒಬ್ಬರು ವಾರಗಟ್ಟಲೆ ಊಟ ಬಿಡುತ್ತಾರೆ ಎಂದು ತಜ್ಞರು ಹೇಳಿದ್ದಾರೆ.