ಮನುಷ್ಯ ಮತ್ತು ಸಾಕುಪ್ರಾಣಿಯ ನಡುವಿನ ಸಂಬಂಧ ಬಹಳ ಪವಿತ್ರ ಹಾಗೂ ಆತ್ಮೀಯ. ಒಡಹುಟ್ಟಿದವರಂತೆ ಪ್ರಾಣಿಗಳು ತಮ್ಮನ್ನು ಸಾಕಿದ ಮಾಲೀಕರನ್ನು ಪ್ರೀತಿಸುತ್ತವೆ. ಭಾವನಾತ್ಮಕ ಬೆಸುಗೆ ಸಾವಿನವರೆಗೂ ದೃಢವಾಗಿರುತ್ತದೆ. ಆದರೆ, ಸರ್ಬಿಯಾದಲ್ಲಿ ಮಾಲಕಿ ಸಾವಿನ ನಂತರವೂ ಸಾಕು ಬೆಕ್ಕಿನ ಭಾವುಕ ಬೆಸುಗೆ ಮುಂದುವರಿದಿದೆ. ಕಳೆದ ನವೆಂಬರ್‌ನಲ್ಲಿ ಮೃತಪಟ್ಟ ಮಾಲಕಿಯ ಸಮಾಧಿಯ ಮೇಲೆ ಮೈಕೊರೆಯುವ ಚಳಿಯಲ್ಲಿ ಬೆಕ್ಕು ಹಾಗೆಯೇ 2 ತಿಂಗಳಿಂದ ಕುಳಿತಿದೆ.
ಅಂದಹಾಗೇ ಮಾಲಕಿಯ ಹೆಸರು ಶೇಖ್ ಮುಯಾಮರ್ ಝೂಕೊರ್ಲಿ ಎಂದು. ಆಕೆಯು ಬೆಕ್ಕನ್ನು, ಅದು ಮರಿ ಇದ್ದಾಗಿನಿಂದಲೂ ಮುದ್ದಿನಿಂದ ಸಾಕಿದ್ದಳು. ತಿಳಿಯಾದ ಚಾಕೊಲೇಟ್ ಬಣ್ಣ ಹಾಗೂ ಬಿಳಿ ಬಣ್ಣ ಮಿಶ್ರಿತವಾಗಿ ಕಾಣುವ ಬೆಕ್ಕು ಬಹಳ ಆಕರ್ಷಕವಾಗಿತ್ತು. ಮಾಲಕಿಗೆ ಬೆಕ್ಕಿನ ಸೌಂದರ್ಯದ ಬಗ್ಗೆ ಹಲವು ಬಾರಿ ಮೆಚ್ಚುಗೆ ಮಾತುಗಳು ಕೇಳಿಸುತ್ತಿದ್ದವು ಕೂಡ. ಬೆಕ್ಕಿಗೂ ಕೂಡ ಮಾಲಕಿ ಎಂದರೆ ಬಹಳ ಪ್ರೀತಿ ಮತ್ತು ಆತ್ಮೀಯ ಭಾವ.
CATನಲ್ಲಿ 4 ಬಾರಿ ನೂರಕ್ಕೆ ನೂರು ಅಂಕ ಪಡೆದ ಸಾಧಕ
2021ರ ನವೆಂಬರ್ 6ರಂದು ಮಾಲಕಿಯ ಸಾವು, ಇವರಿಬ್ಬರನ್ನು ಬೇರೆಯಾಗಿಸಿತು. ಮುಯಾಮರ್ ಭೌತಿಕವಾಗಿ ಕಾಣದಿದಿದ್ದರೂ, ಆಕೆಯನ್ನು ಹೂಳಲಾಗಿದ್ದ ಸಮಾಧಿಯ ಬಳಿ ಬಹುಶಃ ಮಾಲಕಿಯ ಯಾವ ಸಂಪರ್ಕ ಬೆಕ್ಕಿಗೆ ಸಾಧ್ಯವಾಗುತ್ತಿದೆಯೋ ಗೊತ್ತಿಲ್ಲ. ಎರಡು ತಿಂಗಳಿಂದ ಸಮಾಧಿಯ ಮೇಲೆಯೇ ಕೂತಿದೆ.
ಮಾಲಕಿಯ ತೊಡೆಯ ಮೇಲೆ ಕೂತಿರುವ ಅನುಭವ ಸಿಗುತ್ತಿದೆಯೋ ಏನೋ ಎಂದು ಫೋಟೊ ಸಮೇತ ಟ್ವಿಟರ್‌ನಲ್ಲಿ ಕತೆಯನ್ನು ಹಂಚಿಕೊಳ್ಳಲಾಗಿದೆ. ಬೆಕ್ಕಿನ ಪ್ರಾಮಾಣಿಕತೆಗೆ ಟ್ವೀಟಿಗರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಹುಶಃ ಸಮಾಧಿ ಮಾಡಲಾಗುವ ಪ್ರಕ್ರಿಯೆಯನ್ನು ಬೆಕ್ಕಿಗೆ ಜನರು ತೋರಿಸಿದ್ದಾರೆ. ಅದು ಹೂಳಲಾಗಿದೆ, ಮಾಲಕಿ ಭೂಮಿ ಒಳಗೆ ಇದ್ದಾಳೆ ಎಂದುಕೊಂಡಿದೆ. ಆಕೆಯನ್ನು ಮೇಲೇಳಲು ಬೆಕ್ಕು ಮುಗ್ಧವಾಗಿ ಆಗ್ರಹಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.