ಗೋಲ್ಗಪ್ಪಾ ದೇಶದ ಬಹುಮಂದಿಗೆ ಬಹಳ ಇಷ್ಟವಾಗುವ ತಿನಿಸು. ಆಲೂಗಡ್ಡೆ ಅಥವಾ ಕಡಲೇಕಾಳುಗಳಿಂದ ಭರಿತವಾಗಿರುವ ಈ ಪುರಿಗಳಲ್ಲಿ ಜಲ್ಜೀರಾ ತುಂಬಿ ಕೊಟ್ಟಾಗ ಸಿಗುವ ರುಚಿ ಬಲು ಮಜವಾಗಿರುತ್ತದೆ.
ಲಖನೌನ ಗೋಲ್ಗಪ್ಪಾವಾಲಾ ಒಬ್ಬರು ಗೋಲ್ಗಪ್ಪಾ ಪುರಿಗಳ ಒಳಗೆ ಚೌಮೀನ್ ತುಂಬಿಕೊಟ್ಟಿದ್ದು ಒಂದು ವಿಚಿತ್ರ ಟ್ರೆಂಡ್ಗೆ ಚಾಲನೆ ಕೊಟ್ಟಿದ್ದಾರೆ. ಈ ಚೌಮೀನ್ ಗೋಲ್ಗಪ್ಪಾದ ವಿಡಿಯೋ ವೈರಲ್ ಆಗಿದ್ದು, ಎರಡೂ ತಿನಿಸುಗಳನ್ನು ಪ್ರತ್ಯೇಕವಾಗಿ ಸವಿದು ಆನಂದಿಸುತ್ತಿದ್ದ ಮಂದಿಗೆ ’ಇದೇನಪ್ಪಾ ಹೀಗೆ’ ಎನಿಸಿದೆ.
ವಿಡಿಯೋ ಕಾಲ್ ನೆರವಿನಿಂದ ಬಸ್ಸಿನಲ್ಲಿದ್ದ ಮಹಿಳೆಗೆ ಹೆರಿಗೆ…!
ಆರ್ಜೆ ರೋಹನ್ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಶೆಫ್ ಕಾಂಡಿ ಎಂದು ಕರೆಯಲಾಗುವ ವ್ಯಕ್ತಿಯೊಬ್ಬರು ಅದಾಗಲೇ ಆಲೂಗಡ್ಡೆಯಿಂದ ತುಂಬಿದ ಗೋಲ್ಗಪ್ಪಾಗಳ ಮೇಲೆ ಮಸಾಲೆಗಳು ಮತ್ತು ಸಿಹಿ ಚಟ್ನಿ ಹಾಕಿರುವುದನ್ನು ನೋಡಬಹುದಾಗಿದೆ.
ಇದಾದ ಬಳಿಕ ಗೋಲ್ಗಪ್ಪಾ ಮೇಲೆ ಚೌಮೀನ್ ಹಾಕುವ ಈತ ಅದರ ಮೇಲೆ ಒಂದಷ್ಟು ಚಟ್ನಿ ಹಾಕುತ್ತಾರೆ. ಇದರ ಮೇಲೆ ಮೊಸರು, ಟುಟ್ಟಿ-ಫ್ರೂಟಿ, ಕೊತ್ತಂಬರಿ ಮತ್ತು ತುರಿದ ಕಾಯಿ ಹಾಕುತ್ತಾರೆ ಈ ಗೋಲ್ಗಪ್ಪಾವಾಲಾ. ಸರ್ವಿಂಗ್ ಮಾಡುವ ಮುನ್ನ ಕೆಂಪು ಮತ್ತು ಹಸಿರು ಚಟ್ನಿಯನ್ನು ಹಾಕಿ ಕೊಡುತ್ತಾರೆ ಈತ.