ಕಳೆದ ಕೆಲ ವರ್ಷಗಳಿಂದ ಬೇಡಿಕೆ ಕಡಿಮೆಯಾಗಿರುವ ಅಂತಾರಾಷ್ಟ್ರೀಯ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಕಳೆದ 13 ವರ್ಷಗಳಿಂದ ತಮ್ಮ ಇಡೀ ಜೀವನಶೈಲಿ ಮತ್ತು ಖರ್ಚುವೆಚ್ಚಗಳನ್ನೆಲ್ಲಾ ತಂದೆಯೇ ನೋಡಿಕೊಳ್ಳುವಂತಾಗಿದೆ. ಇದೇ ಅವಧಿಯಲ್ಲಿ ಬ್ರಿಟ್ನಿ ತನ್ನ ಕುಟುಂಬಸ್ಥರೊಂದಿಗೆ ಒಳ್ಳೆಯ ಬಾಂಧವ್ಯ ಕಾಪಾಡಿಕೊಳ್ಳಲು ಸಾಧ್ಯವಾಗಿಲ್ಲ.
ಇದೀಗ ತಮ್ಮ ವೆಚ್ಚದಲ್ಲಿ ತನ್ನ ಸಹೋದರಿ ಜೇಮಿ ಲಿನ್ನ್ ಸ್ಪಿಯರ್ಸ್ ಟಿವಿ ಸಂದರ್ಶನವೊಂದರಲ್ಲಿ ಭಾಗಿಯಾಗಿ ತಾನು ಬರೆದ ಪುಸ್ತಕವನ್ನು ಪ್ರಚಾರ ಮಾಡಿಕೊಂಡಿದ್ದಾರೆ ಎಂದು ಬ್ರಿಟ್ನಿ ಆಪಾದಿಸಿದ್ದಾರೆ.
ಟಿವಿಎಸ್ ಮೋಟರ್ – ಸ್ವಿಗ್ಗಿ ನಡುವೆ ಒಪ್ಪಂದ, ಫುಡ್ ಡೆಲಿವರಿಗೆ ಎಲೆಕ್ಟ್ರಿಕ್ ವಾಹನ ಬಳಕೆ
ಎಬಿಸಿಯ ಗುಡ್ ಮಾರ್ನಿಂಗ್ ಅಮೆರಿಕಾ ಶೋನಲ್ಲಿ ಭಾಗಿಯಾಗಿದ್ದ ಜೇಮಿ, ತನ್ನ ’ಥಿಂಗ್ಸ್ ಐ ಶುಡ್ ಹ್ಯಾವ್ ಸೆಡ್’ ಪುಸ್ತಕವನ್ನು ಈ ವೇಳೆ ಪ್ರಮೋಟ್ ಮಾಡಿದ್ದು, ಬ್ರಿಟ್ನಿ ಜೊತೆಗೆ ತನ್ನ ಸಂಬಂಧ ಹಾಗೂ ಆಕೆಯ ವಿವಾದಿತ ನಡೆಗಳಲ್ಲಿ ತನ್ನ ಪಾತ್ರದ ಕುರಿತು ಹೇಳಿಕೊಂಡಿದ್ದರು. ಐದು ವರ್ಷಗಳ ಹಿಂದೆ ತನ್ನ ಮಗಳಿಗೆ ಅಪಘಾತವಾದ ಬಗ್ಗೆಯೂ ಜೇಮಿ ಈ ವೇಳೆ ಹೇಳಿಕೊಂಡಿದ್ದರು.
ಇದೀಗ ಈ ಸಂದರ್ಶನದ ಬಗ್ಗೆ ಬ್ರಿಟ್ನಿ ಟ್ವಿಟರ್ ಹ್ಯಾಂಡಲ್ ಮೂಲಕ ಬಹಳ ವಿವರವಾದ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಜೇಮಿಯ ವರ್ತನೆ ನಿಯಂತ್ರಣ ಮೀರಿದ್ದು ಎಂದು ಬ್ರಿಟ್ನಿ ಹೇಳಿಕೊಂಡಿದ್ದು, ಕಳೆದ 15 ವರ್ಷಗಳಿಂದ ಜೇಮಿ ತಮ್ಮೊಂದಿಗೆ ಅಷ್ಟಾಗಿ ಜೊತೆಯಲ್ಲಿ ಇರಲಿಲ್ಲ ಎಂದು ಬ್ರಿಟ್ನಿ ಇದೇ ವೇಳೆ ಹೇಳಿದ್ದಾರೆ. ತನ್ನ ವೆಚ್ಚದಲ್ಲಿ ಜೇಮಿ ಪುಸ್ತಕ ಪ್ರಮೋಟ್ ಮಾಡಿಕೊಂಡಿರುವುದು ಸರಿಯಲ್ಲ ಎಂದು ಟ್ವೀಟ್ನಲ್ಲಿ ಬ್ರಿಟ್ನಿ ತಿಳಿಸಿದ್ದಾರೆ.
https://twitter.com/britneyspears/status/1481768609684738048