ಕೊರೋನಾ ವಿರುದ್ಧ ವ್ಯಾಕ್ಸಿನೇಷನ್ ಅನ್ನು ಪ್ರಬಲ ಅಸ್ತ್ರ ಎಂದು ಕರೆದಿರುವ ಅಮೆರಿಕನ್ ತಜ್ಞರೊಬ್ಬರು ಸಾಂಕ್ರಾಮಿಕ ರೋಗವು ಶಾಶ್ವತವಾಗಿ ಮುಂದುವರಿಯಲು ಸಾಧ್ಯವಿಲ್ಲ, ಅದರ ಅಂತ್ಯವು ಬಹಳ ಹತ್ತಿರದಲ್ಲಿದೆ ಎಂದು ಹೇಳಿದ್ದಾರೆ. ವಾಷಿಂಗ್ಟನ್, DC ಯ ವಿಜ್ಞಾನಿ ಮತ್ತು ವೈರಾಲಜಿಸ್ಟ್ ಡಾ. ಕುತುಬ್ ಮಹಮೂದ್, ಒಂದಲ್ಲಾ ಒಂದು ದಿನ ವೈರಸ್ ಸೋಲುತ್ತದೆ, ಮಾನವರು ಗೆಲ್ಲುತ್ತಾರೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.
ಮಾನವರಲ್ಲಿ ಬದಲಾಗುತ್ತಿರುವ ರೋಗನಿರೋಧಕ ಶಕ್ತಿಗೆ ಹೊಂದಿಕೊಳ್ಳಲು ಹಾಗೂ ರೂಪಾಂತರಗೊಳ್ಳಲು ವೈರಸ್ ನ ಮೇಲೆ ಒತ್ತಡವಿದೆ. ಈ ಒತ್ತಡದಿಂದ ತಪ್ಪಿಸಿಕೊಳ್ಳಲು ಈ ರೀತಿಯಾಗಿ ಮ್ಯುಟೇಟ್ ಆಗಲು ಪ್ರಯತ್ನಿಸುತ್ತಿದೆ, ಇದು ಒಂಥರಾ ಚೆಸ್ ಆಟದಂತಾಗಿದೆ ಎಂದು ಮಹಮೂದ್ ಹೇಳಿದ್ದಾರೆ.
ಕೊರೋನಾ ಆತಂಕದಲ್ಲಿದ್ದ ದೇಶದ ಜನತೆಗೆ ಗುಡ್ ನ್ಯೂಸ್
ವೈರಸ್ ಮತ್ತು ಮಾನವರ ನಡುವಿನ ಅನಾಲಜಿ ಇಷ್ಟೇ, ಆ ವೈರಸ್ ರೂಪಾಂತರಗಳ ಮೂಲಕ ತನ್ನ ಬಾಜಿಯನ್ನ ಹೊರಹಾಕುತ್ತಿದೆ, ಮನುಷ್ಯರಾದ ನಾವು ನಮ್ಮ ಕಡೆಯಿಂದ ಎದುರು ಜವಾಬು ನೀಡುತ್ತಿದ್ದೇವೆ. ಫೇಸ್ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ಗಳು, ಸಾಮಾಜಿಕ ಅಂತರದಂತಹ ಸಣ್ಣ ಅಸ್ತ್ರಗಳನ್ನ ನಾವು ಹೊಂದಿದ್ದೇವೆ. ಲಸಿಕೆಗಳು, ಆಂಟಿವೈರಲ್ಗಳು ಮತ್ತು ಪ್ರತಿಕಾಯಗಳು ನಾವು ವೈರಸ್ ವಿರುದ್ಧ ಬಳಸಬಹುದಾದ ಶಸ್ತ್ರಾಸ್ತ್ರಗಳು ಎಂದು ಮಹಮೂದ್ ಹೇಳಿದ್ದಾರೆ.
ಒಂದು ವರ್ಷದೊಳಗೆ 60 ಪ್ರತಿಶತದಷ್ಟು ವ್ಯಾಕ್ಸಿನೇಷನ್ ಸಾಧಿಸಿದ್ದಕ್ಕಾಗಿ ಭಾರತವನ್ನು ಶ್ಲಾಘಿಸಿರುವ ಅವರು, ಇದು ದೇಶಕ್ಕೆ ಮತ್ತು ಭಾರತೀಯ ಲಸಿಕೆ ತಯಾರಕರಿಗೆ ನಿಜವಾಗಿಯೂ ದೊಡ್ಡ ಸಾಧನೆ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ಕೊರೋನಾ ವೈರಸ್ ಗಳ ಹೊಸ ರೂಪಾಂತರಗಳು ಕಂಡುಬಂದರೆ ವೈಜ್ಞಾನಿಕ ಸಮುದಾಯವು ಆಶ್ಚರ್ಯಪಡುವುದಿಲ್ಲ ಎಂದಿದ್ದಾರೆ. ಜೊತೆಗೆ ಭಾರತ್ ಬಯೋಟೆಕ್ ನ ಕೋವಾಕ್ಸಿನ್ ಅನ್ನು “ವಿಶಿಷ್ಟ ಉತ್ಪನ್ನ” ಎಂದು ಕರೆದಿರುವ ಅವರು, ಇದು 2 ವರ್ಷ ವಯಸ್ಸಿನ ಮಕ್ಕಳಿಗೂ ಸುರಕ್ಷಿತಾ ಔಷಧಿ ಎಂದು ಹೇಳಿದ್ದಾರೆ.