alex Certify ನಂಬಲಸಾಧ್ಯವಾದರೂ ಇದು ಸತ್ಯ…! ಕ್ಯೂನಲ್ಲಿ ನಿಂತೇ ನಿತ್ಯ 16 ಸಾವಿರ ರೂ. ದುಡಿಮೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಂಬಲಸಾಧ್ಯವಾದರೂ ಇದು ಸತ್ಯ…! ಕ್ಯೂನಲ್ಲಿ ನಿಂತೇ ನಿತ್ಯ 16 ಸಾವಿರ ರೂ. ದುಡಿಮೆ

ಶಾಪಿಂಗ್ ಮಾಲ್‌ಗಳ ಬಿಲ್ ಕೌಂಟರ್‌ಗಳಲ್ಲಿ, ಬಾರ್‌ಗಳಲ್ಲಿ, ವಿಮಾನ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದು, ತಾಸುಗಟ್ಟಲೆ ಕಾಯುವುದು ಎಂದರೆ ಬಹುತೇಕ ಜನರಿಗೆ ಕಿರಿಕಿರಿಯ ಸಂಗತಿಯೇ. ಆದರೆ, ಲಂಡನ್‌ನಲ್ಲಿ ವ್ಯಕ್ತಿಯೊಬ್ಬ ಇದೇ ಕಿರಿಕಿರಿಯನ್ನೇ ಬಂಡವಾಳವನ್ನಾಗಿಸಿಕೊಂಡಿದ್ದು, ಬೇರೆಯವರ ಪರವಾಗಿ ಕ್ಯೂನಲ್ಲಿ ನಿಲ್ಲುವ ಮೂಲಕ ನಿತ್ಯ ಸುಮಾರು 16 ಸಾವಿರ ರೂ. ದುಡಿಯುತ್ತಿದ್ದಾರೆ. ಆ ಮೂಲಕ ಬೇರೆಯವರ ಕಿರಿಕಿರಿಯನ್ನೇ ತನ್ನ ಆದಾಯದ ಮೂಲವನ್ನಾಗಿಸಿಕೊಂಡಿದ್ದಾರೆ.

ಫ್ರೆಡ್ಡಿ ಬೆಕಿಟ್ ಎಂಬ 31 ವರ್ಷದ ವ್ಯಕ್ತಿಯು ಲಂಡನ್‌ನಲ್ಲಿ ಬೇರೆಯವರ ಪರವಾಗಿ ಕ್ಯೂ ನಿಲ್ಲುತ್ತಾರೆ. ಸರತಿ ಸಾಲಿನಲ್ಲಿ ನಿಲ್ಲಬೇಕಾದವರು ಈತನನ್ನು ಸಂಪರ್ಕಿಸಿದರೆ ಸಾಕು, ಆತ ತಾಸುಗಟ್ಟಲೆ ಕ್ಯೂನಲ್ಲಿ ನಿಂತು ಬೇರೆಯವರ ಕೆಲಸ ಮಾಡಿಕೊಡುತ್ತಾರೆ. ಇದಕ್ಕಾಗಿ ಆತ ತಾಸಿಗೆ ಸುಮಾರು 1,400 ರೂ. (20 ಡಾಲರ್) ಶುಲ್ಕ ಪಡೆಯಲಿದ್ದು, ನಿತ್ಯ ಇದರಿಂದ 16 ಸಾವಿರ ರೂ.ವರೆಗೆ ಕಮಾಯಿ ಮಾಡುತ್ತಿದ್ದಾರೆ.

ಖೇಲೋ ಇಂಡಿಯಾ ಯೋಜನೆ: ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಅರ್ಜಿ ಆಹ್ವಾನ

ವಿ ಆ್ಯಂಡ್ ಎ ಒಡೆತನದ ಕ್ರಿಶ್ಚಿಯನ್ ಡಿಯೋರ್‌ನಲ್ಲಿ ಸರತಿ ಸಾಲಿನಲ್ಲಿ ಕಾಯಬೇಕಾದವರು, 60 ವರ್ಷ ದಾಟಿದವರಿಗೆ ಫ್ರೆಡ್ಡಿ ಬಿಕೆಟ್ ನೆರವಾಗುತ್ತಿದ್ದಾರೆ. ಮ್ಯೂಸಿಯಂನಲ್ಲಿ ಟಿಕೆಟ್ ಖರೀದಿಸಲು, ಒಳಗೆ ಪ್ರವೇಶಿಸಲು ಅವರ ಪಾಳಿ ಬರುವ ತನಕ ನಾನೇ ಕ್ಯೂನಲ್ಲಿ ನಿಲ್ಲುತ್ತೇನೆ. ನಿತ್ಯ ಎಂಟು ಗಂಟೆ ಕ್ಯೂನಲ್ಲಿ ನಿಲ್ಲುತ್ತಿರುವುದರಿಂದ ಉತ್ತಮ ಆದಾಯವೂ ಲಭಿಸುತ್ತಿದೆ. ಹಿರಿಯರು ಮಾತ್ರವಲ್ಲ, ಕಿರಿಯರು ಸಹ ತಮ್ಮ ಪರವಾಗಿ ಕ್ಯೂನಲ್ಲಿ ನಿಲ್ಲಲು ನನಗೆ ಹಣ ನೀಡುತ್ತಾರೆ ಎಂದು ಫ್ರೆಡ್ಡಿ ತಿಳಿಸಿದ್ದಾರೆ. ಬೇರೆಯವರ ಸಮಸ್ಯೆ, ಕಿರಿಕಿರಿಯನ್ನೇ ಅವಕಾಶ ಮಾಡಿಕೊಂಡಿರುವ ಇವರ ಬಗ್ಗೆ ಹಲವು ಮಾಧ್ಯಮಗಳು ವರದಿ ಮಾಡಿವೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...