alex Certify ಟೆಸ್ಲಾ ಕಂಪನಿಯ 2 ಡಜನ್​ಗೂ ಅಧಿಕ ಕಾರು ಹ್ಯಾಕ್​ ಮಾಡಿದ 19ರ ಯುವಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೆಸ್ಲಾ ಕಂಪನಿಯ 2 ಡಜನ್​ಗೂ ಅಧಿಕ ಕಾರು ಹ್ಯಾಕ್​ ಮಾಡಿದ 19ರ ಯುವಕ..!

Teenage boy hacks multiple Tesla electric cars, claims to have “full control”19 ವರ್ಷ ಪ್ರಾಯದ ಯುವಕನೊಬ್ಬ ತಾನು ಟೆಸ್ಲಾ ಕೋಡ್​ಗಳಲ್ಲಿನ ದುರ್ಬಲತೆಯನ್ನು ಕಂಡು ಹಿಡಿದಿದ್ದಾಗಿ ಹೇಳಿಕೊಂಡಿದ್ದು ಈತ ಈಗಾಗಲೇ ಅನೇಕ ಟೆಸ್ಲಾ ಕಾರುಗಳ ಮೇಲೆ ನಿಯಂತ್ರಣ ಸಾಧಿಸಿದ್ದಾನೆ.

ಜರ್ಮನಿಯ ಯುವ ಹ್ಯಾಕರ್​ ಹಾಗೂ ಐಟಿ ಭದ್ರತಾ ತಜ್ಞನಾಗಿರುವ ಡೇವಿಡ್​ ಕೊಲಂಬೋ 13 ವಿವಿಧ ದೇಶಗಳ 2 ಡಜನ್​ಗೂ ಅಧಿಕ ಟೆಸ್ಲಾ ಕಾರುಗಳ ಸಂಪೂರ್ಣ ರಿಮೋಟ್​ ಕಂಟ್ರೋಲ್​​ ಬಗ್ಗೆ ಮಾಹಿತಿ ತಿಳಿದಿರುವುದಾಗಿ ಹೇಳಿದ್ದಾರೆ.

ಈ ರೀತಿ ಮಾಡಲು ತಾನು ಯಾವ ಸಾಫ್ಟ್​ವೇರ್​ ಬಳಕೆ ಮಾಡುತ್ತಿದ್ದೇನೆ ಎಂಬುದರ ಬಗ್ಗೆ ಡೇವಿಡ್​ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ಈ ದುರ್ಬಲತೆಗೆ ಟೆಸ್ಲಾವನ್ನು ದೂಷಿಸಬಾರದು ಎಂದು ಡೇವಿಡ್​ ಹೇಳಿದ್ದಾರೆ.

ಇದರಲ್ಲಿ ತಪ್ಪು ವಾಹನ ಮಾಲೀಕರದ್ದಾಗಿದೆ. ಟೆಸ್ಲಾ ಸಾಫ್ಟ್​ವೇರ್​ ಮೂಲ ಸೌಕರ್ಯಗಳಲ್ಲಿ ಯಾವುದೇ ರೀತಿಯ ದೋಷವಿಲ್ಲ ಎಂದು ಡೇವಿಡ್​ ಕೊಲಂಬೋ ಹೇಳಿದ್ದಾರೆ.

ಫುಲ್​ ರಿಮೋಟ್​ ಕಂಟ್ರೋಲ್​ ಕಾರು ಎಂದ ಮಾತ್ರಕ್ಕೆ ಸ್ಟೇರಿಂಗ್​, ಬ್ರೇಕ್​ಗಳ ಮೇಲೆ ಯಾವುದೇ ನಿಯಂತ್ರಣ ಇಟ್ಟುಕೊಳ್ಳದೇ ರಿಮೋಟ್​ ಕಾರನ್ನು ಓಡಿಸುತ್ತದೆ ಎಂದು ಅರ್ಥವಲ್ಲ. ವಾಹನ ಮಾಲೀಕರು ಸಹ ಕಾರನ್ನು ನಿಯಂತ್ರಣ ಮಾಡಬಹುದು ಎಂದು ಡೇವಿಡ್ ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...