ಸಂಗೀತ ಪರಿಕರ ಸುಟ್ಟು ಹಾಕಿದ ತಾಲಿಬಾನಿಗರು; ಕಣ್ಣೀರಿಟ್ಟ ಕಲಾವಿದ 16-01-2022 12:01PM IST / No Comments / Posted In: Latest News, Live News, International ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಳ್ಳುತ್ತಿದ್ದಂತೆ ಅಲ್ಲಿನ ಜನರ ಪರಿಸ್ಥಿತಿ ಕಷ್ಟಮಯವಾಗಿದೆ. ಅಲ್ಲಿ ಜನರಿಗೆ ಸ್ವಾತಂತ್ರ್ಯವೇ ಇಲ್ಲ ಎನ್ನುವಂತಾಗುತ್ತಿದೆ. ತಾಲಿಬಾನಿಗಳು ಎಲ್ಲದಕ್ಕೂ ಕಟ್ಟಪ್ಪಣೆ ಹೇರುತ್ತಿದ್ದಾರೆ. ಇದರಿಂದಾಗಿ ಜನರು ತಮ್ಮ ಹವ್ಯಾಸ ಹಾಗೂ ಅಭಿರುಚಿಗಳಿಂದಲೂ ದೂರ ಉಳಿಯುವಂತಾಗುತ್ತಿದೆ. ಸಂಗೀತಗಾರನೊಬ್ಬನ ಸಾಧನವೊಂದನ್ನು ತಾಲಿಬಾನಿಗಳು ಆತನ ಎದುರೇ ಸುಟ್ಟು ಹಾಕಿದ್ದು, ಸಂಗೀತಗಾರ ಕಣ್ಣೀರು ಹಾಕುತ್ತಿದ್ದರೆ, ಇದನ್ನು ಕಂಡು ತಾಲಿಬಾನಿಗಳು ನಗುತ್ತಿದ್ದಾರೆ. ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ವಿಡಿಯೋವನ್ನು ಪತ್ರಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಘಟನೆ ಜಜೈಅರುಬ್ ಜಿಲ್ಲೆಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಅಲ್ಲಿ ಈಗಾಗಲೇ ತಾಲಿಬಾನಿಗಳು ವಾಹನಗಳಲ್ಲಿ ಸಂಗೀತ ಹಾಕುವುದನ್ನು ನಿಷೇಧಿಸಿದ್ದಾರೆ. ಅಲ್ಲದೇ, ಸಭೆ- ಸಮಾರಂಭಗಳಲ್ಲಿ ಕೂಡ ಸಂಗೀತ ಹಾಕುವುನ್ನು ನಿಷೇಧಿಸಲಾಗಿದೆ. ಈಗಾಗಲೇ ತಾಲಿಬಾನಿಗಳಿಂದ ಹಲವು ಕ್ಷೇತ್ರಗಳಲ್ಲಿ ಕಟ್ಟುನಿಟ್ಟಿನ ನಿರ್ಧಾರ ಕೈಗೊಳ್ಳಲಾಗಿದ್ದು, ಜನರು ಪರಿತಪಿಸುವಂತಾಗಿದೆ. Video : Taliban burn musician's musical instrument as local musicians weeps. This incident happened in #ZazaiArub District #Paktia Province #Afghanistan . pic.twitter.com/zzCp0POeKl — Abdulhaq Omeri (@AbdulhaqOmeri) January 15, 2022