alex Certify ಮುಂಬರುವ ವಿತ್ತೀಯ ವರ್ಷದಲ್ಲಿ FMCG ಕಂಪನಿಗಳಿಗೆ ರಿಲೀಫ್: ಎಡಲ್ವೀಸ್ ವರದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂಬರುವ ವಿತ್ತೀಯ ವರ್ಷದಲ್ಲಿ FMCG ಕಂಪನಿಗಳಿಗೆ ರಿಲೀಫ್: ಎಡಲ್ವೀಸ್ ವರದಿ

ಕಚ್ಛಾ ವಸ್ತುಗಳ ಬೆಲೆಗಳಲ್ಲಿ ಮಂದಗತಿ ಏರಿಕೆ ಹಾಗೂ ಸತತವಾಗಿ ಬೆಲೆ ಏರಿಕೆ ಮಾಡುತ್ತಾ ಬಂದ ಕಾರಣ ಗ್ರಾಹಕ ಬಳಕೆ ಉತ್ಪನ್ನಗಳ ಉತ್ಪಾದಕರಿಗೆ ಮುಂಬರುವ ವಿತ್ತೀಯ ವರ್ಷದಲ್ಲಿ ಲಾಭಾಂಶದಲ್ಲಿ ಅಲ್ಪಮಟ್ಟದ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಎಡೆಲ್ವೀಸ್ ಸೆಕ್ಯೂರಿಟೀಸ್‌ ಬ್ರೋಕರೇಜ್ ವರದಿ ತಿಳಿಸಿದೆ.

BIG NEWS: ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಸಿಎಂ ಜೊತೆ ಚರ್ಚಿಸಿ ನಿರ್ಧಾರ

“ವಿತ್ತೀಯ ವರ್ಷ 23 ರಲ್ಲಿ, ಹಣದುಬ್ಬರದ ವಿರುದ್ಧ ಉತ್ಪನ್ನಗಳ ಬೆಲೆ ಏರಿಸುವ ಮೂಲಕ ಎಂದಿನ ಮಾರ್ಜಿನ್‌ಗಳಿಗೆ ನಾವು ಮರಳುತ್ತೇವೆ ಎಂಬ ಆಶಯವಿದೆ. ಸಾಮಾನ್ಯವಾಗಿ, ಬೆಲೆಗಳ ಹೆಚ್ಚಳದ ಸಂಬಂಧ ನಿರ್ಣಯ ತೆಗೆದುಕೊಂಡು, ಅನುಷ್ಠಾನಕ್ಕೆ ತಂದು, ವಿತರಕರಿಗೆ ಸಂಪರ್ಕ ಸಾಧಿಸಲು ಸಮಯದ ಅಗತ್ಯವಿರುವ ಕಾರಣ ಬೆಲೆಗಳು ಏರಿಕೆಯಾಗುತ್ತವೆ. ಆದರೆ ಕಚ್ಛಾ ವಸ್ತುಗಳ ಬೆಲೆಗಳು ಕಡಿಮೆಯಾದಂತೆ, ಅಂತಿಮ ಬೆಲೆಗಳಲ್ಲಿ ಸಣ್ಣ ಮಟ್ಟದಲ್ಲಿ ಮಾತ್ರವೇ ಇಳಿಕೆಯಾಗುತ್ತವೆ. ಇದರ ಫಲಿತಾಂಶವಾಗಿ, ದೊಡ್ಡ ಬಳಕೆದಾರ ಕಂಪನಿಗಳಿಗೆ ಮಾರ್ಜಿನ್‌ಗಳಲ್ಲಿ ಏರಿಕೆಯಾಗುವ ನಿರೀಕ್ಷೆ ನಮ್ಮದು,” ಎಂದು ಗ್ರಾಹಕ ಬಳಕೆ ಸರಕುಗಳ ಕ್ಷೇತ್ರದ ಮೇಲಿನ ಈ ವರದಿ ತಿಳಿಸುತ್ತದೆ.

ತ್ವರಿತವಾಗಿ ಮಾರಾಟವಾಗುವ ಗ್ರಾಹಕ ಬಳಕೆ ಉತ್ಪನ್ನಗಳು ಹೆಚ್ಚಿನ ಉತ್ಪಾದನಾ ವೆಚ್ಚದ ವಿರುದ್ಧ ಕಳೆದ ಕೆಲವು ತ್ರೈಮಾಸಿಕಗಳಿಂದ ಹೋರಾಟ ನಡೆಸುತ್ತಿವೆ. ಇದರ ಪರಿಣಾಮ ಸೋಪುಗಳು, ಬಿಸ್ಕಿಟ್‌ಗಳು, ಟೀ, ಡಿಟರ್ಜೆಂಟ್‌ಗಳ ಸೇರಿದಂತೆ ಅನೇಕ ವಸ್ತುಗಳ ಬೆಲೆಗಳಲ್ಲಿ ಏರಿಕೆ ಕಂಡು ಬಂದಿದೆ.

ಆದರೆ ಕಚ್ಛಾ ವಸ್ತುಗಳ ಬೆಲೆಗಳು ಮುಂದಿನ ವಿತ್ತೀಯ ವರ್ಷದಲ್ಲಿ ಕಡಿಮೆಯಾಗುವ ಸಾಧ್ಯತೆ ಇರುವ ಕಾರಣ ಬೆಲೆಗಳ ಮಾರ್ಜಿನ್‌ಗಳು ಸ್ಥಿರವಾಗಲಿವೆ ಎಂದು ಎಡಲ್ವೀಸ್ ಅಂದಾಜಿಸಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...