ಭ್ರಷ್ಟಾಚಾರವು ಸರ್ಕಾರಿ ಅಧಿಕಾರಿಗಳ ರಕ್ತಕ್ಕೆ ನುಸುಳಿದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಅನುಕಂಪದ ಆಧಾರದ ಮೇಲೆ ನೇಮಕಾತಿ ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸಿದ ಮಹಿಳೆಯೊಬ್ಬರ ಮನವಿಯನ್ನ ವಜಾ ಮಾಡಿರುವ ನ್ಯಾಯಾಲಯ, ವಿಚಾರಣೆ ಸಂದರ್ಭದಲ್ಲಿ ಈ ಮಾತುಗಳನ್ನಾಡಿದೆ.
ನ್ಯಾಯಮೂರ್ತಿ ಎಸ್ ವೈದ್ಯನಾಥನ್ ಮತ್ತು ನ್ಯಾಯಮೂರ್ತಿ ಎ ಎ ನಕ್ಕೀರನ್ ಅವರ ವಿಭಾಗೀಯ ಪೀಠವು ತಮಿಳುನಾಡು ಸರ್ಕಾರ ಸಲ್ಲಿಸಿದ ಮೇಲ್ಮನವಿಯನ್ನು ಅನುಮತಿಸುವ ಸಂದರ್ಭದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಅನುಕಂಪದ ಆಧಾರದ ಮೇಲೆ ನೇಮಕಾತಿ ಪಡೆಯಲು ಸತ್ಯವನ್ನು ಮುಚ್ಚಿಹಾಕಿ ಸುಳ್ಳು ದಾಖಲೆಗಳನ್ನ ಒದಗಿಸಿದ ಕಾರಣಕ್ಕಾಗಿ ಎಂ ತಮಿಳುಸೆಲ್ವಿ ಎನ್ನುವ ಮಹಿಳೆಯನ್ನ ಸೇವೆಯಿಂದ ವಜಾಗೊಳಿಸಲಾಗಿತ್ತು. ವಜಾಗೊಳಿಸಿರುವ ಆದೇಶವನ್ನು ನವೆಂಬರ್ 6, 2020 ರಂದು ಕಡ್ಡಾಯ ನಿವೃತ್ತಿ ನ್ಯಾಯಾಲಯದ ಏಕ ನ್ಯಾಯಾಧೀಶರು ಆದೇಶ ನೀಡಿದ್ದರು. ಈ ಆದೇಶವನ್ನ ಸರ್ಕಾರ ಒಪ್ಪಿತ್ತಿದಾದರೂ, ಮಹಿಳೆ ಈ ಆದೇಶವ್ನ ಪ್ರಶ್ನಿಸಿ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು.
ಈಗ ಸರ್ಕಾರದ ಮೇಲ್ಮನವಿಯನ್ನು ಅಂಗೀಕರಿಸಿರುವ ಪೀಠ, ರಿಟ್ ಅರ್ಜಿದಾರರು ತಪ್ಪು ಮಾಡಿದ್ದಾರೆ ಎಂದು ಮನದಟ್ಟಾಗಿದ್ದರೂ, ಇಲಾಖೆಯ ಅಧಿಕಾರಿಗಳು ಅವಳನ್ನು ತಪ್ಪು ಮಾಡಲು ಪ್ರೇರೇಪಿಸುವಲ್ಲಿ ಸ್ವಲ್ಪ ಪಾತ್ರ ವಹಿಸಿರಬೇಕು ಎಂದ ನ್ಯಾಯಾಧೀಶರು ಸೇವೆಯಿಂದ ತೆಗೆದು ಹಾಕಿರುವುದನ್ನ ಕಡ್ಡಾಯ ನಿವೃತ್ತಿಯಾಗಿ ಪರಿವರ್ತಿಸಬಾರದು ಎಂದು ಹೇಳಿದೆ.